ಗುರುವಾರ , ಅಕ್ಟೋಬರ್ 21, 2021
27 °C

ಭಾರತ – ಪಾಕ್ ಟಿ20 ಪಂದ್ಯದ ಟಿಕೆಟ್ ಕೊಡಿಸಿ: ರೋಹಿತ್ ಶರ್ಮಾಗೆ ಅಭಿಮಾನಿಯ ಮನವಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಭಾರತ – ಪಾಕಿಸ್ತಾನ ನಡುವಣ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದಿರುವ ಮಧ್ಯೆಯೇ, ಪಂದ್ಯದ ಟಿಕೆಟ್ ಕೊಡಿಸುವಂತೆ ಅಭಿಮಾನಿಯೊಬ್ಬರು ‘ಹಿಟ್ ಮ್ಯಾನ್’ ರೋಹಿತ್ ಶರ್ಮಾಗೆ ಮನವಿ ಮಾಡಿದ್ದಾರೆ.

ಟ್ವೆಂಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಅಕ್ಟೋಬರ್ 24ರಂದು ಪಂದ್ಯ ನಡೆಯಲಿದೆ.

ಓದಿ: 

ಐಪಿಎಲ್ ಟ್ವೆಂಟಿ-20 ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸೆಣಸಿದ್ದವು. ಈ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಅಭಿಮಾನಿಯೊಬ್ಬರು, ‘ರೋಹಿತ್, ಭಾರತ – ಪಾಕಿಸ್ತಾನ ಪಂದ್ಯದ ಎರಡು ಟಿಕೆಟ್‌ಗಳು ಬೇಕಾಗಿವೆ. ದಯಮಾಡಿ ಕೊಡಿಸಿ...’ ಎಂಬ ಪ್ಲೇಕಾರ್ಡ್ ಹಿಡಿದು ನಿಂತಿದ್ದರು.

ಅಭಿಮಾನಿ ಟಿಕೆಟ್‌ಗಾಗಿ ಮನವಿ ಮಾಡುತ್ತಿರುವ ಚಿತ್ರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.

ಓದಿ: 

ವಿಶೇಷವೆಂದರೆ, ಭಾರತ ಮತ್ತು ಪಾಕಿಸ್ತಾನ ನಡುವಣ ಟ್ವೆಂಟಿ-20 ಪಂದ್ಯದ ಎಲ್ಲ ಟಿಕೆಟ್‌ಗಳೂ ಈಗಾಗಲೇ ಮಾರಾಟವಾಗಿವೆ.

ಶ್ರೀಲಂಕಾದ ಅಭಿಮಾನಿಗೆ ರೋಹಿ‘ತ’!

2017ರಲ್ಲಿ ರೋಹಿತ್ ಶರ್ಮಾ ಶ್ರೀಲಂಕಾದ ತಮ್ಮ ಅಭಿಮಾನಿ ಮೊಹಮ್ಮದ್ ನೀಲಂ ಎಂಬವರಿಗೆ (ನೀಲಂ ತಂದೆಯ ಅನಾರೋಗ್ಯದ ನಿಮಿತ್ತ ಶ್ರೀಲಂಕಾಕ್ಕೆ ತೆರಳಬೇಕಾಗಿ ಬಂದಿತ್ತು) ತವರಿಗೆ ಮರಳಲು ವಿಮಾನದ ಟಿಕೆಟ್ ಮಾಡಿಸಿಕೊಟ್ಟಿದ್ದರು. ಜತೆಗೆ, ಅಭಿಮಾನಿಯ ತಂದೆಯ ಚಿಕಿತ್ಸೆಗಾಗಿ ಸ್ವಲ್ಪ ಹಣವನ್ನೂ ಕೊಟ್ಟು ಕಳುಹಿಸಿದ್ದರು. ಮುಂದಿನ ಬಾರಿ ಕೊಲಂಬೊಗೆ ಬಂದಾಗ ಮನೆಗೆ ಭೇಟಿ ನೀಡುವುದಾಗಿಯೂ ಭರವಸೆ ನೀಡಿದ್ದರು.

ಬಳಿಕ ಶ್ರೀಲಂಕಾ ಪ್ರವಾಸದ ವೇಳೆ ಮೊಹಮ್ಮದ್ ನೀಲಂ ಅವರ ಮನೆಗೂ ಭೇಟಿ ನೀಡಿದ್ದರು.


ಅಭಿಮಾನಿಯೊಬ್ಬರು ಟಿಕೆಟ್‌ಗಾಗಿ ಮನವಿ ಮಾಡಿ ಪ್ಲೇಕಾರ್ಡ್ ಹಿಡಿದು ನಿಂತಿರುವುದು – ಟ್ವಿಟರ್ ಚಿತ್ರ

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು