ಅಹಮದಾಬಾದ್: ಭಾನುವಾರ ರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ‘ನೀಲಿ ಸಮುದ್ರ’ ಭೋರ್ಗರೆಯಿತು. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ತುಂಬಿದ್ದ ಮೈದಾನದಲ್ಲಿ ಭಾರತದ ಬ್ಯಾಟರ್ಗಳ ಸಿಡಿಲಬ್ಬರದ ಆಟವಾಡಿದರು. ಇದರಿಂದಾಗಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ತಂಡವು 96 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸತತ ಮೂರನೇ ಬಾರಿ ಅಲ್ಪ ಅಂತರದಲ್ಲಿ ಶತಕ ತಪ್ಪಿಸಿಕೊಂಡ ಸಂಜು ಸ್ಯಾಮ್ಸನ್, ವೈಫಲ್ಯದ ಸುಳಿಯಿಂದ ಹೊರಬಂದ ಅಭಿಷೇಕ್ ಶರ್ಮಾ ಹಾಗೂ ಮತ್ತೊಮ್ಮೆ ಗರ್ಜಿಸಿದ ಪಾಕೆಟ್ ಡೈನಮೊ ಇಶಾನ್ ಕಿಶನ್ ಅವರ ಬೀಸಾಟದ ರಂಗು ಚೆಲ್ಲಿತು. 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 255 ರನ್ ಗಳಿಸಿತು.

ಕಠಿಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ ಗಳಿಸಿ ಹೋರಾಟ ಮುಗಿಸಿತು. ವೇಗಿ ಜಸ್ಪ್ರೀತ್ ಬೂಮ್ರಾ (15ಕ್ಕೆ 4) ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ (27ಕ್ಕೆ 3) ದಾಳಿಗೆ ಕಿವೀಸ್ ಬ್ಯಾಟರ್ಗಳು ಅಕ್ಷರಶಃ ತತ್ತರಿಸಿದರು. ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ (52;26ಎ) ಮತ್ತು ನಾಯಕ ಮಿಚೆಲ್ ಸ್ಯಾಟನರ್ (43;35ಎ) ಹೊರತುಪಡಿಸಿ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ನಾಯಕ ಮಿಚೆಲ್ ಸ್ಯಾಂಟನರ್ ಕೈಕೈ ಹಿಸುಕಿಕೊಂಡರು. ಅವರ ಯಾವ ಯೋಜನೆಗಳೂ ನಿರೀಕ್ಷಿತ ಫಲ ನೀಡಲಿಲ್ಲ. ಮೊದಲೆರಡು ಓವರ್ಗಳಲ್ಲಿ ಅಭಿಷೇಕ್ ಮತ್ತು ಸಂಜು ಎಚ್ಚರಿಕೆಯಿಂದ ಆಡಿದರು. ವೈಫಲ್ಯಗಳಿಂದ ಕಂಗೆಟ್ಟಿದ್ದ ಎಡಗೈ ಬ್ಯಾಟರ್ ಅಭಿಷೇಕ್ (52; 21ಎ, 4X6, 6X3) ಟೂರ್ನಿಯಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು.

ಸಂಜು ಕೂಡ ಇನ್ನೊಂದು ಬದಿಯಿಂದ ಅವಕಾಶ ಸಿಕ್ಕಾಗ ಸಿಕ್ಸರ್, ಬೌಂಡರಿ ಹೊಡೆಯುತ್ತ ಅಭಿಷೇಕ್ ಅವರಿಗೆ ವಿಶ್ವಾಸ ತುಂಬುತ್ತ ಜೊತೆಯಾಟ ಕಟ್ಟಿದರು. ಇದರಿಂದಾಗಿ ಪವರ್ ಪ್ಲೇ ಅವಧಿಯಲ್ಲಿ ವಿಕೆಟ್ ನಷ್ಟವಿಲ್ಲದೇ 92 ರನ್ಗಳು ಸೇರಿ ನೂತನ ದಾಖಲೆ ರಚನೆಯಾಯಿತು. ಕಿವೀಸ್ ಬೌಲರ್ಗಳು ಇವರಿಬ್ಬರ ಅಬ್ಬರಕ್ಕೆ ಲಯ ತಪ್ಪಿದರು. ಹೀಗಾಗಿ ವೈಡ್ಬಾಲ್ಗಳನ್ನು ಸಾಲು ಸಾಲಾಗಿ ಹಾಕಿದರು.

ಆದರೆ, ಎಂಟನೇ ಓವರ್ನಲ್ಲಿ ರಚಿನ್ ರವೀಂದ್ರ ಅವರ ವೈಡ್ ಎಸೆತವನ್ನು ಆಡಲು ಹೋಗಿ ಅಭಿಷೇಕ್ ವಿಕೆಟ್ಕೀಪರ್ ಸೀಫರ್ಟ್ಗೆ ಕ್ಯಾಚ್ ಆದರು. ಆದರೆ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಯಶಸ್ಸು ಪಡೆದ ಸಂತಸ ಹೆಚ್ಚು ಹೊತ್ತು ಉಳಿಯಲು ಇಶಾನ್ ಬಿಡಲಿಲ್ಲ. ಸಂಜು ಮತ್ತು ಇಶಾನ್ ಎರಡನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 48 ಎಸೆತಗಳಲ್ಲಿ 105 ರನ್ ಗಳಿಸಿದರು. ಅದರಲ್ಲಿ ಇಶಾನ್ ಪಾಲು 54 ರನ್ಗಳು.

ಇವರಿಬ್ಬರ ಮಿಂಚಿನ ಬ್ಯಾಟಿಂಗ್ ನಿಂದಾಗಿ ಕೇವಲ 15 ಓವರ್ಗಳಲ್ಲಿ ತಂಡದ ಮೊತ್ತ ‘ದ್ವಿಶತಕ’ದ ಗಡಿ ದಾಟಿತು. ಸತತ ಮೂರನೇ ಸಲ ಶತಕದ ಅಂಚಿನಲ್ಲಿ ಸಂಜು ಎಡವಿದರು. 46 ಎಸೆತಗಳಲ್ಲಿ 89 ರನ್ ಗಳಿಸಿದ ಅವರು ಫುಲ್ ಟಾಸ್ ಎಸೆತವನ್ನು ಸಿಕ್ಸರ್ಗೆತ್ತುವ ಪ್ರಯತ್ನದಲ್ಲಿ ಬದಲೀ ಫೀಲ್ಡರ್ ಕೊಲಿ ಮೆಕಾಂಕಿಗೆ ಕ್ಯಾಚ್ ಕೊಟ್ಟರು. ಜಿಮ್ಮಿ ನಿಶಾಮ್ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದರು. ಸಂಜು ಎಂಟು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದರು. ಅವರು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರೂ 89 ರನ್ ಗಳಿಸಿದ್ದರು. ಅದಕ್ಕೂ ಮುನ್ನ ಸೂಪರ್ ಎಂಟರ ಘಟ್ಟದ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಅಜೇಯ 97 ರನ್ ಗಳಿಸಿದ್ದರು.

ಇದೇ ಓವರ್ನಲ್ಲಿ ನಿಶಾಮ್ ಅವರು ಇಶಾನ್ ಕಿಶನ್ (54; 25ಎ) ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಈ ಹಂತದಲ್ಲಿ ರನ್ಗಳನ್ನು ನಿಯಂತ್ರಿಸಲು ಬೌಲರ್ಗಳು ಪ್ರಯತ್ನ ಮಾಡಿದರು. ತಕ್ಕಮಟ್ಟಿಗೆ ಯಶಸ್ವಿಯೂ ಆದರು. ಹಾರ್ದಿಕ್ ಪಾಂಡ್ಯ (18 ರನ್) ಮತ್ತು ತಿಲಕ್ ವರ್ಮಾ (ಅಜೇಯ 8) ಅವರು ಹೆಚ್ಚು ರನ್ ಹೊಡೆಯದಂತೆ ನೋಡಿಕೊಂಡರು.

ಆದರೆ ಶಿವಂ ದುಬೆ ಮಾತ್ರ ಎಂದಿನಂತೆ ತಮ್ಮ ಭುಜಬಲ ಪರಾಕ್ರಮ ಮೆರೆದರು. ಕೇವಲ ಎಂಟು ಎಸೆತಗಳಲ್ಲಿ 26 ರನ್ ಸೂರೆ ಮಾಡಿದರು. 3 ಬೌಂಡರಿ ಮತ್ತು ಎರಡು ಸಿಕ್ಸರ್ ಹೊಡೆದರು. ತಂಡದ ಮೊತ್ತವನ್ನು ಹೆಚ್ಚಿಸಿದರು. ಸತತ ಎರಡು ಬಾರಿ ಪ್ರಶಸ್ತಿ ಜಯಿಸುವ ಮೂಲಕ ಭಾರತ ತಂಡವು ಟಿ20 ಸ್ವರೂಪದಲ್ಲಿ ವಿಶೇಷ ಸಾಧನೆ ಮೆರೆದಿದೆ. ನಮ್ಮ ತಂಡವು ಈ ಟ್ರೋಫಿಗೆ ಅರ್ಹವಾಗಿದೆ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ದಿಗ್ಗಜ

ಅಂಕಿ ಸಂಖ್ಯೆಗಳಲ್ಲಿ ವಿಶ್ವಕಪ್

3: ಸಂಜು ಸ್ಯಾಟ್ಸನ್ ಅವರು ಟಿ20 ವಿಶ್ವಕಪ್ನಲ್ಲಿ ಸತತ ಮೂರನೇ ಬಾರಿ 50ಕ್ಕೂ ಅಧಿಕ ರನ್ ದಾಖಲಿಸಿದ ವಿಶ್ವದ ಏಳನೇ ಮತ್ತು ಭಾರತದ ಮೂರನೇ ಆಟಗಾರ ಎನಿಸಿದರು.

225 ಕ್ಕೆ5: ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ದಾಖಲಿಸಿದ ಮೊತ್ತ. ಇದು ಟಿ20 ವಿಶ್ವಕಪ್ನಲ್ಲಿ ಮೂರನೇ ಅತಿ ಹೆಚ್ಚು ರನ್ ದಾಖಲೆಯಾಗಿದೆ

7: ಭಾರತ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಏಳು ಬಾರಿ 250ಕ್ಕಿಂತ ಅಧಿಕ ರನ್ ಪೇರಿಸಿದೆ

92: ಭಾರತ ತಂಡವು ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ ಗಳಿಸಿದ ರನ್. ಇದು ಟಿ20 ವಿಶ್ವಕಪ್ನಲ್ಲಿ ಹೊಸ ದಾಖಲೆಯಾಗಿದೆ

89: ಭಾರತದ ಸಂಜು ಸ್ಯಾಟ್ಸನ್ ಗಳಿಸಿದ ರನ್. ಇದು ಟಿ20 ವಿಶ್ವಕಪ್ನ ಯಾವುದೇ ಫೈನಲ್ನಲ್ಲಿ ಆಟಗಾರನೊಬ್ಬನ ಗರಿಷ್ಠ ರನ್ ದಾಖಲೆಯಾಗಿದೆ

ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ, ದೃಢನಿಶ್ಚಯ ಮತ್ತು ತಂಡದ ಶ್ರಮವನ್ನು ಪ್ರತಿಬಿಂಬಿಸುತ್ತದೆ
ನರೇಂದ್ರ ಮೋದಿ, ಪ್ರಧಾನಿ

ಸತತ ಎರಡು ಬಾರಿ ಪ್ರಶಸ್ತಿ ಜಯಿಸುವ ಮೂಲಕ ಭಾರತ ತಂಡವು ಟಿ20 ಸ್ವರೂಪದಲ್ಲಿ ವಿಶೇಷ ಸಾಧನೆ ಮೆರೆದಿದೆ. ನಮ್ಮ ತಂಡವು ಈ ಟ್ರೋಫಿಗೆ ಅರ್ಹವಾಗಿದೆ
ಸಚಿನ್ ತೆಂಡೂಲ್ಕರ್, ಕ್ರಿಕೆಟ್ ದಿಗ್ಗಜ

ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸದ ಹಲವಾರು ಶಿಖರಗಳನ್ನು ಏರಿದ ಭಾರತ ತಂಡಕ್ಕೆ ಹೃತ್ತೂರ್ವಕ ಅಭಿನಂದನೆಗಳು. ಇದು ನಮ್ಮ ಕ್ರಿಕೆಟ್ ಪ್ರಿಯರಿಗೆ ಅಪಾರ ಸಂತೋಷದ ಕ್ಷಣ
ದೌಪದಿ ಮುರ್ಮು, ರಾಷ್ಟ್ರಪತಿ

ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೆ ಮುಗಿಲೆತ್ತರದಲ್ಲಿ ರಾರಾಜಿಸುತ್ತಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.