ಶನಿವಾರ, ಜುಲೈ 31, 2021
27 °C

ಧೋನಿ ವಾಹನ ಸಂಗ್ರಹಕ್ಕೆ ಟ್ರ್ಯಾಕ್ಟರ್‌ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದುಬಾರಿ ಬೈಕ್‌ಗಳು ಮತ್ತು ಕಾರುಗಳನ್ನು ಅಪಾರವಾಗಿ ಪ್ರೀತಿಸುವ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಈಗ ತಮ್ಮ ಟ್ರ್ಯಾಕ್ಟರ್‌ ಚಾಲನೆಯ ಕೌಶಲವನ್ನೂ ಪ್ರದರ್ಶಿಸಿದ್ದಾರೆ.

ಅವರು ಈಚೆಗೆ ಖರೀದಿಸಿದ್ದಾರೆನ್ನಲಾದ ಸ್ವರಾಜ್ ಟ್ರ್ಯಾಕ್ಡರ್‌ ಅನ್ನು ತಮ್ಮ ಫಾರ್ಮ್‌ಹೌಸ್‌ನಲ್ಲಿ ಚಾಲನೆ ಮಾಡುವ ವಿಡಿಯೊವೊಂದನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಟ್ವಿಟರ್‌ನಲ್ಲಿ ಹಾಕಿದೆ. ಈ ವಿಡಿಯೊವನ್ನು ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ.

ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಾವಯವ ಕೃಷಿ ಕಾರ್ಯ ನಡೆಸಲು ಈ ಟ್ರ್ಯಾಕ್ಟರ್‌ ಕೊಂಡಿದ್ದಾರೆಂದು ಹೇಳಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ, ‘ನಾನು ಧೋನಿಯವರನ್ನು ಅತ್ಯುತ್ತಮ ನಿರ್ಣಯ ತೆಗೆದುಕೊಳ್ಳುವ ಗಟ್ಟಿಗನೆಂದು ತಿಳಿದುಕೊಂಡಿದ್ದೆ.  ಅದು ಈಗಲೂ ನಿಜ’ ಎಂದು ಶ್ಲಾಘಿಸಿದ್ದಾರೆ.

ಧೋನಿಯು ಒಬ್ಬ ಸಹಾಯಕರ ಜೊತೆಗೆ ಟ್ರ್ಯಾಕ್ಟರ್‌ ಚಾಲನೆ ಮಾಡುತ್ತಿರುವ ವಿಡಿಯೊ ಇದಾಗಿದೆ. ಕೊರೊನಾ ಸೋಂಕಿನಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ರಾಂಚಿ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಧೋನಿ ಇದ್ದಾರೆ. ಪತ್ನಿ ಸಾಕ್ಷಿ, ಮಗಳು ಜೀವಾ, ಅಪ್ಪ, ಅಮ್ಮ ಹಾಗೂ ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಹೋದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಂತರ ಅವರು ಕ್ರಿಕೆಟ್‌ ತಂಡಕ್ಕೆ ಮರಳಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಅವರು ಆಡುವವರಿದ್ದರು. ಆದರೆ ಟೂರ್ನಿಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು