ನವದೆಹಲಿ  ಸೂರ್ಯಕುಮಾರ್ ಯಾದವ್ ಅವರು ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡವನ್ನು ಸ್ಫೂರ್ತಿಯುತವಾಗಿ ಮುನ್ನಡೆಸಿದ್ದಾರೆ ನಿಜ, ಆದರೆ ಸತತ ಬ್ಯಾಟಿಂಗ್ ವೈಫಲ್ಯದಿಂದಾಗಿ ಅವರು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ವರೆಗೆ ಅವರು ತಂಡದಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿವೆ.

ಇದೇ ಜೂನ್ ಮತ್ತು ಜುಲೈನಲ್ಲಿ ಭಾರತ ತಂಡವು ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಸೂರ್ಯ ಅವರ ಪಾಲಿಗೆ ಈ ಕಿರು ಸರಣಿ ನಿರ್ಣಾಯಕವಾಗಲಿದೆ. ನಾಯಕತ್ವಕ್ಕಿಂತ ಹೆಚ್ಚಾಗಿ ಅವರ ಬ್ಯಾಟಿಂಗ್ ನಿರ್ವಹಣೆಯ ಮೇಲೆಯೇ ಗಮನವಿರಲಿದೆ.

ಈ ಪ್ರವಾಸದಲ್ಲಿ ಮುಂಬೈ ಆಟಗಾರ ತೋರುವ ಆಟವು, 2028ರ ಒಲಿಂಪಿಕ್ಸ್ ಮತ್ತು ಟಿ20 ವಿಶ್ವಕಪ್ವರೆಗೆ ಅವರು ತಂಡದ ಭಾಗವಾಗಿರುತ್ತಾರೆಯೇ ಎಂಬುದನ್ನು ನಿರ್ಧರಿಸಲಿದೆ.

ಸೂರ್ಯ ಅವರು ಕೋಚ್ ಗೌತಮ್ ಗಂಭೀರ್ ಪಾಲಿಗೆ ಮೊದಲ ಆಯ್ಕೆಯ ನಾಯಕ. ಆದರೆ ಅವರ ನಿಲುವನ್ನು ಅಜಿತ್ ಅಗರಕರ್ ನೇತೃತ್ವದ ಆಯ್ಕೆ ಸಮಿತಿ ಒಪ್ಪುವುದೇ ಎಂಬುದು ಆಸಕ್ತಿಯ ವಿಷಯ. ಹಾಲಿ ಟಿ20 ತಂಡದ ನಾಯಕನ ವಯಸ್ಸು ಆ ವೇಳೆಗೆ (2028) 38 ಆಗಲಿದೆ.

2025ರಲ್ಲಿ ಸೂರ್ಯಕುಮಾರ್ ಅವರ ಆಟದ ಮಟ್ಟ ಗಣನೀಯವಾಗಿ ಕುಸಿದಿತ್ತು. ಅವರ ಸ್ಟ್ರೈಕ್ರೇಟ್ 120ಕ್ಕಿಂತ ಕೆಳಗಿಳಿದಿತ್ತು. ಅವರು ಒಂದೂ ಅರ್ಧ ಶತಕ ಬಾರಿಸಿರಲಿಲ್ಲ. ಆದರೆ 2026ರಲ್ಲಿ ಸುಧಾರಣೆ ಕಂಡರು. ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದ ರಲ್ಲದೇ ಸ್ಟ್ರೈಕ್ರೇಟ್ಅನ್ನು 160ಕ್ಕೆ ಏರಿಸಿದ್ದರು. ಆದರೆ ಟಿ20 ವಿಶ್ವಕಪ್ನಲ್ಲಿ ಅಮೆರಿಕ ವಿರುದ್ಧ ಅಮೋಘ ಆಟದ ಅವರು ನಂತರ ಅದೇ ಮಟ್ಟ ಕಾಯ್ದುಕೊಳ್ಳಲಿಲ್ಲ.

ದೊಡ್ಡ ತಂಡಗಳ ಎದುರು ಯಶಸ್ಸು ಗಳಿಸಲಿಲ್ಲ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಎದುರು ತಲಾ 18 ರನ್, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ 11, ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶೂನ್ಯ ಸಂಪಾದನೆ.

ವೈಭವ್ ಸೂರ್ಯವಂಶಿ ಹೆಸರು ಮುನ್ನೆಲೆಗೆ

ಟಿ20 ತಂಡದಲ್ಲಿ ಆಕ್ರಮಣಕಾರಿ ಆಟಗಾರರ ಪಡೆ ಇರುವಾಗ ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ಸೂರ್ಯಕುಮಾರ್ ಅವರ ಎದುರಿಗಿದೆ. ಸ್ಫೋಟಕ ಆರಂಭ ಆಟಗಾರ ವೈಭವ್ ಸೂರ್ಯವಂಶಿ ಅವರೂ ತಂಡದಲ್ಲಿ ಪ್ರವೇಶಿಸಲು ಸರದಿಯಲ್ಲಿದ್ದಾರೆ.

ಐರ್ಲೆಂಡ್ ಪ್ರವಾಸದ ಟಿ20 ಲೆಗ್ಗೆ 35 ಮಂದಿ ಪರಿಣತ ಆಟಗಾರರ ಪಟ್ಟಿಯಲ್ಲಿ ಸೂರ್ಯವಂಶಿ ಹೆಸರೂ ಇದೆ. ಭಾರತ ಸೀನಿಯರ್ ತಂಡ ಪ್ರವೇಶಿಸಿದ ಅತಿ ಕಿರಿಯ ಆಟಗಾರನೆಂಬ ದಾಖಲೆ ಸದ್ಯ ಸಚಿನ್ ತೆಂಡೂಲ್ಕರ್ (16 ವರ್ಷವಿದ್ದಾಗ) ಹೆಸರಿನಲ್ಲಿದೆ. ಅವರಿಗಿಂತ ಕಿರಿಯ ವಯಸ್ಸಿನಲ್ಲೇ ತಂಡ ಪ್ರವೇಶಿಸಿ ದಾಖಲೆ ಮುರಿಯುವ ಅವಕಾಶ ವೈಭವ್ಗೆ ಉಜ್ವಲವಾಗಿದೆ.

‘ಅವರು ಯುಕೆ ಪ್ರವಾಸ ಅಥವಾ ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಆಡಬಹುದು. ಆದರೆ ಏಷ್ಯನ್ ಗೇಮ್ಸ್ ಅಥವಾ ನಂತರ ವೆಸ್ಟ್ ಇಂಡೀಸ್ನ ಭಾರತ ಪ್ರವಾಸ ಅವರ ಪದಾರ್ಪಣೆಗೆ ಒಳ್ಳೆಯ ವೇದಿಕೆಯಾಗಬಹುದು. ಏಕೆಂದರೆ ವಿಂಡೀಸ್ ಪ್ರವಾಸ ಮತ್ತು ಏಷ್ಯನ್ ಗೇಮ್ಸ್ ಏಕಕಾಲದಲ್ಲಿ ನಡೆಯುವ ಕಾರಣ ಎರಡು ಟಿ20 ತಂಡಗಳನ್ನು ಕಣಕ್ಕಿಳಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಅವಕಾಶ ಸಿಗಬಹುದು’ ಎಂದು ಮೂಲ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.