ಭಾನುವಾರ, ಮಾರ್ಚ್ 29, 2020
19 °C

ಫೈನಲ್‌ನಲ್ಲಿ ಕರ್ನಾಟಕ–ತಮಿಳುನಾಡು ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್: ಹಾಲಿ ಚಾಂಪಿಯನ್ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಭಾನುವಾರ ನಡೆಯುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ–20 ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಶುಕ್ರವಾರ ರಾತ್ರಿ ಇಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡವು ರಾಜಸ್ಥಾನ ತಂಡದ ಎದುರು 7 ವಿಕೆಟ್‌ಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು  20 ಓವರ್‌ಗಳಲ್ಲಿ 9ಕ್ಕೆ112 ರನ್‌ ಗಳಿಸಿತು. ಉತ್ತರವಾಗಿ ತಮಿಳುನಾಡು 17.5 ಓವರ್‌ಗಳಲ್ಲಿ 3ಕ್ಕೆ116 ರನ್‌ ಗಳಿಸಿತು. ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕವು ತಮಿಳುನಾಡು ವಿರುದ್ಧ ಗೆದ್ದಿತ್ತು. ಈಚೆಗೆ ವಿಜಯ್ ಹಜಾರೆ ಟೂರ್ನಿಯ ಫೈನಲ್‌ನಲ್ಲಿಯೂ ಮನೀಷ್ ಬಳಗವು ದಿನೇಶ್ ಪಡೆಯನ್ನು ಸೋಲಿಸಿತ್ತು.

ಸಂಕ್ಷಿಪ್ತ ಸ್ಕೋರು:ರಾಜಸ್ಥಾನ: 20 ಓವರ್‌ಗಳಲ್ಲಿ 9ಕ್ಕೆ112 (ಆರ್‌.ಕೆ. ಬಿಷ್ಣೊಯಿ 23, ವಿಜಯಶಂಕರ್ 13ಕ್ಕೆ2) ತಮಿಳುನಾಡು: 17.5 ಓವರ್‌ಗಳಲ್ಲಿ 3ಕ್ಕೆ116 (ಆರ್. ಅಶ್ವಿನ್ 31, ವಾಷಿಂಗ್ಟನ್ ಸುಂದರ್ ಔಟಾಗದೆ 54, ದಿನೇಶ್ ಕಾರ್ತಿಕ್ 17) ಫಲಿತಾಂಶ; ತಮಿಳುನಾಡು ತಂಡಕ್ಕೆ 7 ವಿಕೆಟ್‌ಗಳ ಜಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು