ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸರಣಿ ಗೆದ್ದು ಇತಿಹಾಸ ಬರೆದ ಲಂಕಾ

Last Updated 23 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಪೋರ್ಟ್‌ ಎಲಿಜಬೆತ್‌, ದಕ್ಷಿಣ ಆಫ್ರಿಕಾ: ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ತಂಡದವರು ಶನಿವಾರ ಸೇಂಟ್‌ ಜಾರ್ಜ್‌ ಪಾರ್ಕ್‌ ಮೈದಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ದಾಖಲೆಗೆ ದಿಮುತ್‌ ಕರುಣಾರತ್ನೆ ಬಳಗ ಭಾಜನವಾಯಿತು.

ಗೆಲುವಿಗೆ 197ರನ್‌ಗಳ ಗುರಿ ಪಡೆದಿದ್ದ ಶ್ರೀಲಂಕಾ ತಂಡ ಶುಕ್ರವಾರಎರಡು ವಿಕೆಟ್‌ಗೆ 60ರನ್‌ ಗಳಿಸಿತ್ತು. ಮೂರನೇ ದಿನವಾದ ಶನಿವಾರ ಒಶಾಡ ಫರ್ನಾಂಡೊ (ಔಟಾಗದೆ 75; 106ಎ, 10ಬೌಂ, 2ಸಿ) ಮತ್ತು ಕುಶಾಲ್‌ ಮೆಂಡಿಸ್‌ (ಔಟಾಗದೆ 84; 110ಎ, 13ಬೌಂ) ಅಮೋಘ ಜೊತೆಯಾಟ ಆಡಿ ತಂಡವನ್ನು ಜಯದ ದಡ ಮುಟ್ಟಿಸಿದರು.

ಪಂದ್ಯದ ಆರಂಭದ ಎರಡು ದಿನಗಳಲ್ಲಿ ಒಟ್ಟು 31 ವಿಕೆಟ್‌ಗಳು ಪತನವಾಗಿದ್ದವು. ಹೀಗಾಗಿ ಮೂರನೇ ದಿನ ಕುಶಾಲ್‌ ಮತ್ತು ಒಶಾಡ ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು.

ಆತಿಥೇಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಈ ಜೋಡಿ ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 163ರನ್‌ ದಾಖಲಿಸಿ ಸಿಂಹಳೀಯ ನಾಡಿನ ತಂಡದ ಸಂಭ್ರಮಕ್ಕೆ ಕಾರಣವಾಯಿತು.

ಡರ್ಬನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಲಂಕಾ ತಂಡ ಒಂದು ವಿಕೆಟ್‌ನಿಂದ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 61.2 ಓವರ್‌ಗಳಲ್ಲಿ 222 ಮತ್ತು 44.3 ಓವರ್‌ಗಳಲ್ಲಿ 128 (ಏಡನ್‌ ಮಾರ್ಕರಮ್‌ 18, ಹಾಶೀಂ ಆಮ್ಲಾ 32, ಫಾಫ್‌ ಡು ಪ್ಲೆಸಿ ಔಟಾಗದೆ 50; ಸುರಂಗ ಲಕ್ಮಲ್‌ 39ಕ್ಕೆ4, ವಿಶ್ವ ಫರ್ನಾಂಡೊ 32ಕ್ಕೆ1, ಕಸುನ್‌ ರಜಿತಾ 20ಕ್ಕೆ2, ಧನಂಜಯ ಡಿಸಿಲ್ವಾ 36ಕ್ಕೆ3).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌: 37.4 ಓವರ್‌ಗಳಲ್ಲಿ 154 ಮತ್ತು 45.4 ಓವರ್‌ಗಳಲ್ಲಿ 2 ವಿಕೆಟ್‌ಗೆ 197 (ದಿಮುತ್‌ ಕರುಣಾರತ್ನೆ 19, ಲಾಹಿರು ತಿರಿಮಾನ್ನೆ 10, ಒಶಾಡ ಫರ್ನಾಂಡೊ ಔಟಾಗದೆ 75, ಕುಶಾಲ್‌ ಮೆಂಡಿಸ್‌ ಔಟಾಗದೆ 84; ಕಗಿಸೊ ರಬಾಡ 53ಕ್ಕೆ1, ದುವಾನ್‌ ಒಲಿವಿಯರ್‌ 46ಕ್ಕೆ1).

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 8 ವಿಕೆಟ್‌ ಜಯ ಹಾಗೂ 2–0ರಿಂದ ಸರಣಿ ಕೈವಶ.

ಪಂದ್ಯ ಶ್ರೇಷ್ಠ: ಕುಶಾಲ್‌ ಮೆಂಡಿಸ್‌.

ಸರಣಿ ಶ್ರೇಷ್ಠ: ಕುಶಾಲ್‌ ಪೆರೇರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT