ಶನಿವಾರ, ಡಿಸೆಂಬರ್ 4, 2021
24 °C

ಸುನಿಲ್ ಗವಾಸ್ಕರ್, ಕಪಿಲ್ ದೇವ್ ಜೊತೆ ಸಮಯ ಕಳೆದ ಶೋಯಬ್ ಅಖ್ತರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: 'ರಾವಿಲ್ಪಿಂಡಿ ಎಕ್ಸ್‌ಪ್ರೆಸ್' ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್, ಭಾರತದ ಮಾಜಿ ದಿಗ್ಗಜರಾದ ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾಗಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿರುವಂತೆಯೇ ಈ ಭೇಟಿ ನಡೆದಿದೆ.

ಇದನ್ನೂ ಓದಿ: 

ಈ ಕುರಿತು ಸ್ವತ: ಶೋಯಬ್ ಅಖ್ತರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕ್ರಿಕೆಟ್‌ನ ಅತಿ ದೊಡ್ಡ ಹಣಾಹಣಿಗೂ ಮುನ್ನ ದಿಗ್ಗಜರನ್ನು ಭೇಟಿಯಾಗಿ ಸಮಯ ಕಳೆದಿರುವುದಾಗಿ ಉಲ್ಲೇಖಿಸಿದ್ದಾರೆ.

 

 

 

ದಿಗ್ಗಜರೊಂದಿಗೆ ನಗೆ ಚಟಾಕಿ ಹಾರಿಸುತ್ತಿರುವ ಅಖ್ತರ್, ಕಪಿಲ್ ಹಾಗೂ ಗವಾಸ್ಕರ್ ಅವರಿಗೆ ಮಸಾಜ್ ಮಾಡುತ್ತಿರುವಂತೆಯೇ ಕಂಡುಬಂದಿದೆ.

 

ಅಖ್ತರ್ ಹಂಚಿರುವ ಚಿತ್ರದಲ್ಲಿ ಕಪಿಲ್, ಗವಾಸ್ಕರ್ ಜೊತೆಗೆ ಜಹೀರ್ ಅಬ್ಬಾಸ್ ಕೂಡ ಇದ್ದಾರೆ.

ಅಂದ ಹಾಗೆ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ-ವೋಲ್ಟೇಜ್ ಪಂದ್ಯವು ಅಕ್ಟೋಬರ್ 24ರಂದು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು