ನವದೆಹಲಿ: ಐಸಿಸಿ ವಿಶ್ವಕಪ್ ಟಿ–20 ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಟೀಂ ಇಂಡಿಯಾಗೆ, ರಾಜ್ಯಸಭೆಯಲ್ಲಿ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು.

ಭಾನುವಾರ (ಮಾ.8) ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು, ನ್ಯೂಜಿಲೆಂಡ್ ವಿರುದ್ದ 96 ರನ್ಗಳ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಚುಟುಕು ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

‘ಭಾರತವು ಟಿ–20 ವಿಶ್ವಕಪ್ ಗೆದ್ದಿರುವುದು ದೇಶವೇ ಹೆಮ್ಮೆ ಪಡುವ ಕ್ಷಣ.. ಮುಂಬರುವ ದಿನಗಳಲ್ಲಿ ಈ ಯಶಸ್ಸು ಮುಂದುವರೆಯಲಿ ಎಂದು ರಾಜ್ಯಸಭೆ ಆಶಿಸುತ್ತದೆ’ ಎಂದು ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.

‘ಟಿ–20 ವಿಶ್ವಕಪ್ಗೆ ಆತಿಥ್ಯವಹಿಸಿದ ತಂಡವೊಂದು ಇದೇ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದೆ. ಅದರಲ್ಲೂ ಭಾರತ ಸತತ ಎರಡನೇ ಸಲ ಚಾಂಪಿಯನ್ ಆಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ಹೇಳಿದ್ದಾರೆ.

‘ಟೂರ್ನಿಯಲ್ಲಿ ಟೀಂ ಇಂಡಿಯಾವು ಅದ್ಭುತ ಆಟವಾಡುವ ಮೂಲಕ ದೇಶದಲ್ಲಿರುವ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಸಂತೋಷ ಹಾಗೂ ಹೆಮ್ಮೆಯನ್ನುಂಟುಮಾಡಿದೆ. ರಾಜ್ಯಸಭೆಯ ಪರವಾಗಿ ತಂಡದ ಆಟಗಾರರಿಗೆ, ಸಹಾಯಕ ಸಿಬ್ಬಂದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.