ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್- ಶ್ರೀಲಂಕಾಕ್ಕೆ ಜಯ ಮುಂದುವರಿಸುವ ತವಕ

ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್: ಐರ್ಲೆಂಡ್ ಎದುರಾಳಿ
Last Updated 19 ಅಕ್ಟೋಬರ್ 2021, 14:05 IST
ಅಕ್ಷರ ಗಾತ್ರ

ಅಬುಧಾಬಿ: ಎರಡನೇ ಜಯದ ತವಕದಲ್ಲಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡವು ಟಿ20 ವಿಶ್ವಕಪ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಬುಧವಾರ ಐರ್ಲೆಂಡ್‌ ತಂಡವನ್ನು ಎದುರಿಸಲಿದೆ. ಈ ಹಣಾಹಣಿಯಲ್ಲಿ ಜಯ ಸಾಧಿಸಿದ ತಂಡವು ಸೂಪರ್ 12 ಹಂತಕ್ಕೆ ಸಮೀಪಿಸಲಿದೆ.

ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದವು. ಶ್ರೀಲಂಕಾ ತಂಡವು ನಮೀಬಿಯಾ ಎದುರು ಹಾಗೂ ಐರ್ಲೆಂಡ್‌ ತಂಡ ನೆದರ್ಲೆಂಡ್ಸ್ ಎದುರು ಏಳು ವಿಕೆಟ್‌ಗಳಿಂದ ಗೆದ್ದಿವೆ.

ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ಬ್ಯಾಟರ್‌ಗಳಾದ ಕುಶಲ್ ಪೆರೇರ, ಪತ್ತುಮ್ ನಿಸ್ಸಂಕ ಹಾಗೂ ಅನುಭವಿ ಚಾಂಡಿಮಲ್ ಅವರಿಂದ ಉುತ್ತಮ ಸಾಮರ್ಥ್ಯ ನಿರೀಕ್ಷಿಸುತ್ತಿದೆ. ಆವಿಷ್ಕಾ ಫರ್ನಾಂಡೊ ಹಾಗೂ ಭಾನುಕಾ ರಾಜಪಕ್ಷ ಅವರು ನಮೀಬಿಯಾ ಎದುರು ಮಿಂಚಿದ್ದರು. ಸ್ಪಿನ್ನರ್‌ಗಳಾದ ಮಹೀಶ್ ತೀಕ್ಷಣ ಹಾಗೂ ವನಿಂದು ಹಸರಂಗ ಕೂಡ ಪರಿಣಾಮಕಾರಿ ಬೌಲಿಂಗ್ ಮುಂದುವರಿಸುವ ಹಂಬಲದಲ್ಲಿದ್ದಾರೆ.

ವೇಗಿ ಕರ್ಟಿಸ್‌ ಕ್ಯಾಂಫರ್ ಅವರ ಅಮೋಘ ಬೌಲಿಂಗ್‌ನಿಂದಾಗಿ ನೆದರ್ಲೆಂಡ್ಸ್‌ಅನ್ನು ಮಣಿಸಿದ್ದ ಐರ್ಲೆಂಡ್‌ ಅದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಮೊದಲ ಜಯದ ಮೇಲೆ ನೆದರ್ಲೆಂಡ್ಸ್ ಕಣ್ಣು

ಅಬುಧಾಬಿ (ಪಿಟಿಐ): ಗೆಲ್ಲಲೇಬೇಕಿರುವ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಟೂರ್ನಿಗೆ ಮೊದಲ ಬಾರಿ ಪ್ರವೇಶಿರುವ ನಮೀಬಿಯಾ ವಿರುದ್ಧ ಆಡಲಿದೆ.

ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಗಳಿಸಿದ್ದ ಕ್ಯಾಂಫರ್‌ ಅವರ ಪ್ರಯತ್ನದಿಂದಾಗಿ ನೆದರ್ಲೆಂಡ್ಸ್ ತಂಡವು ಐರ್ಲೆಂಡ್‌ ಎದುರು ದೂಳೀಪಟವಾಗಿತ್ತು. ಆ ನಿರಾಸೆಯನ್ನು ಮರೆತು ಮುನ್ನುಗ್ಗುವ ಛಲದಲ್ಲಿ ತಂಡವಿದೆ.

ಅನನುಭವಿ ನಮೀಬಿಯಾ ಕೂಡ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಎಡವಿತ್ತು. ಈ ಹಣಾಹಣಿಯಲ್ಲಿ ಜಯದ ವಿಶ್ವಾಸದಲ್ಲಿ ತಂಡವಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT