ಕ್ರಿಕೆಟ್‌: ಸುರಾನಾ ಕಾಲೇಜಿಗೆ ಜಯ

7

ಕ್ರಿಕೆಟ್‌: ಸುರಾನಾ ಕಾಲೇಜಿಗೆ ಜಯ

Published:
Updated:

ಬೆಂಗಳೂರು: ರಾಕೇಶ್‌ ಹಾಗೂ ಚಿರಂತ್‌ ಅವರ ಉತ್ತಮ ಬೌಲಿಂಗ್‌ ದಾಳಿಯ ನೆರವಿನಿಂದ ಸುರಾನಾ ಪದವಿ ಪೂರ್ವ ಕಾಲೇಜು ತಂಡವು ರೇವಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಸುರಾನಾ ತಂಡವು ಎಂಇಎಸ್‌ ಮೇನ್‌ ಪದವಿ ಪೂರ್ವ ಕಾಲೇಜು ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. 

ಮೊದಲು ಬ್ಯಾಟಿಂಗ್‌ ಮಾಡಿದ ಎಂಇಎಸ್‌ ಕಾಲೇಜು ತಂಡವು 20 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟಾಯಿತು. 13 ರನ್‌ಗಳನ್ನು ನೀಡಿದ ರಾಕೇಶ್‌ 3 ವಿಕೆಟ್‌ ಕಬಳಿಸಿದರು. ಚಿರಂತ್‌ ಅವರು 16 ರನ್‌ಗಳಿಗೆ 2 ವಿಕೆಟ್‌ ಪ‍ಡೆದರು.

ಗುರಿ ಬೆನ್ನತ್ತಿದ ಸುರಾನಾ ತಂಡವು 13 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 91 ರನ್‌ ಗಳಿಸಿತು. 

ಸಂಕ್ಷಿಪ್ತ ಸ್ಕೋರ್‌: ಎಂಇಎಸ್‌ ಮೇನ್‌ ಪದವಿ ಪೂರ್ವ ಕಾಲೇಜು ತಂಡ: 20 ಓವರ್‌ಗಳಲ್ಲಿ 87 (ಅನಿವಿತ್‌ 28, ರಾಕೇಶ್‌ 13ಕ್ಕೆ 3, ಚಿರಂತ್‌ 16ಕ್ಕೆ 2).

ಸುರಾನಾ ಪದವಿ ಪೂರ್ವ ಕಾಲೇಜು ತಂಡ: 13 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 91 (ಚಂದನ್‌ ಔಟಾಗದೆ 33, ನಿತೇಶ್‌ 30). ಫಲಿತಾಂಶ: ಸುರಾನಾ ತಂಡಕ್ಕೆ 8 ವಿಕೆಟ್‌ಗಳ ಜಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !