ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಜಗತ್ತಿನ ಕ್ರಿಕೆಟ್ ಆಸಕ್ತರ ಗಮನ ಸೆಳೆಯುತ್ತಿದ್ದಾರೆ. ಇದೀಗ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಜೊತೆಗಿನ ಯೂಟ್ಯೂಬ್ ಶೋನಲ್ಲಿ ಭಾಗವಹಿಸಿದ ಅವರು 25 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ಯೂಟ್ಯೂಬ್ ಶೋನಲ್ಲಿ ಸೂರ್ಯವಂಶಿ ಅವರಿಗೆ 50 ಎಸೆತಗಳಲ್ಲಿ 100 ರನ್ ಗಳಿಸುವಂತೆ ಪೀಟರ್ಸನ್ ಅವರು ಸವಾಲು ಹಾಕುತ್ತಾರೆ. ಈ ಸವಾಲು ಸ್ವೀಕರಿಸಿದ 15 ವರ್ಷದ ಆಟಗಾರ ಕೇವಲ 25 ಎಸೆತಗಳಲ್ಲಿ ಗುರಿ ತಲುಪುತ್ತಾರೆ.

ಸೂರ್ಯವಂಶಿ ಪ್ರತಿನಿಧಿಸುವ ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ 2026ರಲ್ಲಿ ನಿನ್ನೆ (ಮೇ 24) ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಇದಾದ ಬಳಿಕ ಪೀಟರ್ಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೊ ಪ್ರಸಾರ ಮಾಡಿದ್ದಾರೆ.

ಪೀಟರ್ಸನ್ ನೀಡಿದ್ದ ಸವಾಲು ಸ್ವೀಕರಿಸಿದ ಸೂರ್ಯವಂಶಿ ಕೇವಲ 25 ಎಸೆತಗಳಲ್ಲಿ ಶತಕ ಬಾರಿಸಿದರು. ಅದಾಗ್ಯೂ ಅವರಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ವೇಗದ ಶತಕದ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಪೀಟರ್ಸನ್ ಅವರ ಇದೇ ಕಾರ್ಯಕ್ರಮದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಅಯ್ಯರ್, ಕೇವಲ 22 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಪೀಟರ್ಸನ್ ನೀಡುವ ವೇಗವಾಗಿ ಶತಕ ಸಿಡಿಸುವ ಸವಾಲಿನಲ್ಲಿ ಸೂರ್ಯವಂಶಿ ಅವರು ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಂತರ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಇದ್ದು, ಅವರು 28 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಎ.ಬಿ. ಡಿವಿಲಿಯರ್ಸ್ 30 ಎಸೆತಗಳಲ್ಲಿ ಈ ಗುರಿ ತಲುಪಿದ್ದರು.

ಟಿ20 ಕ್ರಿಕೆಟ್ನಲ್ಲಿ ದ್ವಿಶತಕದ ಗುರಿ

ಪೀಟರ್ಸನ್ ಅವರೊಂದಿಗಿನ ಈ ಸಂಚಿಕೆಯಲ್ಲಿ ಮಾತನಾಡಿದ ಸೂರ್ಯವಂಶಿ, ಟಿ20ಯಲ್ಲಿ ದ್ವಿಶತಕ ಗಳಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. 2013ರ ಐಪಿಎಲ್ನಲ್ಲಿ ಕ್ರಿಸ್ ಗೇಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 175 ರನ್ ಗಳಿಸಿರುವುದು ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಇದುವರೆಗೂ ದಾಖಲಾಗಿರುವ ವೈಯಕ್ತಿಯ ಅತ್ಯಧಿಕ ರನ್ ಆಗಿದೆ.

‘ನಾನು ಟಿ20ಯಲ್ಲಿ 200 ರನ್ ಗಳಿಸಲು ಬಯಸುತ್ತೇನೆ. ಆ ಮೂಲಕ ಕ್ರಿಸ್ ಗೇಲ್ ಅವರ ಹೆಸರಿನಲ್ಲಿರುವ 175 ರನ್ಗಳ ಸಾರ್ವತ್ರಿಕ ದಾಖಲೆಯನ್ನು ಮುರಿಯುತ್ತೇನೆ’ ಎಂದು ಸೂರ್ಯವಂಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.