ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಇಂಡಿಯಾಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಪ್ರಸಾರ ಹಕ್ಕು

Last Updated 25 ನವೆಂಬರ್ 2020, 12:34 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ (ಸಿಎಸ್‌ಎ) ಪ್ರಸಾರ ಹಕ್ಕುಗಳನ್ನು ಸ್ಟಾರ್‌ ಇಂಡಿಯಾ ವಾಹಿನಿ ಪಡೆದುಕೊಂಡಿದೆ. ಸಿಎಸ್‌ಎಯೊಂದಿಗೆ 2023–24ರವರೆಗೆ ಅದು ಒಪ್ಪಂದ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ–ಭಾರತ ತಂಡಗಳ ನಡುವಣ 20 ದ್ವಿಪಕ್ಷೀಯ ಪಂದ್ಯಗಳು ಸೇರಿದಂತೆ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಾದ್ಯಂತ ನಡೆಯುವ ಪಂದ್ಯಗಳನ್ನು ಸ್ಟಾರ್‌ ಇಂಡಿಯಾ ಪ್ರಸಾರ ಮಾಡಲಿದೆ.

‘ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಶುಕ್ರವಾರದಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಸರಣಿಯ ಮೂಲಕ ಒಪ್ಪಂದ ಜಾರಿಗೆ ಬರಲಿದೆ‘ ಎಂದು ಪ್ರಕಟಣೆ ತಿಳಿಸಿದೆ.

ಭವಿಷ್ಯದ ಪ್ರವಾಸದ ಯೋಜನೆಗಳ ಪ್ರಕಾರ ದಕ್ಷಿಣ ಆಫ್ರಿಕಾ ತಂಡವು, ಪ್ರಮುಖ ತಂಡಗಳಾದ ಭಾರತ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 59 ಪಂದ್ಯಗಳನ್ನು ಆಡಲಿದೆ.

ಒಪ್ಪಂದದ ಅವಧಿಯಲ್ಲಿ ಭಾರತ ತಂಡ ಮೂರು ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. 2021–22ರ ಸಾಲಿನ ಮೊದಲ ಪ್ರವಾಸದಲ್ಲಿ ತಲಾ ಮೂರು ಟೆಸ್ಟ್ ಹಾಗೂ ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

‘ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯೊಂದಿಗೆ ಸಹಭಾಗಿತ್ವ ಹೊಂದುತ್ತಿರುವುದು ಖುಷಿಯ ವಿಚಾರ. ಆ ತಂಡದಲ್ಲಿ ಶ್ರೇಷ್ಠ ಆಟಗಾರರು ಇದ್ದಾರೆ. ವಿಶ್ವದ ಉತ್ತಮ ತಂಡಗಳಲ್ಲಿ‌ ಒಂದಾದ ದಕ್ಷಿಣ ಆಫ್ರಿಕಾ ಆಡುವ ಪಂದ್ಯಗಳನ್ನು 2024ರವರೆಗೆ ಪ್ರಸಾರ ಮಾಡಲಿದ್ದೇವೆ‘ ಎಂದು ಸ್ಟಾರ್‌ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೋಗ್‌ ಗುಪ್ತಾ ಹೇಳಿದ್ದಾರೆ.

ಭಾರತ ತಂಡ ಹೊರತುಪಡಿಸಿದ ದ್ವಿಪಕ್ಷೀಯ ಸರಣಿಯ ಪಂದ್ಯಗಳನ್ನು, ಇಂಗ್ಲಿಷ್‌ನೊಂದಿಗೆ ಹಿಂದಿ ಭಾಷೆಯಲ್ಲೂ ಸ್ಟಾರ್‌ ಇಂಡಿಯಾ ಮೊದಲ ಬಾರಿ ಪ್ರಸಾರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT