ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಬಾಬರ್ ಅಷ್ಟೇನೂ ಜಾಣರಲ್ಲ: ವಾಸೀಂ ಅಕ್ರಂ

Last Updated 28 ಅಕ್ಟೋಬರ್ 2022, 16:38 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಂ ಅವರು ತಂಡದ ಆಯ್ಕೆ ವಿಚಾರದಲ್ಲಿ ಅಷ್ಟೇನೂ ಜಾಣರಲ್ಲ ಎಂದುವೇಗದ ಬೌಲಿಂಗ್ ದಿಗ್ಗಜ ವಾಸೀಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.ಹಾಗೆಯೇ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ಅನುಭವಿ ಶೋಯಬ್‌ ಮಲಿಕ್‌ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನ ತಂಡ ಸೂಪರ್‌ 12ರ ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಕ್ಟೋಬರ್‌ 23ರಂದು ನಡೆದ ಮೊದಲ ಪಂದ್ಯದಲ್ಲಿಭಾರತ ಎದುರು 4 ವಿಕೆಟ್‌ ಅಂತರದಿಂದ ಮಣಿದಿತ್ತು. ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಕೇವಲ 1 ರನ್ ಅಂತರದಿಂದ ಸೋಲೊಪ್ಪಿಕೊಡಿತ್ತು.

ಎರಡೂ ಪಂದ್ಯಗಳಲ್ಲಿ ಆರಂಭಿಕ ಆಟಗಾರರು ಕೈಕೊಟ್ಟಿದ್ದರು. ಆದರೆ, ಶಾನ್‌ ಮಸೂದ್‌ ತಂಡದ ನೆರವಿಗೆ ನಿಂತಿದ್ದರು. ಮೊದಲ ಪಂದ್ಯದಲ್ಲಿ ಇಫ್ತಿಕಾರ್‌ ಅಹಮದ್‌ ಅರ್ಧಶತಕ ಗಳಿಸಿದ್ದನ್ನು ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿ ಬಂದಿರಲಿಲ್ಲ. ಅದರಲ್ಲೂ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು 37 ಎಸೆತಗಳಲ್ಲಿ 43 ರನ್ ಗಳಿಸಬೇಕಿತ್ತು. 7 ವಿಕೆಟ್‌ ಬಾಕಿ ಇದ್ದುದರ ಹೊರತಾಗಿಯೂ ಹೀನಾಯ ಸೋಲು ಕಂಡಿತ್ತು.

ಈ ಬಗ್ಗೆ ಮಾತನಾಡಿರುವ ವಾಸೀಂ ಅಕ್ರಂ, ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ.ಶೋಯಬ್‌ ಮಲಿಕ್‌ ತಂಡದಲ್ಲಿ ಇಲ್ಲದಿರುವುದು ಅದಕ್ಕೆ ಕಾರಣ. ನಾನು ನಾಯಕನಾಗಿದ್ದರೆ ಅವರನ್ನು ಆಯ್ಕೆ ಮಾಡುತ್ತಿದ್ದೆ. ನನ್ನ ಅಂತಿಮ ಗುರಿ ವಿಶ್ವಕಪ್‌ ಗೆಲ್ಲುವುದೇ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

ವಿಶ್ವಕಪ್‌ ಗೆದ್ದು ಕೊಡುವ ಸಾಮರ್ಥ್ಯ ಇರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ. ನಾನು ಶೋಯಬ್‌ ಮಲಿಕ್‌ ಮಧ್ಯಮ ಕ್ರಮಾಂಕದಲ್ಲಿ ಇರಬೇಕು ಎಂದು ಬಯಸಿದ್ದರೆ, ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮನವರಿಕೆ ಮಾಡುತ್ತಿದ್ದೆ. ನನ್ನ ಆಯ್ಕೆಯಂತೆ ತಂಡ ಇರದಿದ್ದರೆ ತಂಡ ಮುನ್ನಡೆಸುವುದಿಲ್ಲ ಎಂದು ಹೇಳುತ್ತಿದ್ದೆ' ಎಂದು ಕ್ರೀಡಾವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ತಂಡದ ಆಯ್ಕೆ ವಿಚಾರದಲ್ಲಿ ಬಾಬರ್‌ ಮತ್ತಷ್ಟು ಜಾಣರಾಗಿರಬೇಕು. ಇದೇನುಗಲ್ಲಿ ಕ್ರಿಕೆಟ್‌ ಅಲ್ಲ. ವಿಶ್ವಕಪ್‌ ನಡೆಯುತ್ತಿರುವುದುಆಸ್ಟ್ರೇಲಿಯಾದಲ್ಲಿ.ಶಾರ್ಜಾ, ದುಬೈ ಅಥವಾ ಪಾಕಿಸ್ತಾನವಲ್ಲ. ನಾನು ಆಯ್ಕೆಗಾರನಾಗಿದ್ದರೆ, ಮಲಿಕ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಮೊದಲ ದಿನವೇ ಆಯ್ಕೆ ಮಾಡಿರುತ್ತಿದ್ದೆಎಂದಿದ್ದಾರೆ.

ಮಲಿಕ್‌ ಅವರು 2021ರಲ್ಲಿ ಕೊನೆಯ ಬಾರಿಗೆ ಪಾಕ್‌ ಪರ ಆಡಿದ್ದರು. 124 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು111 ಇನಿಂಗ್ಸ್‌ಗಳಿಂದ 31.22ರ ಸರಾಸರಿಯಲ್ಲಿ2,435 ರನ್ ಗಳಿಸಿದ್ದಾರೆ.

ಪಾಕಿಸ್ತಾನ ತಂಡ ಸೂಪರ್ 12ರ ಹಂತದ ಮುಂದಿನ ಮೂರು ಪಂದ್ಯಗಳನ್ನು ಕ್ರಮವಾಗಿ ನೆದರ್‌ಲೆಂಡ್ಸ್‌ (ಅಕ್ಟೋಬರ್‌ 30), ದಕ್ಷಿಣ ಆಫ್ರಿಕಾ (ನವೆಂಬರ್ 3) ಹಾಗೂ ಬಾಂಗ್ಲಾದೇಶ (ನವೆಂಬರ್ 6) ವಿರುದ್ಧ ಆಡಲಿದೆ. ಮೊದಲೆರಡೂ ಪಂದ್ಯಗಳಲ್ಲಿ ಸೋತಿರುವುದರಿಂದಸೆಮಿಫೈನಲ್‌ ಪ್ರವೇಶಿಸುವುದು ಕಠಿಣವೆನಿಸಿದೆ. ಉಳಿದ ತಂಡಗಳ ಪಂದ್ಯಗಳ ಫಲಿತಾಂಶವುಪಾಕ್‌ ಪಡೆಯಭವಿಷ್ಯ ನಿರ್ಧರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT