ಕೋಲ್ಕತ್ತ: ಇಂದು (ಬುಧವಾರ) ನಡೆಯಲಿರುವ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯ ಎರಡು ತಂಡಗಳಿಗೂ ನಿರ್ಣಾಯಕವಾಗಿದ್ದು, ಗೆಲ್ಲುವ ತಂಡವು ಫೈನಲ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಈವರೆಗೆ ಟಿ20 ವಿಶ್ವಕಪ್ನಲ್ಲಿ 5 ಬಾರಿ ಮುಖಾಮುಖಿಯಾಗಿವೆ.

ಇದೀಗ 6ನೇ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಎದುರಾಗಲು ವೇದಿಕೆ ಸಿದ್ದವಾಗಿದೆ. ಎರಡು ತಂಡಗಳು ಕ್ರಮವಾಗಿ 2007, 2009, 2010, 2014 ಮತ್ತು 2026ರಲ್ಲಿ ಎದುರಾಗಿವೆ. ಈ ಎಲ್ಲಾ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸಿದೆ.
.ವಾಂಖೆಡೆ ಹವಾಮಾನ: ಭಾರತ vs ಇಂಗ್ಲೆಂಡ್ ಪಂದ್ಯ ರದ್ದಾದರೆ, ಮುಂದೇನು?.
ಟಿ20 ವಿಶ್ವಕಪ್ನಲ್ಲಿ ಎರಡು ತಂಡಗಳ ಮುಖಾಮುಖಿ ಪಟ್ಟಿ ಹೀಗಿದೆ:

2007 ರಲ್ಲಿ ಇಂಗ್ಲೆಂಡಿನ ಡರ್ಬನ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 6 ವಿಕೆಟ್ಗಳ ಗೆಲುವು.

2009 ರಲ್ಲಿ ಲಂಡನ್ನ ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 1 ರನ್ಗಳ ರೋಚಕ ಗೆಲುವು.

2010 ರಲ್ಲಿ ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 13 ರನ್ಗಳಿಂದ ಗೆಲುವು ಸಾಧಿಸಿದೆ.

2014 ರಲ್ಲಿ ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 2 ರನ್ಗಳಿಂದ ಗೆಲುವು ಸಾಧಿಸಿದೆ.

ಈ ಬಾರಿಯ ವಿಶ್ವಕಪ್ನ ಲೀಗ್ನಲ್ಲಿ ಕೂಡ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಇಲ್ಲಿಯೂ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿದೆ.

.ಟಿ20 ವಿಶ್ವಕಪ್ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?.
ಪ್ರಸ್ತುತ ಮತ್ತೊಮ್ಮೆ ಈಡನ್ ಗಾರ್ಡನ್ಸ್ನಲ್ಲಿ 2026ರ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದವರು ಫೈನಲ್ ತಲುಪಲಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಈವರೆಗೆ 19 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನ್ಯೂಜಿಲೆಂಡ್ 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.