ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ನ್ಯೂಜಿಲೆಂಡ್‌ಗೆ ಡೆರಿಲ್‌ ಬಲ

Last Updated 28 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಸಿಡ್ನಿ: ನ್ಯೂಜಿಲೆಂಡ್‌ ತಂಡದವರು ವಿಶ್ವಕಪ್‌ ಟಿ20 ಟೂರ್ನಿಯ ಪಂದ್ಯದಲ್ಲಿ ಶನಿವಾರ ಶ್ರೀಲಂಕಾ ತಂಡವನ್ನು ಎದುರಲಿದ್ದು, ಆಲ್‌ರೌಂಡರ್‌ ಡೆರಿಲ್‌ ಮಿಚೆಲ್‌ ಅವರ ಆಗಮನದಿಂದ ಬಲ ಹೆಚ್ಚಿದೆ.

ಕಳೆದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ಫೈನಲ್‌ ಪ್ರವೇಶಿಸುವಲ್ಲಿ ಮಿಚೆಲ್‌ ಪ್ರಮುಖ ಪಾತ್ರ ವಹಿಸಿದ್ದರು. ಕೈಬೆರಳಗಿನ ಗಾಯದ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿದ್ದು, ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

‘ಡೆರಿಲ್‌ ಅವರು ಫಿಟ್‌ನೆಸ್‌ ಪರೀ ಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರೆ. ಅವರಿಗಾಗಿ ಮಾರ್ಕ್‌ ಚಾಪ್‌ಮನ್‌ ತಮ್ಮ ಸ್ಥಾನ ಬಿಟ್ಟುಕೊಡಲಿದ್ದಾರೆ’ ಎಂದು ನ್ಯೂಜಿಲೆಂಡ್‌ ತಂಡದ ವೇಗದ ಬೌಲರ್‌ ಟಿಮ್‌ ಸೌಥಿ ಶುಕ್ರವಾರ ತಿಳಿಸಿದರು.

ಶ್ರೀಲಂಕಾ ವಿರುದ್ಧ ಗೆದ್ದು, ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದು ನ್ಯೂಜಿಲೆಂಡ್‌ ತಂಡದ ಗುರಿ.

‘ಶ್ರೀಲಂಕಾ ಅಪಾಯಕಾರಿ ತಂಡ ಎಂಬುದರ ಅರಿವು ನಮಗಿದೆ. ಅವರು ಎದುರಾಳಿಗಳಿಗೆ ಯಾವಾಗಲೂ ಸವಾಲು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಸ್ಪಿನ್‌ ಬೌಲಿಂಗ್‌ ಅವರ ಪ್ರಮುಖ ಶಕ್ತಿ’ ಎಂದು ಸೌಥಿ ಹೇಳಿದರು.

ಬಿನುರಾ ಬದಲು ಅಸಿತಾ: ಗಾಯಾಳು ಬಿನುರಾ ಫೆರ್ನಾಂಡೊ ಬದಲು ಮಧ್ಯಮ ವೇಗದ ಬೌಲರ್‌ ಅಸಿತಾ ಫೆರ್ನಾಂಡೊ ಅವರು ಶ್ರೀಲಂಕಾ ತಂಡವನ್ನು ಸೇರಿಕೊಳ್ಳಲಿದ್ಧಾರೆ.

‘ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ಐಸಿಸಿ ತಾಂತ್ರಿಕ ಸಮಿತಿ ಅನುಮತಿ ನೀಡಿದೆ. ಅಸಿತಾ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಮಂಗಳವಾರ ನಡೆದ ಪಂದ್ಯದ ವೇಳೆ ಬಿನುರಾ ಗಾಯಗೊಂಡಿದ್ದರು. ಆ ಪಂದ್ಯವನ್ನು ಲಂಕಾ ಏಳು ವಿಕೆಟ್‌ಗಳಿಂದ ಸೋತಿತ್ತು.

‘ನ್ಯೂಜಿಲೆಂಡ್‌ ಪ್ರಬಲ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ನಾವು ಕಠಿಣ ಗುಂಪಿನಲ್ಲಿರುವ ಕಾರಣ ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಅನಿವಾರ್ಯ. ನ್ಯೂಜಿಲೆಂಡ್‌ ವಿರುದ್ಧ ಶ್ರೇಷ್ಠ ಆಟವಾಡುವುದು ಗುರಿ’ ಎಂದು ಲಂಕಾ ತಂಡದ ಸಹಾಯಕ ಕೋಚ್‌ ನವೀದ್‌ ನವಾಜ್‌ ಹೇಳಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಹಾಟ್‌ಸ್ಟಾರ್‌ ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT