ಹಂಡ್ರೆಡ್ ಲೀಗ್ಗಾಗಿ ನಡೆದ ಆಟಗಾರರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ ಒಡತಿ ಕಾವ್ಯಾ ಮಾರನ್ ಅವರು ಪಾಕಿಸ್ತಾನ ತಂಡದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಹಂಡ್ರೆಡ್ ಲೀಗ್ನ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹೋದರ ತಂಡವಾಗಿರುವ ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದೆ. ಇದಾದ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ಐಪಿಎಲ್ 2026ರಲ್ಲಿ ಎಸ್ಆರ್ಎಚ್ ಅನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಅಬ್ರಾರ್ ಖರೀದಿ ವಿಚಾರವಾಗಿ ಭಾರತ ಕ್ರಿಕೆಟ್ನ ದಂತಕತೆ ಸುನಿಲ್ ಗವಾಸ್ಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ ಸಹಜ ಎಂದಿದ್ದಾರೆ.

2008ರ ಮುಂಬೈ ದಾಳಿಯ ಬಳಿಕ ಭಾರತೀಯ ಫ್ರಾಂಚೈಸಿ ಮಾಲೀಕರು ಐಪಿಎಲ್ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ನಡೆಯುವ ಇತರೆ ಟಿ–20 ಲೀಗ್ಗಳಲ್ಲಿಯೂ ಪಾಕಿಸ್ತಾನದ ಆಟಗಾರರನ್ನು ಪರಿಗಣಿಸುತ್ತಿಲ್ಲ. ಆದರೆ, ಹಂಡ್ರೆಡ್ ಲೀಗ್ ಹರಾಜಿಗೆ ಮುಂಚಿತವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ECB) ಆಟಗಾರರನ್ನು ರಾಷ್ಟ್ರೀಯತೆಯ ಆಧಾರದಲ್ಲಿ ಆಯ್ಕೆ ಮಾಡುವುದಕ್ಕಿಂತ ಪ್ರತಿಭೆಯನ್ನು ಗೌರವಿಸಬೇಕು ಎಂದು ಕರೆ ನೀಡಿದ್ದರು.

ದಿ ಹಂಡ್ರೆಡ್ ಲೀಗ್ನಲ್ಲಿ ಸನ್ರೈಸರ್ಸ್ ಲೀಡ್ ಫ್ರಾಂಚೈಸಿ ಅಬ್ರಾರ್ ಅವರನ್ನು ಖರೀದಿಸಿರುವುದಕ್ಕೆ ಪ್ರತಿಕ್ರಿಯೆ ನಿಡಿರುವ ಸುನಿಲ್ ಗವಾಸ್ಕರ್ ‘ದಿ ಹಂಡ್ರೆಡ್ ಲೀಗ್ಗಾಗಿ ಭಾರತೀಯ ಮಾಲೀಕತ್ವದ ಫ್ರಾಂಚೈಸಿ ಪಾಕಿಸ್ತಾನದ ಆಟಗಾರನನ್ನು ಖರೀದಿಸಿರುವುದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೋರುತ್ತಿರುವ ಆಕ್ರೋಶದಲ್ಲಿ ಅಚ್ಚರಿ ಏನು ಇಲ್ಲ. 2008ರ ನವೆಂಬರ್ನಲ್ಲಿ ನಡೆದ ಮುಂಬೈ ದಾಳಿಯ ನಂತರ, ಭಾರತೀಯ ಪ್ರಾಂಚೈಸಿಗಳು ಐಪಿಎಲ್ನಿಂದ ಪಾಕಿಸ್ತಾನದ ಆಟಗಾರರನ್ನು ದೂರ ಇಟ್ಟಿದ್ದಾರೆ’.

