ನವದೆಹಲಿ: ಭಾರತದ ಟಿ–20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯವನ್ನು ಪ್ರಮುಖವಾಗಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ನಿರ್ಧರಿಸಲಿದ್ದಾರೆ ಬಿಸಿಸಿಐನ ಮೂಲವೊಂದು ತಿಳಿಸಿದೆ.
.Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್.
ಆದರೆ ಆಯ್ಕೆ ಸಮಿತಿಯು ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲು ಉತ್ಸುಕವಾಗಿದೆ ಎಂದು ಗೊತ್ತಾಗಿದೆ. ಗಂಭೀರ್ ಹಾಗೂ ಸೂರ್ಯಕುಮಾರ್ ನಡುವೆ ಉತ್ತಮ ಬಾಂಧವ್ಯವಿದ್ದು, ಸೂರ್ಯಕುಮಾರ್ ಅವರ ಭವಿಷ್ಯ ಗಂಭೀರ್ ಅವರ ಕೈಯಲ್ಲಿದೆ ಎಂದು ಮೂಲಗಳು ಹೇಳಿವೆ.

ತಂಡದಿಂದಲೂ ಸೂರ್ಯಕುಮಾರ್ ಅವರನ್ನು ಕೈಬಿಡಬೇಕು ಎಂದು ಐದೂ ಜನ ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೂರ್ಯಕುಮಾರ್ ಈ ವರ್ಷದ ಐಪಿಎಲ್ನಲ್ಲಿ 12 ಇನ್ನಿಂಗ್ಸ್ಗಳಿಂದ 148ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 210 ರನ್ ಗಳಷ್ಟೇ ಗಳಿಸಿದ್ದಾರೆ.

‘ಯಾರಾದರೂ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿದ್ದರೆ, ಅವರು ನಾಯಕರಾಗಲು ಹೇಗೆ ಸಾಧ್ಯ? ಆದ್ದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಕಷ್ಟ, ಆದರೆ ಈ ವಿಷಯದಲ್ಲಿ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಸಮಾನ ಅಭಿಪ್ರಾಯ ಹೊಂದಬೇಕಾಗುತ್ತದೆ’ ಎಂದು ತಿಳಿಸಿವೆ.
.T20 World Cup| ನಮ್ಮ ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.