ನವದೆಹಲಿ: ‘ಟೆಸ್ಟ್ ಕ್ರಿಕೆಟ್ ಆಡುವ ಹಂಬಲವಿದೆ. ಏಕದಿನ ಕ್ರಿಕೆಟ್ ನನಗೆ ಹೇಳಿಸಿದ್ದಲ್ಲ. ಅಂತಿಮವಾಗಿ ನಾನು ಟಿ20 ಮಾದರಿಗೇ ಹೊಂದಿಕೊಂಡಿದ್ದೇನೆ’. ಇದು ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಅನಿಸಿಕೆ. ಪಿಟಿಐ ವಿಡಿಯೋಸ್ ಜೊತೆ ಪಾಡ್ಕಾಸ್ಟ್ ಸಂದರ್ಶನದಲ್ಲಿ ಸರಾಗವಾಗಿ ಮಾತನಾಡಿದ ಸೂರ್ಯ ಅವರ ಭಾಷೆಯಲ್ಲಿ ಮಧ್ಯೆಮಧ್ಯೆ ಮುಂಬೈನ ಹಿಂದಿ ಸೊಗಡು ಕೂಡ ಕಾಣಿಸಿತು.

ವಿಶ್ವಕಪ್ ಗೆದ್ದುಕೊಂಡ ಖುಷಿ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಆದರೆ ಟೆಸ್ಟ್ ಕ್ರಿಕೆಟ್ ಆಡಲು ಆಗದಿರುವುದಕ್ಕೆ ನಿರಾಸೆಯನ್ನೂ ವ್ಯಕ್ತಪಡಿಸಿದರು.

ಒಂದು ಟೆಸ್ಟ್ ಮಾತ್ರ ಆಡಿರುವುದದನ್ನು ನೆನಪಿಸಿದಾಗ ಅವರು ಸಂದರ್ಶಕನಿಗೆ ಥಟ್ಟನೇ ಹೇಳಿದರು– ‘ಆಡಿದ್ದು ಒಂದೇ ಇನಿಂಗ್ಸ್’!. 2023ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಏಕೈಕ ಟೆಸ್ಟ್ ಆಡಿದ್ದರು. ಒಂದೇ ಇನಿಂಗ್ಸ್ ಆಡಿದ್ದು 8 ರನ್ ಗಳಿಸಿದ್ದರು.

‘ನಮ್ಮ ಹಣೆಯಲ್ಲಿ ಏನು ಬರೆದಿದೆಯೊ ಅದನ್ನಷ್ಟೇ ಪಡೆಯಲು ಸಾಧ್ಯ. ನಾನೂ ದೀರ್ಘಾವಧಿ ಕ್ರಿಕೆಟ್ ಆಡಿ ಬೆಳೆದವನು. 10–12 ವರ್ಷ ರಣಜಿ ಟ್ರೋಫಿಯಲ್ಲಿ ಆಡಿದ್ದೆ’ ಎಂದರು.

‘ಆದರೆ ಸೀಮಿತ ಓವರುಗಳ ಕ್ರಿಕೆಟ್ ಆಡುವಾಗ ನನ್ನ ಒಲವು ಆ ಕಡೆ ವಾಲಿತು. ನಂತರ ನಾನು ಈ ಮಾದರಿ (ಟಿ20) ಆಡತೊಡಗಿದೆ. ಏಕದಿನ ಕ್ರಿಕೆಟ್ನಲ್ಲೂ ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಹೆಚ್ಚೇನೂ ಸಾಧಿಸಲಾಗಲಿಲ್ಲ’ ಎಂದು ಅವರು ಹೇಳಿದರು.

‘ಟಿ20 ಮಾದರಿಗೆ ನನ್ನ ಆಟ ಹೊಂದಿಕೊಂಡಿತು. ಹಾಗೆಂದು ಹೇಳಬಹುದು’ ಎಂದು ಹೇಳಿದರು.

ಏಕದಿನ ಮಾದರಿಯಲ್ಲಿ ಕೊನೆಯ ಬಾರಿ ಆಡಿದ್ದು, ಆಸ್ಟ್ರೇಲಿಯಾ ವಿರುದ್ಧ 2023ರ ವಿಶ್ವಕಪ್ ಫೈನಲ್ನಲ್ಲಿ. 28 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ಭಾರತ ಫೈನಲ್ನಲ್ಲಿ ಸೋತಿತ್ತು.

‘ಏಕದಿನ ಕ್ರಿಕೆಟ್ಗೆ ತನ್ನದೇ ಆದ ಕಳೆಯಿದೆ. ಟಿ20 ಮಾದರಿಗೂ ಅದರದ್ದೇ ವರ್ಚಸ್ಸು ಇದೆ’ ಎಂದು ಸೂರ್ಯ ಅವರು ಪ್ರಶ್ನೆಯೊಂದಕ್ಕೆ ಜಾಣ್ಮೆಯಿಂದ ಉತ್ತರಿಸಿದರು.