‘ಈಗ ಹಂಡ್ರೆಡ್ ಲೀಗ್ನಲ್ಲಿ ಭಾರತೀಯ ಮೂಲದ ಫ್ರಾಂಚೈಸಿ ಒಂದು ಪಾಕಿಸ್ತಾನದ ಆಟಗಾರನಿಗೆ ಕೋಟ್ಯಾಂತರ ರೂಪಾಯಿ ಹಣ ನೀಡಿರುವುದರಿಂದ, ತಡವಾಗಿಯಾದರೂ ಆತ ಪಾವತಿಸುವ ತೆರಿಗೆ ಹಣದಿಂದ ಪಾಕಿಸ್ತಾನದವರು ಶಸ್ತ್ರಾಸ್ತ್ರ ಖರೀದಿಗೆ ಬಳಕೆ ಮಾಡುವುದರಿಂದ, ಪರೋಕ್ಷವಾಗಿ ಭಾರತೀಯ ಸೈನಿಕರು ಮತ್ತು ನಾಗರಿಕರ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಆಟಗಾರರು ಮತ್ತು ಕಲಾವಿದರನ್ನು ಭಾರತದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ’ ಎಂದು ಗವಾಸ್ಕರ್ ಮಿಡ್-ಡೇಗೆ ಬರೆದ ಅಂಕಣದಲ್ಲಿ ತಿಳಿಸಿದ್ದಾರೆ.
.ಕಾವ್ಯಾ ಮಾರನ್ ಮಾಲೀಕತ್ವದ ತಂಡಕ್ಕೆ ಆಯ್ಕೆಯಾದ ಪಾಕ್ನ ಅಬ್ರಾರ್ ಅಹ್ಮದ್.ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ!.
ಹರಾಜಿನ ಬಳಿಕ ಮಾತನಾಡಿದ್ದ ಸನ್ರೈಸರ್ಸ್ ಲೀಡ್ಸ್ ತಂಡದ ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೋರಿ, ಹರಾಜಿನಲ್ಲಿ ನಾವು ಆದಿಲ್ ರಶೀದ್ ಅವರನ್ನು ಖರೀದಿಸಲು ಬಯಸಿದ್ದೆವು. ಅವರು ಸಿಗದಿದ್ದಕ್ಕೆ, ಅಬ್ರಾರ್ ಅವರನ್ನು ಆಯ್ಕೆ ಮಾಡಬೇಕಾಯಿತು ಎಂದು ಅವರು ಹೇಳಿದ್ದರು.

ವೆಟ್ಟೋರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗವಾಸ್ಕರ್, ‘ವೆಟ್ಟೋರಿಯವರಿಗೆ ಭಾರತ-ಪಾಕಿಸ್ತಾನದ ವಿಚಾರವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ. ಆದರೆ, ಭಾರತೀಯ ಮಾಲೀಕರಿಗೆ ಇದರ ಅರಿವು ಇರಬೇಕಿತ್ತು’ ಎಂದಿದ್ದಾರೆ.

‘ವಿದೇಶಿ ಲೀಗ್ ಆಗಿರಲಿ, ಭಾರತದ ಲೀಗ್ ಆಗಿರಲಿ ಅದರ ಮಾಲೀಕರು ಭಾರತೀಯರಾಗಿದ್ದರೆ, ಪಾಕಿಸ್ತಾನದ ಆಟಗಾರನನ್ನು ಖರೀದಿಸುವುದರಿಂದ ಅವರು ಭಾರತೀಯರ ಸಾವು ನೋವುಗಳಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರ್ಥ. ಇದು ಡೇನಿಯಲ್ ವೆಟ್ಟೋರಿ ಅವರಿಗೆ ಸಾಮಾನ್ಯ ವಿಚಾರ ಆಗಿರಬಹುದು. ಆದರೆ, ಭಾರತೀಯರಿಗೆ ಅಲ್ಲ. ಪಂದ್ಯಾವಳಿ ಗೆಲ್ಲುವುದು ಭಾರತೀಯರ ಜೀವನಕ್ಕಿಂತ ಹೆಚ್ಚು ಮುಖ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.