ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್ ಟಿ20| ಭಾರತಕ್ಕೆ ಮಲೇಷ್ಯಾ ಸವಾಲು: ಲಯ ಕಂಡುಕೊಳ್ಳುವರೇ ಶಫಾಲಿ?

ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್‌: ಭಾರತಕ್ಕೆ ಮಲೇಷ್ಯಾ ಸವಾಲು
Last Updated 2 ಅಕ್ಟೋಬರ್ 2022, 13:51 IST
ಅಕ್ಷರ ಗಾತ್ರ

ಸಿಲ್ಹೆಟ್‌, ಬಾಂಗ್ಲಾದೇಶ: ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು, ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಸೋಮವಾರ ಮಲೇಷ್ಯಾ ತಂಡಕ್ಕೆ ಮುಖಾಮುಖಿಯಾಗಲಿದೆ.

ಜೆಮಿಮಾ ರಾಡ್ರಿಗಸ್ ಅವರ ಬ್ಯಾಟಿಂಗ್ ನೆರವಿನಿಂದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ, ಮೊದಲ ಹಣಾಹಣಿಯಲ್ಲಿ ಶ್ರೀಲಂಕಾ ತಂಡಕ್ಕೆ 41 ರನ್‌ಗಳಿಂದ ಸೋಲುಣಿಸಿತ್ತು. ಅಷ್ಟೇನೂ ಬಲಿಷ್ಠವಲ್ಲದ ಮಲೇಷ್ಯಾ ಎದುರಿನ ಹಣಾಹಣಿಯನ್ನು ತಂಡವು ಟಿ20 ವಿಶ್ವಕಪ್ ಟೂರ್ನಿಗೆ ಅಭ್ಯಾಸವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ತಂಡದ ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ರನ್‌ ಗಳಿಕೆಗೆ ಪ‍ರದಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಅವಕಾಶ ಅವರಿಗಿದೆ. 18 ವರ್ಷದ ಶಫಾಲಿ ಕಳೆದ ವರ್ಷದ ಮಾರ್ಚ್‌ನಿಂದ ಟಿ20 ಮಾದರಿಯಲ್ಲಿ ಒಂದೂ ಅರ್ಧಶತಕ ಗಳಿಸಿಲ್ಲ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಂದೆರಡು ಉತ್ತಮ ಇನಿಂಗ್ಸ್ ಆಡಿದ್ದರು.

ಶಫಾಲಿ ಅವರು ಬ್ಯಾಟಿಂಗ್‌ನಲ್ಲಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಉತ್ತಮ ಲಯದಲ್ಲಿರುವುದು ತಂಡದ ಬಲ ಹೆಚ್ಚಿಸಿದೆ. ಕಿರಣ್ ನವಗೀರ್ ಸೇರಿದಂತೆ ಹೊಸ ಆಟಗಾರ್ತಿಯರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಇಲ್ಲಿಯ ಪಿಚ್‌ನಲ್ಲಿ ಚೆಂಡು ಸ್ವಲ್ಪ ಪ್ರಮಾಣದಲ್ಲಿ ಬೌನ್ಸ್ ಆಗುತ್ತಿದ್ದು, ಭಾರತ ತಂಡವು ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆಯಿದೆ.

ತಾನಾಡಿದ ಮೊದಲ ಪಂದ್ಯದಲ್ಲಿ ಮಲೇಷ್ಯಾ ತಂಡವು ಪಾಕಿಸ್ತಾನ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಗೆಲುವಿನ ತವಕದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 1 ಗಂಟೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT