ಅಹಮದಾಬಾದ್: 2026ರ ಟಿ20 ವಿಶ್ವಕಪ್ ಗೆದ್ದ ತಂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಬಹುಮಾನ ಪಡೆಯಲಿದೆ. ಸುಮಾರು ₹27.48 ಕೋಟಿ ಬಹುಮಾನದ ಮೊತ್ತ ಪಡೆಯಲಿದೆ ಎಂದು ವರದಿಯಾಗಿದೆ.

2025ರಲ್ಲಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದ ಭಾರತ ತಂಡಕ್ಕೆ ಐಸಿಸಿಯಿಂದ ₹20.42 ಕೋಟಿ ಬಹುಮಾನ ಸಿಕ್ಕಿತ್ತು. ಈ ಬಾರಿ ಬಹುಮಾನದ ಮೊತ್ತ ಹೆಚ್ಚಾಗಿದೆ. ರನ್ನರ್ ಆಫ್ ತಂಡ ₹14.65 ಕೋಟಿ ಪಡೆಯಲಿದೆ. ಸೆಮಿಫೈನಲ್ ಹಂತದಲ್ಲಿ ಸೋತ ತಂಡಗಳಿಗೆ ತಲಾ ₹7.24 ಕೋಟಿ ಸಿಗಲಿದೆ. ಗುಂಪು ಹಂತದಲ್ಲಿ ಭಾಗವಹಿಸಿದ ತಂಡಗಳಿಗೆ ತಲಾ ₹2.29 ಕೋಟಿ ಬಹುಮಾನ ಸಿಗಲಿದೆ.

2007 ಬಹುಮಾನ ಎಷ್ಟಿತ್ತು?

ಎಂ.ಎಸ್. ಧೋನಿ ನೇತೃತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ನ ಚೊಚ್ಚಲ ಆವೃತ್ತಿಯಲ್ಲಿ ಕಪ್ ಗೆದ್ದಿತ್ತು. ಮೊದಲ ವಿಶ್ವಕಪ್ನಲ್ಲಿ ಕಪ್ ಗೆದ್ದ ತಂಡಕ್ಕೆ ಐಸಿಸಿಯಿಂದ ₹2 ಕೋಟಿ ಬಹುಮಾನ ಸಿಕ್ಕಿತ್ತು. ಈ ಮೊತ್ತ 2026ರ ವೇಳೆಗೆ ಶೇ 150ರಷ್ಟು ಏರಿಕೆಯಾಗಿದೆ.

ಈವರೆಗೆ ಟಿ20 ವಿಶ್ವಕಪ್ ಗೆದ್ದ ತಂಡಗಳಿಗೆ ಸಿಕ್ಕ ಬಹುಮಾನದ ಮೊತ್ತ ಇಲ್ಲಿದೆ.

2007ರಲ್ಲಿ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹2.02 ಕೋಟಿ

2009ರಲ್ಲಿ ಪಾಕಿಸ್ತಾನ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹3.63 ಕೋಟಿ

2010ರಲ್ಲಿ ಇಂಗ್ಲೆಂಡ್ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹4.57 ಕೋಟಿ

2012ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹5.34 ಕೋಟಿ

2014ರಲ್ಲಿ ಶ್ರೀಲಂಕಾ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹6.71 ಕೋಟಿ

2016ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹10.75 ಕೋಟಿ

2021ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹12.00 ಕೋಟಿ

2022ರಲ್ಲಿ ಇಂಗ್ಲೆಂಡ್ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ– ₹13.20 ಕೋಟಿ

2024ರಲ್ಲಿ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹20.42 ಕೋಟಿ

2026ರಲ್ಲಿ ಗೆದ್ದ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ – ₹27.48 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.