ಫೆ. 24ರಂದು ಬೆಂಗಳೂರಿನಲ್ಲಿ ಟ್ವಿಂಟಿ–20 ಪಂದ್ಯ

7
ಭಾರತದಲ್ಲಿ ಸರಣಿ ಆಡಲಿರುವ ಆಸ್ಟ್ರೇಲಿಯಾ

ಫೆ. 24ರಂದು ಬೆಂಗಳೂರಿನಲ್ಲಿ ಟ್ವಿಂಟಿ–20 ಪಂದ್ಯ

Published:
Updated:
Prajavani

ನವದೆಹಲಿ: ಫೆಬ್ರುವರಿ 24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾರತ ಮತ್ತು ಆಸ್ಟ್ರೇಲಿಯಾ ನಡುವಣ ಟ್ವೆಂಟಿ–20 ಪಂದ್ಯ ನಡೆಯಲಿದೆ.

ಈ ಪಂದ್ಯದೊಂದಿಗೇ ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸವನ್ನು ಆರಂಭಿಸಲಿದೆ. ಎರಡನೇ ಟ್ವೆಂಟಿ –20 ಪಂದ್ಯವು ವಿಶಾಖಪಟ್ಟನಳದಲಿ ಫೆಬ್ರುವರಿ 27ರಂದು ನಡೆಯಲಿದೆ.

ಐದು ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ. ಹೈದರಾಬಾದ್ (ಮಾರ್ಚ್ 2), ನಾಗಪುರ (ಮಾ.5), ರಾಂಚಿ (ಮಾ. 8), ಮೊಹಾಲಿ (ಮಾ. 10) ಮತ್ತು ನವದೆಹಲಿ (ಮಾ. 13)  ಆತಿಥ್ಯ ವಹಿಸಲಿವೆ.

‘ಈ ಸರಣಿಯ ಎರಡೂ ಟ್ವೆಂಟಿ–20 ಪಂದ್ಯಗಳು ಸಂಜೆ 7ಕ್ಕೆ ಆರಂಭವಾಗಲಿವೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30ರಿಂದ ಆರಂಭವಾಗಲಿವೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ‌

ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಜಯಿಸಿ ಇತಿಹಾಸ ಬರೆದಿರುವ ಭಾರತ ತಂಡವು ಇದೇ 12ರಿಂದ ಏಕದಿನ ಸರಣಿಯಲ್ಲಿ ಆಡಲಿದೆ. ನಂತರ ನ್ಯೂಜಿಲೆಂಡ್‌ಗೆ ಪ್ರವಾಸ ಮುಗಿಸಿ ಭಾರತಕ್ಕೆ ಮರಳುವುದು. ತವರಿನಲ್ಲಿ ಮತ್ತೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಂತರ ಜಿಂಬಾಬ್ವೆಗೆ ತೆರಳಲಿದೆ. ಇದರ ನಂತರ ಐಪಿಎಲ್ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !