ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಜಿ ಆಟಗಾರ ಸ್ವಸ್ತಿಕ್ ಚಿಕಾರ ಅವರು ಅಯೋಧ್ಯಾ ಪ್ರೀಮಿಯರ್ ಲೀಗ್ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಾರೆ.

ಕಳೆದ ವರ್ಷ ಆರ್ಸಿಬಿ ತಂಡದಲ್ಲಿದ್ದ ಚಿಕಾರ ಅವರನ್ನು ಹಾಲಿ ಚಾಂಪಿಯನ್ ತಂಡವು ಮಿನಿ ಹರಾಜಿಗೂ ಮುನ್ನ ಬಿಡುಗಡೆ ಮಾಡಿತ್ತು. 2026ರ ಮಿನಿ ಹರಾಜಿನಲ್ಲಿ ಚಿಕಾರ ಯಾವುದೇ ಫ್ರಾಂಚೈಸಿಗೆ ಮಾರಾಟವಾಗದೆ ಉಳಿದಿದ್ದರು.

69 ಎಸೆತ 195 ರನ್

ಅಯೋಧ್ಯ ಪ್ರೀಮಿಯರ್ ಲೀಗ್ನಲ್ಲಿ ಗೋಮ್ಟಿ ಥಂಡರ್ ತಂಡವನ್ನು ಪ್ರತಿನಿಧಿಸುವ ಚಿಕಾರ ಮತ್ತು ಅವರ ಆರಂಭಿಕ ಜೊತೆಗಾರ ಪ್ರಿಯಾಂಶು ಪಾಂಡೆ ಅಜೇಯ ಬ್ಯಾಟಿಂಗ್ ಮಾಡಿದರು. ಪರಿಣಾಮ ಗೋಮ್ಟಿ ಥಂಡರ್ ತಂಡವು ಹಿಂಡನ್ ಟೈಟಾನ್ಸ್ ವಿರುದ್ಧ 20 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 307 ರನ್ ಗಳಿಸಿತು.

ಇದರಲ್ಲಿ ಪಾಂಡೆ 54 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರೆ, ಚಿಕಾರ ಕೇವಲ 69 ಎಸೆತಗಳಲ್ಲಿ 195 ರನ್ ಗಳಿಸಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು.

ಸಿಕ್ಸರ್ ಮೂಲಕವೇ 126 ರನ್

ಚಿಕಾರ ಅವರು ಸಿಕ್ಸರ್ಗಳಿಂದಲೇ ಬರೋಬ್ಬರಿ 126 ರನ್ ಕಲೆಹಾಕಿದರು. ಅವರ ಇನಿಂಗ್ಸ್ನಲ್ಲಿ 21 ಸಿಕ್ಸರ್ಗಳು ಮತ್ತು 11 ಬೌಂಡರಿಗಳನ್ನು ಒಳಗೊಂಡಿತ್ತು. ಅಂತಿಮ ಓವರ್ನಲ್ಲಿ ಅವರ ದ್ವಿಶತಕಕ್ಕೆ 27 ರನ್ಗಳ ಅತ್ಯವಿತ್ತು. ಆದರೆ, ಅವರು 22 ರನ್ ಗಳಿಸಿ 5 ರನ್ಗಳಿಂದ ದ್ವಿಶತಕ ವಂಚಿತರಾದರು.

ಬೃಹತ್ ಮೊತ್ತ ಚೇಸ್ ಮಾಡಿದ ಹಿಂಡನ್ ಟೈಟಾನ್ಸ್ ತಂಡವು 218 ರನ್ಗಳಿಗೆ ಆಲೌಟ್ ಆಗುವ ಮೂಲಕ 89 ರನ್ಗಳ ಸೋಲು ಅನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.