ಭಾನುವಾರ, ಅಕ್ಟೋಬರ್ 25, 2020
25 °C

ಐಪಿಎಲ್‌ ಆಡಲು ಇಂದು ಯುಎಇಗೆ ಬೆನ್ ಸ್ಟೋಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ : ವಿಶ್ವದ ಪ್ರಮುಖ ಆಲ್‌ರೌಂಡರ್ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಲು ಭಾನುವಾರ ಯುಎಇಗೆ ತಲುಪಲಿದ್ದಾರೆ. ಆರು ದಿನಗಳ ಪ್ರತ್ಯೇಕವಾಸದ ಬಳಿಕ ಅವರು ತಮ್ಮ ತಂಡ ರಾಜಸ್ಥಾನ ರಾಯಲ್ಸ್ಅನ್ನು ಸೇರಿಕೊಳ್ಳಲಿದ್ದಾರೆ.

ಅನಾರೋಗ್ಯಪೀಡಿತರಾಗಿರುವ ತಂದೆಯ ಜೊತೆ ಇರುವುದಕ್ಕಾಗಿ ಸ್ಟೋಕ್ಸ್ ನ್ಯೂಜಿಲೆಂಡ್‌ಗೆ ತೆರಳಿದ್ದರು. ಹೀಗಾಗಿ ಮೊದಲ ಕೆಲವು ಪಂದ್ಯಗಳಲ್ಲಿ ಅವರು ಆಡಿಲ್ಲ.

ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ತಂದೆಯ ಜೊತೆ ಇರಲು ಸ್ಟೋಕ್ಸ್‌, ಪಾಕಿಸ್ತಾನ ವಿರುದ್ಧ ಆಗಸ್ಟ್‌ನಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯನ್ನು ತ್ಯಜಿಸಿ ಕ್ರೈಸ್ಟ್ಚಚರ್ಚ್‌ಗೆ ತೆರಳಿದ್ದರು.

‘ಸ್ಟೋಕ್ಸ್ ಭಾನುವಾರ ಯುಎಇ ತಲುಪಲಿದ್ದಾರೆ. ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ ಬಳಿಕ ತಂಡದ ಶಿಬಿರವನ್ನು ಸೇರಲಿದ್ದಾರೆ‘ ಎಂದು ರಾಜಸ್ಥಾನ ರಾಯಲ್ಸ್ ತಂಡದ ಮೂಲಗಳು ತಿಳಿಸಿವೆ.

ಸ್ಟೋಕ್ಸ್ ಯುಎಇಗೆ ಬರುತ್ತಿರುವ ಚಿತ್ರವನ್ನೂ ಫ್ರ್ಯಾಂಚೈಸ್ ತನ್ನ‌ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು