ಭಾನುವಾರ, ಸೆಪ್ಟೆಂಬರ್ 20, 2020
21 °C

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸುರೇಶ್‌ ರೈನಾ ವಿದಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಕಳೆದ ಒಂದೂವರೆ ದಶಕದಲ್ಲಿ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದ ಸುರೇಶ್ ರೈನಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ವಿದಾಯ ಹೇಳಿದ್ದಾರೆ. ನೆಚ್ಚಿನ ನಾಯಕ ಮತ್ತು ಪ್ರೇರಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬೆನ್ನಲ್ಲೇ ಈ ಎಡಗೈ ಬ್ಯಾಟ್ಸ್‌ಮನ್ ಮತ್ತು ಆಫ್‌ಬ್ರೇಕ್ ಬೌಲರ್ ನಿವೃತ್ತಿ ಘೋಷಿಸಿದ್ದಾರೆ.

‘ಮಹಿ, ನಿಮ್ಮೊಂದಿಗೆ ಅಂಗಣದಲ್ಲಿ ಕಳೆದಿದ್ದ ಕ್ಷಣಗಳು ರೋಚಕವಾಗಿದ್ದವು. ನಿಮ್ಮ ಮೇಲಿನ ಅಭಿಮಾನವನ್ನು ಉಳಿಸಿಕೊಂಡು, ನಿಮ್ಮ ಹಾದಿಯನ್ನೇ ಹಿಡಿಯಲು ಬಯಸಿದ್ದೇನೆ. ಧನ್ಯವಾದಗಳು ಭಾರತ, ಜೈ ಹಿಂದ್’ ಎಂದು ರೈನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದವರಾದ 33 ವರ್ಷದ ರೈನಾ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕ ಗಳಿಸಿದ ಅಪರೂಪದ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2011ರ ವಿಶ್ವಕಪ್‌ ಟೂರ್ನಿಯ ಆಸ್ಟ್ರೇಲಿಯಾ ಎದುರಿನ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅಜೇಯ 34 ರನ್‌ ಗಳಿಸಿ ಅವರು ಭಾರತವನ್ನು ಜಯದ ದಡ ಸೇರಿಸಿದ್ದರು.18 ಟೆಸ್ಟ್‌, 226 ಏಕದಿನ ಮತ್ತು 78 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ರೈನಾ ಕ್ರಮವಾಗಿ 768, 5615 ಮತ್ತು 1605 ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 193 ಪಂದ್ಯಗಳನ್ನು ಆಡಿದ್ದು 5368 ರನ್ ಕಲೆ ಹಾಕಿದ್ದಾರೆ.

ಟೆಸ್ಟ್‌ನಲ್ಲಿ 120, ಏಕದಿನ ಕ್ರಿಕೆಟ್‌ನಲ್ಲಿ 116 ಮತ್ತು ಟ್ವೆಂಟಿ–20ಯಲ್ಲಿ 101 ರನ್ ಅವರ ಗರಿಷ್ಠ ಸ್ಕೋರ್. ಐಪಿಎಲ್‌ನಲ್ಲೂ ಅಜೇಯ ಶತಕ ಸಿಡಿಸಿದ್ದಾರೆ. ಟೆಸ್ಟ್ ಮತ್ತು ಟ್ವೆಂಟಿ–20ಯಲ್ಲಿ ತಲಾ 13, ಏಕದಿನ ಕ್ರಿಕೆಟ್‌ನಲ್ಲಿ 36 ಮತ್ತು ಐಪಿಎಲ್‌ನಲ್ಲಿ 25 ವಿಕೆಟ್ ಕಬಳಿಸಿದ್ದಾರೆ.

ತಮ್ಮ ನಿವೃತ್ತಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು