ಶನಿವಾರ, ಅಕ್ಟೋಬರ್ 16, 2021
23 °C

ಟಿ20 ವಿಶ್ವಕಪ್‌ಗೆ ಅಂಪೈರ್‌ಗಳ ಆಯ್ಕೆ: ನಿತಿನ್ ಮೆನನ್‌ಗೆ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ : ಭಾರತದ ನಿತಿನ್ ಮೆನನ್‌ ಅವರು ಟಿ20 ವಿಶ್ವಕಪ್‌ನಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೂರ್ನಿಯ ಮೊದಲ ಸುತ್ತು ಮತ್ತು ಸೂಪರ್‌ 12 ಹಂತದ ಪಂದ್ಯಗಳಿಗೆ ಅಂಪೈರಿಂಗ್‌ ಅಧಿಕಾರಿಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಗುರುವಾರ ಪ್ರಕಟಿಸಿದೆ.

ಅನುಭವಿ, ದಕ್ಷಿಣ ಆಫ್ರಿಕಾದ ಮರಾಯಿಸ್‌ ಎರಾಸ್ಮಸ್‌ ಹಾಗೂ ಇಂಗ್ಲೆಂಡ್‌ನ ಕ್ರಿಸ್‌ ಗ್ಯಾಫ್ನಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಫೀಲ್ಡ್ ಅಂಪೈರ್ ಆಗಲಿದ್ದಾರೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಹಣಾಹಣಿಗೆ ರಿಚರ್ಡ್‌ ಇಲಿಂಗ್‌ವರ್ಥ್‌ ಟಿವಿ ಅಂಪೈರ್ ಆಗಿ ಹಾಗೂ ಡೇವಿಡ್‌ ಬೂನ್ ಮ್ಯಾಚ್‌ ರೆಫರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

45 ಪಂದ್ಯಗಳ ಟೂರ್ನಿಗೆ ಒಟ್ಟು 16 ಅಂಪೈರ್‌ಗಳು ಹಾಗೂ ನಾಲ್ವರು ಮ್ಯಾಚ್‌ ರೆಫರಿಗಳನ್ನು ಪ್ರಕಟಿಸಲಾಗಿದೆ. ರೆಫರಿಗಳಲ್ಲಿ ಕನ್ನಡಿಗ, ಭಾರತ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಕೂಡ ಇದ್ದಾರೆ.

ಸೆಮಿಫೈನಲ್‌ ಮತ್ತು ಫೈನಲ್ ಪಂದ್ಯಗಳಿಗೆ ಅಂಪೈರ್‌ಗಳನ್ನು ನಂತರ ಪ್ರಕಟಿಸಲಾಗುತ್ತದೆ.

ಮ್ಯಾಚ್‌ ರೆಫರಿಗಳು: ಡೇವಿಡ್‌ ಬೂನ್‌ ಜೆಫ್‌ ಕ್ರೊವ್‌, ರಂಜನ್ ಮದುಗಲೆ ಮತ್ತು ಜಾವಗಲ್ ಶ್ರೀನಾಥ್‌.

ಅಂಪೈರ್‌ಗಳು: ಕ್ರಿಸ್‌ ಬ್ರೌನ್‌, ಅಲೀಂ ಧಾರ್‌, ಕುಮಾರ್ ಧರ್ಮಸೇನಾ, ಮರಾಯಿಸ್‌ ಎರಾಸ್ಮಸ್‌, ಕ್ರಿಸ್ ಗಫಾನಿ, ಮೈಕೆಲ್ ಗಫ್‌, ಆ್ಯಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್‌ ಇಲಿಂಗ್‌ವ‌ರ್ಥ್‌, ರಿಚರ್ಡ್‌ ಕೆಟಲ್‌ಬರೊ, ನಿತಿನ್ ಮೆನನ್‌, ಎಹಸಾನ್ ರಾಜಾ, ಪಾಲ್ ರಿಫೆಲ್‌, ಲಾಂಗ್ಟನ್‌ ರೂಸರ್ಸ್‌, ರಾಡ್ ಟಕ್ಕರ್‌, ಜೋಯಲ್ ವಿಲ್ಸನ್‌ ಮತ್ತು ಪಾಲ್ ವಿಲ್ಸನ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.