ಪರ್ತ್: ಆಲ್ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಅವರ ಅಮೋಘ ಆಲ್ರೌಂಡ್ ಆಟದ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಬಿಗಿಹಿಡಿತ ಸಾಧಿಸಿತು.

ಹಗಲು–ರಾತ್ರಿ (ಪಿಂಕ್ಬಾಲ್ ಟೆಸ್ಟ್) ಪಂದ್ಯದ ಎರಡನೇ ದಿನವಾದ ಶನಿವಾರ ಅನ್ನಾಬೆಲ್ ಅವರು ಕೊನೆಯ ಏಳು ಇನಿಂಗ್ಸ್ಗಳಲ್ಲಿ ಮೂರನೇ ಶತಕ ಬಾರಿಸಿದರು. 171 ಎಸೆತಗಳಲ್ಲಿ 129 ರನ್ ಹೊಡೆದು ಆಸ್ಟ್ರೇಲಿಯಾ ತಂಡ 125 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಅವರ ಆಟದಲ್ಲಿ 17 ಬೌಂಡರಿಗಳಿದ್ದವು.

ಭಾರತದ 198 ರನ್ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 323 ರನ್ ಹೊಡೆಯಿತು. ದಿನದಾಟ ಮುಗಿದಾಗ ಭಾರತ 6 ವಿಕೆಟ್ಗೆ 105 ರನ್ ಗಳಿಸಿದ್ದು ಸೋಲಿನ ಭೀತಿಯಲ್ಲಿದೆ.

ವೇಗದ ಬೌಲರ್ ಅನ್ನಾಬೆಲ್ ಎರಡನೇ ಇನಿಂಗ್ಸ್ನಲ್ಲಿ 15 ರನ್ನಿಗೆ 2 ವಿಕೆಟ್ ಪಡೆದು ಬೌಲಿಂಗ್ನಲ್ಲೂ ಛಾಪು ಮೂಡಿಸಿದರು. ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (11) ಮತ್ತು ಜೆಮಿಮಾ ರಾಡ್ರಿಗಸ್ (14) ಅವರ ವಿಕೆಟ್ಗಳು ಅನ್ನಾಬೆಲ್ ಪಾಲಾದವು. ಮೊದಲ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.

ಶುಕ್ರವಾರ 3 ವಿಕೆಟ್ಗೆ 96 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡವು ಎಲಿಸ್ ಪೆರಿ (76, 116ಎ, 4x10, 6x1) ಮತ್ತು ಅನ್ನಾಬೆಲ್ ಅವರ ಜೊತೆಯಾಟದ ಕಾರಣ ಅಪಾಯದಿಂದ ಪಾರಾಯಿತು. 3 ವಿಕೆಟ್ಗೆ 58 ರನ್ ಗಳಿಸಿದ್ದಾಗ ಜೊತೆಗೂಡಿದ ಇವರಿಬ್ಬರು ನಾಲ್ಕನೇ ವಿಕೆಟ್ಗೆ 128 ರನ್ ಸೇರಿಸಿದರು. ನಂತರ ಅವರು ಬೆತ್ ಮೂನಿ (19) ಜೊತೆ 54 ರನ್ ಸೇರಿಸಿದ್ದರಿಂದ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. ಭಾರತ ಕಡೆ ಮಧ್ಯಮ ವೇಗಿ ಸಯಾಲಿ ಸಾತ್ಗರೆ 4 ವಿಕೆಟ್ ಪಡೆದರು.

ಭಾರತದ ಎರಡನೇ ಇನಿಂಗ್ಸ್ನಲ್ಲಿ ಪ್ರತಿಕಾ ರಾವಲ್ (ಔಟಾಗದೇ 43) ಬಿಟ್ಟರೆ ಉಳಿದವರು ವಿಫಲರಾದರು. ಎಡಗೈ ವೇಗಿ ಲ್ಯೂಸಿ ಹ್ಯಾಮಿಲ್ಟನ್ (32ಕ್ಕೆ3) ಅವರಿಗೆ ಅನ್ನಾಬೆಲ್ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.