ಅಹಮದಾಬಾದ್ (ಪಿಟಿಐ): ವಿಶ್ವಕಪ್ ಫೈನಲ್ ಆತಿಥ್ಯ ವಹಿಸುತ್ತಿರುವ ಕಾರಣ ನಗರದಲ್ಲಿ ಹೋಟೆಲ್ ಕೊಠಡಿಗಳ ದರದಲ್ಲಿ ವಿಪರೀತ ಏರಿಕೆಯಾಗಿದೆ. ಕೆಲವು ಹೋಟೆಲ್ಗಳಲ್ಲಿ ಶೇ 300 ರಿಂದ 400ರಷ್ಟು ಏರಿಕೆಯಾಗಿದೆ ಎಂದು ಉದ್ಯಮದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಸಾಮಾನ್ಯ ದಿನಗಳಲ್ಲಿ ವಿವಿಧ ದರ್ಜೆಗಳ ಹೋಟೆಲ್ ಕೊಠಡಿಗಳು ₹5,000 ದಿಂದ 20,000 ವರೆಗೆ ದರ ನಿಗದಿಪಡಿಸುತ್ತಿದ್ದವು. ಈಗ ಈ ಮೊತ್ತ ₹15,000 ದಿಂದ ₹50,000 ವರೆಗೆ ಏರಿಕೆಯಾಗಿದೆ ಎಂದು ಉದ್ಯಮಿ ಹಾಗೂ ಗುಜರಾತ್ ಹೋಟೆಲ್ಸ್ ಮತ್ತು ರೆಸ್ಟೊರೆಂಟ್ಸ್ ಸಂಘದ ಅಧ್ಯಕ್ಷ ನರೇಂದ್ರ ಸೊಮಾನಿ ತಿಳಿಸಿದ್ದಾರೆ.

ಬೇಡಿಕೆ ಹೆಚ್ಚಾದ ಪರಿಣಾಮ ಕೊಠಡಿಗಳ ಬಾಡಿಗೆ ದರ ಏರಿಕೆಯಾಗಿದೆ.

ಸಿಂಧು ಭವನ್ ರಸ್ತೆಯ ತಾಜ್ ಸ್ಕೈಲೈನ್ನಲ್ಲಿ ಡಿಲಕ್ಸ್ ಕೊಠಡಿ ದರ ಈಗಾಗಲೇ ₹2.01 ಲಕ್ಷ ತಲುಪಿದೆ. ಜೊತೆಗೆ ಜಿಎಸ್ಟಿ ಹೆಚ್ಚುವರಿಯಾಗಿ ₹36,000 ತೆರಬೇಕಾಗುತ್ತದೆ. ಇದು ಭಾನುವಾರ ರಾತ್ರಿಯ ದರ. ಇತರೆ ದಿನಗಳಲ್ಲಿ ದರ ₹15,000 ಆಸುಪಾಸಿನಲ್ಲಿರುತ್ತದೆ.

ಆಶ್ರಮ ರಸ್ತೆಯ ಐಟಿಸಿಯ ವೆಲ್ಕಮ್ ಹೋಟೆಲ್ನಲ್ಲಿ ₹6,000–8,000 ಇರುವ ಬಾಡಿಗೆ ದರ ಸುಮಾರು 21,000 ಆಗಿದೆ. ಹಯಾತ್ ರೀಜೆನ್ಸಿ ಹೋಟೆಲ್ನ ಕೊಠಡಿಗಳಲ್ಲಿ ತಂಗಲು ಬಯಸುವವರು ₹30,000 ತೆರಲು ಸಿದ್ಧರಾಗಬೇಕಿದೆ. ಇತರೆ ದಿನ ಈ ಮೊತ್ತ ₹6,000 ದಿಂದ 8,000 ವರೆಗೆ ಇರುತ್ತದೆ.

ಅಹಮದಾಬಾದಿನಲ್ಲಿ ಸುಮಾರು 10,000 ಹೋಟೆಲ್ ಕೊಠಡಿಗಳು ಇವೆ ಎನ್ನುತ್ತವೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.