ಜಗತ್ತನ್ನು ಆವರಿಸಿರುವ ಯುದ್ಧದ ಕಾರ್ಮೋಡ ಮನುಕುಲವನ್ನು ತಲ್ಲಣಗೊಳಿಸಿದೆ. ಅದು ಬೀರಿದ ಕರಿನೆರಳ ಅಂಗಳದಲ್ಲಿಯೇ ರಾಜಕೀಯ ಲಾಭದ ಲೆಕ್ಕಾಚಾರವೂ ಒಂದೆಡೆ ಇದೆ. ಇದೆಲ್ಲ ದೇಶಕಾಲಗಳ ಮಿತಿಯಿಲ್ಲದೆ ತಣ್ಣಗೆ ಅದರ ಪಾಡಿಗೆ ಅದು ನಡೆಯುವ ವಿದ್ಯಮಾನ. ಗಡಿಯಾಚೆಗಿನ ರಾಜಕಾರಣಕ್ಕಿಂತ ಗಡಿಯೊಳಗಿನ ರಾಜಕೀಯ ಪಟ್ಟು ಭಿನ್ನ. ಹೀಗಿರುವ ಪರಿಸ್ಥಿತಿಯಲ್ಲಿ ಲಿಂಗರಾಜಕಾರಣದ ಮಜಲು ಮತ್ತೊಂದು ಬಗೆ. ಲಿಂಗ ಭೇದ ಕಾರ್ಮುಗಿಲಲ್ಲಿ ಆಗಾಗ ಔದಾರ್ಯದ ಕೋಲ್ಮಿಂಚು ರಾಚುತ್ತದೆ. ಅದು ಸೋಜಿಗ ಹುಟ್ಟಿಸುವ ಸಮಾಧಾನ ನೀಡುವುದು ಸಳ್ಳಲ್ಲ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿರುವುದು ಅಂತಹ ಸಣ್ಣ ಸಮಾಧಾನಕ್ಕೆ ನಾಂದಿ ಹಾಡಿದೆ. ಎಲ್ಲೋ ಕವಿದ ಕಾರ್ಮೋಡ ಮಳೆಸುರಿದು ಬಿಳಿಚಿದ ಮೋಡದಂತೆ ಭಾಸವಾಗುತ್ತಿದೆ.

ಕ್ರೀಡಾಂಗಳದಲ್ಲಿ ಚಂಡು ಹಿಡಿಯುವ ಕನಸನ್ನೂ ಕಾಣದೆ, ಅಂಪೇರ್ ಆಗಿ ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಆರಂಭಿಸುತ್ತಾರೆ ಎಂಬ ಕಲ್ಪನೆಯನ್ನೂ ಅವರು ಮಾಡಿರಲಿಕ್ಕಿಲ್ಲ. ಲಿಂಗ ತಾರತಮ್ಯದ ಕರಾಳ ಇತಿಹಾಸದಲ್ಲಿ ಬದಲಾವಣೆಗೆ ಮುನ್ನುಡಿಯಂತೆ ಅವರ ಹೆಜ್ಜೆಯ ಗುರುತುಗಳು ಕ್ರೀಡಾಂಗಣದಲ್ಲಿ ಮೂಡಿವೆ. ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಕೆಲವು ದಿನಗಳ ಹಿಂದೆ ಅಂಪೇರ್ಗಳನ್ನು ನೇಮಕ ಮಾಡಿಕೊಂಡಿತು. ಅದಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಪ್ರಕಟಣೆಯನ್ನೂ ನೀಡಿತು. ಅದೇ ಮೊದಲಬಾರಿಗೆ ಆ ಪ್ರಕಟಣೆಯಲ್ಲಿ ಲಿಂಗತ್ವಕ್ಕೆ ಸಂಬಂಧಿಸಿದಂತೆ ‘ಇತರೆ’ ಎನ್ನುವ ಪದವನ್ನು ಸೇರಿಸಿತು. ಪುರುಷ–ಮಹಿಳೆ ಮಾತ್ರವಲ್ಲದೆ ‘ಇತರೆ’ ಎನ್ನುವ ಆ ಕೋರಿಕೆ ಕೊರಗುತ್ತಿದ್ದ ಜೀವಕ್ಕೆ ಬದುಕು ಸಿಕ್ಕೀತೆಂಬ ಭರವಸೆಯನ್ನು ಮೂಡಿಸಿದೆ. ತಮ್ಮ ಅಚಲ ವಿಶ್ವಾಸದಿಂದ ಮಾಡಿದ ಪ್ರಯತ್ನ ಅವರ ಮೊಗದಲ್ಲಿ ಹೂನಗೆಯನ್ನು ಬೀರಿದೆ.

ನಗುಬಿರಿದ ಮಲ್ಲಿಗೆಯ ಆ ಕಂಪನ್ನು ಬೀರಿದ್ದು ಸೇಲಂನ 31 ವರ್ಷದ ರಿತಿಕಾ ಶ್ರೀ. ಆಕೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮಹಿಳೆ. ಸಮಾಜದಲ್ಲಿ ಹಾಸುಹೊಕ್ಕಾದ ಲಿಂಗಭೇದ ತಾರತಮ್ಯವನ್ನು ಈಗ ಆಕೆ ಮೆಟ್ಟಿ ನಿಂತಿದ್ದಾರೆ. ಅವರ ಆ ಅಪೂರ್ವ ಹೆಜ್ಜೆ ಗುರುತು ರಾಜ್ಯವೊಂದರ ಮೊಟ್ಟಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ಎನ್ನುವ ಗುರುತನ್ನು ಬೆರಳು ಮಾಡಿ ತೋರಿಸುವಂತೆ ಆಗಿದೆ. ತಮಿಳುನಾಡಿನ ಮೊದಲ ಲಿಂಗ ಪರಿವರ್ತಿತ (Transgender) ಮಹಿಳೆಯ ನಿಶ್ಚಲ ಪ್ರಯತ್ನ ಗುರಿ ಮುಟ್ಟಲು ರತ್ನಗಂಬಳಿಯನ್ನು ಹಾಸಿದಂತೆ ಗೋಚರಿಸುತ್ತಿದೆ. ಆದರೆ ಅದು ಸುಲಭದ ದಾರಿಯೇನೂ ಆಗಿರಲಿಲ್ಲ.

ಕನಸಿಗೆ ರೆಕ್ಕೆ ಕಟ್ಟಿದ್ದು ಕೋವಿಡ್

ರಿತಿಕಾ ಶ್ರೀ ಮೂಲ ಹೆಸರು ‘ಆರ್. ಮುತ್ತುರಾಜ್’ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪೂರೈಸಿದ ಅವರು ಕಾಲ್ ಸೆಂಟರ್ನಲ್ಲಿ ವೃತ್ತಿಯನ್ನು ಆರಂಭಿಸುತ್ತಾರೆ. ಪಂಜಾಬ್ನ ಮೊಹಾಲಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಉದ್ಯೋಗಕ್ಕೆ ಕೋವಿಡ್–19 ಕಂಟಕವನ್ನು ತಂದು ಒಡ್ಡಿತು. ಕೆಲಸವನ್ನು ಕಳೆದುಕೊಂಡ ಬಳಿಕ ಮುತ್ತುರಾಜ್ ತಮ್ಮ ತವರಿಗೆ ಮರಳುತ್ತಾರೆ. ಮೊದಲಿನಿಂದಲೂ ಕ್ರಿಕೆಟ್ ಪಂದ್ಯಗಳನ್ನು ಟೀವಿಯಲ್ಲಿ ನೋಡುವ ಹವ್ಯಾಸವನ್ನು ಅವರು ರೂಢಿಸಿಕೊಂಡಿದ್ದರು. ಟೀವಿಯನ್ನು ನೋಡುತ್ತಿದ್ದ ಅವರ ಮನದಲ್ಲಿ ಅಂಪೈರ್ ಆಗುವ ಕನಸು ಗರಿಗೆದರಿತ್ತು.

