ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್: ಗ್ರೇಗ್ ಚಾಪೆಲ್ ದಾಖಲೆ ಮುರಿದ ಸ್ಮಿತ್

Last Updated 26 ಡಿಸೆಂಬರ್ 2019, 10:25 IST
ಅಕ್ಷರ ಗಾತ್ರ

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್‌ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಆಸಿಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಹತ್ತನೇ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದರು.

ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನ ಸ್ಮಿತ್‌ ಔಟಾಗದೆ 77 ರನ್‌ ಗಳಸಿದ್ದಾರೆ. ಇದುವರೆಗೆ ಒಟ್ಟು72 ಟೆಸ್ಟ್‌ ಪಂದ್ಯಗಳ 129 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಸ್ಮಿತ್‌ 7,149 ರನ್ ಬಾರಿಸಿದ್ದಾರೆ. ಆ ಮೂಲಕ ಟೆಸ್ಟ್‌ನಲ್ಲಿ ಆಸಿಸ್‌ ಪರ ಹೆಚ್ಚು ರನ್‌ ಗಳಿಸಿದ ಹತ್ತನೇ ಬ್ಯಾಟ್ಸ್‌ಮನ್‌ ಎನಿಸಿದರು.

87 ಪಂದ್ಯಗಳ 157 ಇನಿಂಗ್ಸ್‌ಗಳಿಂದ 7,110 ರನ್ ಗಳಿಸಿದ್ದ ಗ್ರೇ‍ಗ್‌ ಚಾಪೆಲ್‌ ಇದುವರೆಗೆ ಹತ್ತನೇ ಸ್ಥಾನದಲ್ಲಿದ್ದರು.‌

ಸದ್ಯ ಆಸ್ಟ್ರೇಲಿಯಾ, ಮಾರ್ನಸ್‌ ಲಾಬುಶೇನ್‌ (63) ಹಾಗೂ ಸ್ಮಿತ್‌ ಅವರ ಅರ್ಧಶತಕಗಳ ನೆರವಿನಿಂದಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 90 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 257 ರನ್‌ ಕಲೆಹಾಕಿದ್ದು, ಉತ್ತಮ ಮೊತ್ತದತ್ತ ಮುನ್ನಡೆದಿದೆ.

ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಇರುವುದು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿ. ಸಚಿನ್ 200 ಟೆಸ್ಟ್‌ ಪಂದ್ಯಗಳ 329 ಇನಿಂಗ್ಸ್‌ಗಳಿಂದ 15,921 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಆಸಿಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಇದ್ದಾರೆ. ಅವರು 168 ಪಂದ್ಯಗಳ 287 ಇನಿಂಗ್ಸ್‌ಗಳಿಂದ 13,378 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT