ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಗೈರು ನಾಚಿಕೆಗೇಡು: ಜೇಸನ್ ರಾಯ್

Last Updated 21 ಅಕ್ಟೋಬರ್ 2021, 12:19 IST
ಅಕ್ಷರ ಗಾತ್ರ

ಅಬುಧಾಬಿ: ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಮತ್ತು ವೇಗಿ ಜೋಫ್ರಾ ಆರ್ಚರ್ ಟಿ20 ವಿಶ್ವಕಪ್ ಆಡುವ ತಂಡದಲ್ಲಿರದೇ ಇರುವುದು ನಾಚಿಕೆಗೇಡು ಎಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.

2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಜಯಿಸಲು ಬೆನ್ ಸ್ಟೋಕ್ಸ್‌ ಪ್ರಮುಖ ಪಾತ್ರ ವಹಿಸಿದ್ದರು. ಮಾನಸಿಕ ಒತ್ತಡ ನಿರ್ವಹಣೆ ಮತ್ತು ಬೆರಳಿನ ಗಾಯದಿಂದಾಗಿ ಸ್ಟೋಕ್ಸ್‌ ತಂಡಕ್ಕೆ ಆಯ್ಕೆಯಾಗಿಲ್ಲ. ತಮ್ಮ ಬಲಗೈ ಮೊಣಗಂಟಿನಲ್ಲಿ ಆಗಿರುವ ಗಾಯದಿಂದಾಗಿ ಜೋಫ್ರಾ ಕೂಡ ಹೊರಗುಳಿದಿದ್ದಾರೆ.

‘ಇದನ್ನು ನಾನು ಸಮಸ್ಯೆ ಎಂದು ಹೇಳುವುದಿಲ್ಲ. ಆದರೆ, ಇದು ಅವಮಾನಕರ ಸಂಗತಿ. ಅವರಿಬ್ಬರೂ ಚೇತರಿಸಿಕೊಂಡು ಆರೋಗ್ಯವಂತರಾಗಿ ಮರಳಿ ಬರಲಿ’ ಎಂದರು.

‘ಸದ್ಯ ಇರುವ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಲಯದಲ್ಲಿರುವ ಆಟಗಾರರಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ವಿಶ್ವಾಸ ಮೂಡಿಸಿದ್ದಾರೆ’ ಎಂದು ರಾಯ್ ಸುದ್ದಿಗಾರರಿಗೆ ಹೇಳಿದರು.

‘ಪೂರ್ವಾಭ್ಯಾಸ ಶಿಬಿರದಲ್ಲಿ ಬಹಳಷ್ಟು ತಾಂತ್ರಿಕ ನೆರವಿನೊಂದಿಗೆ ಉತ್ತಮ ಅಭ್ಯಾಸ ಮಾಡಿದ್ದೇವೆ. ಐಪಿಎಲ್‌ನಲ್ಲಿ ಆಡಿರುವ ನಮ್ಮ ಆಟಗಾರರು ತಮ್ಮ ಅನುಭವ ಆಧಾರಿತ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಇಲ್ಲಿಯ ಪಿಚ್‌, ವಾತಾವರಣಗಳ ಕುರಿತು ತಿಳಿದುಕೊಂಡಿದ್ದೇವೆ. ಅಂಗಳ ಯಾವುದೇ ಇರಲಿ ಸಂದರ್ಭಕ್ಕೆ ತಕ್ಕಂತೆ ಆಡುವ ಸಾಮರ್ಥ್ಯ ನಮಗೆ ಇದೆ’ ಎಂದು 31 ವರ್ಷದ ರಾಯ್ ಹೇಳಿದ್ದಾರೆ.

ಈಚೆಗೆ ನಡೆದ ಐಪಿಎಲ್‌ನಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಸ್ಯಾಮ್ ಕರನ್ ಬೆನ್ನುನೋವಿನಿಂದ ಬಳಲಿದ್ದರು. ಆದ್ದರಿಂದ ಅವರು ಕೂಡ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಅವರ ಸಹೋದರ ಟಾಮ್ ಕರನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರಾಯ್ ಅಬುಧಾಬಿಯಲ್ಲಿ ನಡೆಯಲಿರುವ ಟಿ10 ಲೀಗ್‌ನಲ್ಲಿ ಡೆಲ್ಲಿ ಬುಲ್ಸ್‌ ತಂಡದಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT