ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆ: ಸುನೀಲ್‌ ಜೋಶಿ ಸೇರಿ 20 ಮಂದಿಗೆ ಸಂದರ್ಶನ

7

ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆ: ಸುನೀಲ್‌ ಜೋಶಿ ಸೇರಿ 20 ಮಂದಿಗೆ ಸಂದರ್ಶನ

Published:
Updated:

ನವದೆಹಲಿ: ಕರ್ನಾಟಕದ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ ಅವರು ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಶುಕ್ರವಾರ ಮುಂಬೈನಲ್ಲಿ  ನಡೆಯಲಿರುವ ಸಂದರ್ಶನಕ್ಕೆ ಅವರು ಹಾಜರಾಗಲಿದ್ದಾರೆ.

ಒಟ್ಟು 20 ಆಭ್ಯರ್ಥಿಗಳ ಸಂದರ್ಶನ ನಡೆಯಲಿದೆ. ಅದರಲ್ಲಿ ಹಿರಿಯ ಕ್ರಿಕೆಟಿಗರಾದ ರಮೇಶ್ ಪೋವಾರ್, ಅಜಯ್ ರಾತ್ರಾ, ವಿಜಯ್ ಯಾದವ್, ಹಿರಿಯ ಆಟಗಾರ್ತಿ ಮಮತಾ ಮಾಬೆನ್, ಸುಮನ್ ಶರ್ಮಾ, ಪೂರ್ಣಿಮಾ ರಾವ್, ನ್ಯೂಜಿಲೆಂಡ್‌ ಆಟಗಾರ್ತಿ ಮರಿಯಾ ಫಾಹೆ  ಸಂದರ್ಶನಕ್ಕೆ ಹಾಜರಾಗಲಿರುವ ಪ್ರಮುಖರು.

ಇದರಲ್ಲಿ ಜೋಶಿ ಮತ್ತು ಪೊವಾರ್ ಅವರಿಗೆ ಹೆಚ್ಚು ಆದ್ಯತೆ ಸಿಗುವ ನಿರೀಕ್ಷೆ ಇದೆ. ಎಡಗೈ ಸ್ಪಿನ್ನರ್ ಆಗಿದ್ದ ಗದುಗಿನ ಜೋಶಿ ಅವರು 15 ಟೆಸ್ಟ್, 69 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು, 160 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು. ನಿವೃತ್ತಿಯ ನಂತರ ಜಮ್ಮು–ಕಾಶ್ಮೀರ, ಅಸ್ಸಾಂ ಮತ್ತು ಹೈದರಾಬಾದ್ ರಣಜಿ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಮುಂಬೈನ ರಮೇಶ್ ಪೊವಾರ್ ಅವರು ಎರಡು ಟೆಸ್ಟ್‌, 31 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 148 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಈಚೆಗೆ ಮಹಿಳಾ ತಂಡದ ಕೋಚ್ ಹುದ್ದೆಗೆ ತುಷಾರ್ ಅರೋಠೆ ರಾಜೀನಾಮೆ ನೀಡಿದ ನಂತರ ಪೊವಾರ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ತುಷಾರ್ ಅವರು ಒಂದು ವರ್ಷ ಕೋಚ್ ಆಗಿದ್ದರು. ಈಚೆಗೆ ತಂಡದ ಹಿರಿಯ ಆಟಗಾರ್ತಿಯರು ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಆದ್ದರಿಂದ ಅವರು ರಾಜೀನಾಮೆ ನೀಡಿದ್ದರು.

ಕ್ರಿಕೆಟ್ ಆಡಳಿತ ಸಮಿತಿ (ಸಿಒಎ)  ಸದಸ್ಯೆ ಡಯಾನಾ ಎಡುಲ್ಜಿ, ಬಿಸಿಸಿಐ ಕ್ರಿಕೆಟ್ ಆಪರೇಷನ್ಸ್‌ ಮುಖ್ಯ ವ್ಯವಸ್ಥಾಪಕ ಸಬಾ ಕರೀಂ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ಸಂದರ್ಶನ ನಡೆಸಲಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !