ಚೆನ್ನೈ (ಪಿಟಿಐ): ವೇಗ ಮತ್ತು ಲೆಂಗ್ತ್ ಮೇಲೆ ನಿಯಂತ್ರಣ ಸಾಧಿಸಿದ ಪ್ಯಾಟ್ ಕಮಿನ್ಸ್ 28 ರನ್ಗಳಿಗೆ 3 ಪ್ರಮುಖ ವಿಕೆಟ್ಗಳನ್ನು ಪಡೆದರು. ನಂತರ ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ಇದರಿಂದಾಗಿ ಸನ್ರೈಸರ್ಸ್ ತಂಡವು ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ಗಳ ಹೋರಾಟದ ಜಯ ಸಾಧಿಸಿ, ಪ್ಲೇ ಆಫ್ಗೆ ಲಗ್ಗೆಯಿಟ್ಟಿತು.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (18 ಅಂಕ) ತಂಡ ಈ ಮೊದಲೇ ಪ್ಲೇ ಆಫ್ಗೆ ಮುನ್ನಡೆದಿದೆ. ತಲಾ 16 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಮತ್ತು ಸನ್ರೈಸರ್ಸ್ ತಂಡಗಳೂ ಮುಂದಿನ ಹಂತಕ್ಕೆ ಅರ್ಹತೆ ಪಡೆದವು. ಉಳಿದ ಒಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಪೈಪೋಟಿಯಿದೆ.

ಚೆಪಾಕ್ ಕ್ರೀಡಾಂಗಣದಲ್ಲಿ ‘ದಕ್ಷಿಣ ಡರ್ಬಿ’ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕವಾಡ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕ ಕಮಿನ್ಸ್ ಅವರ ಪರಿಣಾಮಕಾರಿ ದಾಳಿಯ ಹೊರತಾಗಿಯೂ ಆತಿಥೇಯ ತಂಡವು 7 ವಿಕೆಟ್ಗೆ 180 ರನ್ ಗಳಿಸಿತು. ಡೆವಾಲ್ಡ್ ಬ್ರೆವಿಸ್ (44, 27 ಎಸೆತ) ಮತ್ತು ಕಾರ್ತಿಕ್ ಶರ್ಮಾ (32;19ಎ) ಉಪಯುಕ್ತ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡವು ಇಶಾನ್ (70;47ಎ, 4x7, 6x3) ಮತ್ತು ಕ್ಲಾಸೆನ್ ಅವರ ಆಟದ ಬಲದಿಂದ ಆರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್ಗೆ 181 ರನ್ ಗಳಿಸಿ ಸಂಭ್ರಮಿಸಿತು. ನಿರ್ಣಾಯಕ ಪಂದ್ಯದಲ್ಲಿ ಸೋತ ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ಒತ್ತಡಕ್ಕೆ ಸಿಲುಕಿತು.

ಸನ್ರೈಸರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ (6) ಮೂರನೇ ಓವರ್ನಲ್ಲಿ ಮುಕೇಶ್ ಚೌಧರಿ ಅವರಿಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ (26;21ಎ) ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 56 ರನ್ಗೆ ಎರಡು ವಿಕೆಟ್ ಕಳೆದುಕೊಂಡು ತಂಡವು ಒತ್ತಡ ದಲ್ಲಿದ್ದಾಗ ಇಶಾನ್ ಮತ್ತು ಕ್ಲಾಸೆನ್ ಎಚ್ಚರಿಕೆಯ ಆಟವಾಡಿದರು. ಮೂರನೇ ವಿಕೆಟ್ಗೆ ಅಮೂಲ್ಯ 75 (41ಎ) ರನ್ ಸೇರಿಸಿದರು. ಆದರೆ, ಅರ್ಧಶತಕದ ಹೊಸ್ತಿಲಲ್ಲಿ ಕ್ಲಾಸೆನ್ ಎಡವಿದರು.

ಹಾಲಿ ಆವೃತ್ತಿಯಲ್ಲಿ ಐದನೇ ಅರ್ಧಶತಕ ದಾಖಲಿಸಿದ ಇಶಾನ್ ಅವರು ನಿತೀಶ್ ಕುಮಾರ್ ರೆಡ್ಡಿ (11) ಮತ್ತು ಸಲೀಲ್ ಅರೋರಾ (ಔಟಾಗದೇ 10) ಅವರೊಂದಿಗೆ ಉಪಯುಕ್ತ ಜೊತೆಯಾಟದಲ್ಲಿ ಪಾಲ್ಗೊಂಡು, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜಯಕ್ಕೆ 6 ರನ್ ಬೇಕಿದ್ದಾಗ ಇಶಾನ್ ಔಟಾದರು. ಕನ್ನಡಿಗ ಆರ್.ಸ್ಮರಣ್ (ಔಟಾಗದೇ 5) ಗೆಲುವಿನ ಬೌಂಡರಿ ಬಾರಿಸಿದರು.

ಇದಕ್ಕೂ ಮೊದಲು ಸಂಜು ಸ್ಯಾಮ್ಸನ್ (27, 13 ಎಸೆತ) ಚೆನ್ನೈ ತಂಡಕ್ಕೆ ಮಿಂಚಿನ ಆರಂಭ ನೀಡಿದರು. ನಿತೀಶ್ ಕುಮಾರ್ ರೆಡ್ಡಿ ಮಾಡಿದ ಮೊದಲ ಓವರಿನಲ್ಲೇ ಒಂದು ಸಿಕ್ಸರ್, ಎರಡು ಬೌಂಡರಿಗಳು ಸೇರಿದಂತೆ 17 ರನ್ ಬಾಚಿದರು. ಪ್ರಫುಲ್ ಹಿಂಗೆ ಮಾಡಿದ ಮುಂದಿನ ಓವರಿನಲ್ಲಿ ಹ್ಯಾಟ್ರಿಕ್ ಬೌಂಡರಿಗಳನ್ನು ಸಿಡಿಸಿದರು.

ಆದರೆ ಮೂರನೇ ಓವರಿನಲ್ಲಿ ದಾಳಿಗಿಳಿದ ಕಮಿನ್ಸ್, ಸಂಜು ವಿಕೆಟ್ ಪಡೆದರು. ಬಿರುಸಿನ ಡ್ರೈವ್ ಯತ್ನದಲ್ಲಿ ಚೆಂಡು ವಿಕೆಟ್ ಕೀಪರ್ ಇಶಾನ್ ಕಿಶನ್ ಕೈಸೇರಿತು. ಉರ್ವಿಲ್ ಪಟೇಲ್ ಬಂದ ಹಾಗೆಯೇ ಕಮಿನ್ಸ್ ಬೌಲಿಂಗ್ನಲ್ಲಿ ಎರಡು ಸಿಕ್ಸರ್ಗಳನ್ನು ಎತ್ತಿದರು. ಆದರೆ ಸಾಕಿಬ್ ಹುಸೇನ್ ಅವರ ಸ್ಲೋಬಾಲ್ ಒಂದರಲ್ಲಿ ಬೌಲ್ಡ್ ಆದರು.

ಋತುರಾಜ್ ಮತ್ತು ಕಾರ್ತಿಕ್ ಅವರು ಮೂರನೇ ವಿಕೆಟ್ಗೆ 42 ರನ್ ಸೇರಿಸಿ ತಂಡವನ್ನು ಮರಳಿ ಹಳಿಗೆ ತರಲು ಪ್ರಯತ್ನಿಸಿದರು. ಆದರೆ ದಾಳಿಗೆ ಮರಳಿದ ಕಮಿನ್ಸ್, ಪ್ರತಿಭಾನ್ವಿತ ಕಾರ್ತಿಕ್ ವಿಕೆಟ್ ಪಡೆದರು. ಅವರ ಮತ್ತೊಂದು ಬೌನ್ಸರ್ಗೆ ಋತುರಾಜ್ (15, 21 ಎಸೆತ) ನಿರ್ಗಮಿಸಬೇಕಾಯಿತು.

ಬ್ರೆವಿಸ್ ಮತ್ತು ಶಿವಂ ದುಬೆ (26, 23 ಎಸೆತ) ಜೋಡಿ ಐದನೇ ವಿಕೆಟ್ಗೆ 59 ರನ್ ಸೇರಿಸಿದ್ದರಿಂದ ಕುಸಿತ ತಪ್ಪಿತು. ದುಬೆ ಮತ್ತು ಕೊನೆಯ ಕೆಲವು ಬ್ಯಾಟರ್ಗಳು ಮೊತ್ತವನ್ನು 200ರ ಸಮೀಪದ ತಲುಪಿಸಲು ನಡೆಸಿದ ಯತ್ನ ಸಫಲವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ ಕಿಂಗ್ಸ್: 20 ಓವರುಗಳಲ್ಲಿ 7ಕ್ಕೆ 180 (ಸಂಜು ಸ್ಯಾಮ್ಸನ್ 27, ಕಾರ್ತಿಕ್ ಶರ್ಮಾ 32, ಡೆವಾಲ್ಡ್ ಬ್ರೆವಿಸ್ 44, ಶಿವಂ ದುಬೆ 26; ಪ್ಯಾಟ್ ಕಮಿನ್ಸ್ 28ಕ್ಕೆ3, ಸಾಕಿಬ್ ಹುಸೇನ್ 34ಕ್ಕೆ2). ಸನ್ರೈಸರ್ಸ್ ಹೈದರಾಬಾದ್: ಓವರ್ಗಳಲ್ಲಿ 5 ವಿಕೆಟ್ಗೆ (ಅಭಿಷೇಕ್ ಶರ್ಮಾ 26, ಇಶಾನ್ ಕಿಶನ್ 70, ಹೆನ್ರಿಕ್ ಕ್ಲಾಸೆನ್ 47; ಮುಕೇಶ್ ಚೌಧರಿ 36ಕ್ಕೆ2).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-1305154518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.