ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಶಂಕ ಅಮಾನತು

Last Updated 26 ಮೇ 2020, 16:51 IST
ಅಕ್ಷರ ಗಾತ್ರ

ಕೊಲಂಬೊ: ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿರುವ ಶೆಹಾನ್‌ ಮಧುಶಂಕ ಅವರನ್ನು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಅಮಾನತು ಮಾಡಿದೆ.

‘ಮಧುಶಂಕ ಅವರನ್ನು ಅಮಾನತು ಮಾಡಲಾಗಿದೆ. ಇದು ತಕ್ಷಣದಿಂದಲೇ ಜಾರಿಯಾಗಲಿದೆ. ಇನ್ನು ಮುಂದೆ ಅವರು ಯಾವುದೇ ಬಗೆಯ ಕ್ರಿಕೆಟ್‌ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ’ ಎಂದು ಎಸ್‌ಎಲ್‌ಸಿ ಕಾರ್ಯದರ್ಶಿ ಮೋಹನ್‌ ಡಿಸಿಲ್ವಾ ಮಂಗಳವಾರ ಹೇಳಿದ್ದಾರೆ.

25 ವರ್ಷ ವಯಸ್ಸಿನ ಮಧುಶಂಕ ಅವರು 2018ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶ ಎದುರಿನ ಆ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಏಕದಿನ ಮಾದರಿಯಲ್ಲಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬೌಲರ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದರು.

ಪನ್ನಾಲ ನಗರದಲ್ಲಿ ಭಾನುವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಾಗ ಅವರ ಬಳಿ ಎರಡು ಗ್ರಾಮ್‌ನಷ್ಟು ಹೆರಾಯಿನ್‌ ಇತ್ತು. ಕುಲಿಯಾಪಿಟಿಯಾ ದಂಡಾಧಿಕಾರಿಗಳು, ಬಲಗೈ ಮಧ್ಯಮ ವೇಗದ ಬೌಲರ್‌ ಮಧುಶಂಕ ಅವರನ್ನು ಜೂನ್‌ ಎರಡರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧುಶಂಕ ಅವರು ಎರಡು ಟ್ವೆಂಟಿ–20 ಪಂದ್ಯಗಳಲ್ಲೂ ಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯಗಳಲ್ಲಿ ಅವರು ತಲಾ ಒಂದು ವಿಕೆಟ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT