ರಜನಿಕಾಂತ್ ಅವರ ಜನಪ್ರಿಯ ಚಲನಚಿತ್ರಗಳ ಹಾಡುಗಳನ್ನು ಪ್ರೊಮೋದಲ್ಲಿ ಬಳಸುವದನ್ನು ನಿರ್ಬಂಧಿಸುವಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಸನ್ ನೆಟ್ವರ್ಕ್ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ಮೊರೆಹೋಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಪ್ರಮುಖ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ), ತಮ್ಮ ತಂಡದ ಪ್ರಮುಖ ಆಟಗಾರರಾದ ಎಂ.ಎಸ್.ಧೋನಿ, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕವಾಡ್ ರಂತಹ ತಾರಾ ಆಟಗಾರರಿಗೆ ರಜನಿಕಾಂತ್ ಅವರ ಪ್ರಮುಖ ಚಿತ್ರಗಳಾದ ಜೈಲರ್, ಕೂಲಿ ಮತ್ತು ಜೈಲರ್–2 ಹಾಡುಗಳನ್ನು ಬಳಸಿಕೊಂಡು ಪ್ರೊಮೋ ಹಾಗೂ ಫೊಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಸನ್ ನೆಟ್ವರ್ಕ್ ಸಂಸ್ಥೆಯು ಇದರ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ಅವರು ಶುಕ್ರವಾರ ದೂರದರ್ಶನ ಜಾಲದ ಮಧ್ಯಂತರ ತಡೆಯಾಜ್ಞೆ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್ 2026 ರಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಹಾಗೂ ಅಮೋಘ ಲಯದಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕ ಚೆನ್ನೈ ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಸಿಎಸ್ಕೆ ಸಾಮಾಜಿಕ ಮಾಧ್ಯಮ ತಂಡವು ಜೈಲರ್ ಚಿತ್ರದ ಜನಪ್ರಿಯ ‘ಹುಕುಮ್’ ಹಾಡನ್ನು ವಿಡಿಯೊಗೆ ಸೇರಿಸಿದೆ ಎಂದು ಆರೋಪಿಸಿದೆ. ಸನ್ ಟಿವಿ ನೆಟ್ವರ್ಕ್ ಬ್ಯಾನರ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಸಿನಿಮಾವನ್ನು ನಿರ್ಮಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.