‘ಇಶಾನ್ ಆಯ್ಕೆ ಒಳಮನಸ್ಸಿನ ನಿರ್ಧಾರ’

‘ಬೀಸಾಟವಾಡುವ ಇಶಾನ್ ಕಿಶನ್ ಅವರು ವಿಶ್ವಕಪ್ ತಂಡದಲ್ಲಿರಬೇಕೆಂದು ನನ್ನ ಒಳಮನಸ್ಸು ಹೇಳಿತು. ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ ಅವರಲ್ಲಿದೆ. ತಂಡದ ಪಾಲಿಗೆ ಅವರು (ಎಕ್ಸ್ ಫ್ಯಾಕ್ಟರ್) ನಿರ್ಣಾಯಕರಾಗಬಲ್ಲರು ಎಂದು ನನಗೆ ಅನಿಸಿತ್ತು’ ಎಂದು ಸೂರ್ಯಕುಮಾರ್ ಹೇಳಿದರು.

‘ನೀವು ಅಂಕಿ ಅಂಶಗಳಿಂದ ಪ್ರೇರಿತರಾದ ನಾಯಕರೇ ಅಥವಾ ಆಂತರ್ಯದ ಮಾತುಕೇಳುವ ನಾಯಕರೇ? ಜಿತೇಶ್ ಶರ್ಮಾ ಅವರ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಏನು ಕಾರಣವಾಯಿತು’ ಎಂಬ ಪ್ರಶ್ನೆ ಎದುರಾಯಿತು.

‘ಇದು ಪೂರ್ಣವಾಗಿ ನನ್ನ ಒಳಮನಸ್ಸಿನ ನಿರ್ಧಾರ. ಜಿತೇಶ್ಗೆ ಸಂಬಂಧಿಸಿ ಅದು ಕಠಿಣ ನಿರ್ಧಾರ. ಆಗ ಅವರು (ಜಿತೇಶ್) ಒಂದು ವರ್ಷದಿಂದ ತಂಡದ ಜೊತೆಗಿದ್ದರು. ಚೆನ್ನಾಗಿ ಆಡುತ್ತಲೂ ಇದ್ದರು’ ಎಂದು ಸೂರ್ಯ ವಿವರಿಸಿದರು.

‘ಜಿತೇಶ್ ಅವರನ್ನು ಕೈಬಿಟ್ಟು ಇಶಾನ್ ಅವರನ್ನು ಆಯ್ಕೆ ಮಾಡಿದಾಗ ಬೇಸರವೂ ಆಗಿತ್ತು. ಆದರೆ ಆರಂಭದಲ್ಲೇ ಮಿಂಚಿನ ಆಟವಾಡುವ ಬ್ಯಾಟರ್ ಒಬ್ಬರು ನಮಗೆ ಅಗತ್ಯವಿದ್ದರು. ಅಂಥ ವೇಳೆ ಯಾರಾದರೊಬ್ಬರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ’ ಎಂದರು

27 ವರ್ಷ ವಯಸ್ಸಿನ ಕಿಶನ್ ನಿರಾಸೆ ಮೂಡಿಸಲಿಲ್ಲ. ಟೂರ್ನಿಯಲ್ಲಿ 190ರ ಸ್ಟ್ರೈಕ್ರೇಟ್ನಲ್ಲಿ 317 ರನ್ ಗಳಿಸಿದ್ದರು.

ಸಂಜು ಸ್ಯಾಮ್ಸನ್ ಅವರ ಆಟವನ್ನೂ ಸೂರ್ಯ ಶ್ಲಾಘಿಸಿದರು. ‘ಸಂಜು ತಂಡಕ್ಕೆ ಮರಳಿದ ನಂತರ ಅಲೆ ನಮ್ಮ ಕಡೆಗೆ ತಿರುಗಿತು. ಸಂಜು ಆಯ್ಕೆ ಸಂಪೂರ್ಣವಾಗಿ ತಂತ್ರಗಾರಿಕೆಯ ನಿರ್ಧಾರವಾಗಿತ್ತು. ಏಕೆಂದರೆ ಆಗ ತಂಡದ ಅಗ್ರಸರದಿಯಲ್ಲಿ ಇಬ್ಬರು ಎಡಗೈ ಆಟಗಾರರು ಇದ್ದರು’ ಎಂದು ಅವರು ಅಭಿಷೇಕ್ ಶರ್ಮಾ ಮತ್ತು ಇಶಾನ್ ಅವರನ್ನು ಉಲ್ಲೇಖಿಸಿ ಹೇಳಿದರು.

ಎದುರಾಳಿ ತಂಡದ ಬೌಲರ್ಗಳಿಗೆ ನೆರವಾಗಬಾರದು ಎಂಬುದು ನಮ್ಮ ನಿರ್ಧಾರದ ಹಿಂದಿನ ಕಾರಣ. ಸಂಜು ಅವರ ನಿರ್ಧಾರ ಸರಿಯಾದ ವೇಳೆಗೇ ಆಯಿತು. ಅವರು ಆ ಸಾಧನೆ ಅರ್ಹರೂ ಆಗಿದ್ದರು ಎಂದರು.

ಸರಣಿಯ ಆಟಗಾರರಾದ ಸಂಜು ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ತಲಾ 89 ರನ್ ಹೊಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.