ಆ ನಿಟ್ಟಿನ ಮೊದಲ ಪ್ರಯತ್ನವನ್ನು ಮಾಡುತ್ತಾರೆ. ಸೇಲಂ ಜಿಲ್ಲಾ ಅಂಪೈರ್ ಸಂಘದ ಅಧ್ಯಕ್ಷ ಜಯರಾಮನ್ ಅವರನ್ನು ಭೇಟಿಯಾಗಿ ತಮ್ಮ ಮನದಿಂಗಿತವನ್ನು ತೋಡಿಕೊಳ್ಳುತ್ತಾರೆ. ಅವರ ನೆರವಿನಿಂದ ಅಂಪೈರ್ ಕಾರ್ಯವನ್ನು ನಿರ್ವಹಿಸುತ್ತಾರೆ. ಆಗಲೂ ಮುತ್ತುರಾಜ್ ಆಗಿದ್ದ ಅವರು ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಆಗ ಅನೇಕರಿಂದ ನಿಂದನೆಗೆ ಒಳಗಾಗುತ್ತಾರೆ. ತನ್ನಿಂದಾಗದ ಕೆಲಸ ಎಂದು ನಿರ್ಧರಿಸಿ ಅದನ್ನು ಬಿಡಲು ಮುಂದಾಗುತ್ತಾರೆ. ಒಮ್ಮೆ ಅಂಪೈರ್ ಸಂಘದ ಅಧ್ಯಕ್ಷ ಜಯರಾಮನ್ ಅವರ ಪತ್ನಿ ಜೊತೆ ತಾನು ಇದಕ್ಕೆ ಅರ್ಹನಲ್ಲ. ಈ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯ ಆಗುತ್ತಿಲ್ಲ ಎನ್ನುವ ಅಳಲನ್ನು ತೋಡಿಕೊಳ್ಳುತ್ತಾಳೆ. ಮಾತ್ರವಲ್ಲದೆ ಅವರ ಮನದಲ್ಲಿ ಅಡಗಿದ್ದ ಲಿಂಗತ್ವ ಐಡೆಂಟಿ, ಅದರ ವೇದನೆಯನ್ನೂ ಬಹಿರಂಗಪಡಿಸುತ್ತಾರೆ. ಮುತ್ತುರಾಜ್ ಸಹಾಯಕ್ಕೆ ಅವರೂ ನಿಲ್ಲುತ್ತಾರೆ. ಅಲ್ಲದೆ ಪತಿ ಜಯರಾಮನ್ ಅವರಿಗೆ ಪ್ರೋತ್ಸಾಹಿಸಲು ದುಂಬಾಲು ಬೀಳುತ್ತಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರ ಎಲ್ಲ ರೀತಿಯಿಂದಲೂ ನೆರವು ನೀಡುತ್ತಿದೆ. ಅಂಜಿಕೆಯನ್ನು ಮೀರಿ ಮನದಿಂಗಿತದಂತೆ ಬದುಕಲು ಪ್ರೇರಣೆ ನಿಡುತ್ತಾರೆ. ನಂತರ ಸರ್ಜರಿ ಮಾಡಿಸಿ ಲಿಂಗಪರವರ್ತಿತ ಮಹಿಳೆ ಆಗುತ್ತಾರೆ. ತಮ್ಮ ಹೆಸರನ್ನು ರಿತಿಕಾ ಶ್ರೀ ಎಂದು ಬದಲಿಸುತ್ತಾರೆ. ತಮಿಳುನಾಡು ಕ್ರಿಕೆಟ್ ಚರಿತ್ರೆಯಲ್ಲಿ ಅದನ್ನು ಸ್ಥಿರ ಸ್ಥಾಯಿಗೊಳಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಕ್ರಿಕೆಟ್ ಪ್ರೀತಿ ಮತ್ತು ಗುರಿ ಸಾಧಿಸಲು ‘ಲಿಂಗತ್ವ ಐಡೆಂಟಿಟಿ’ ಅಡ್ಡಿಯಾಗಿಲ್ಲ ಎನ್ನುವುದನ್ನು ಆಕೆಯ ಯಶಸ್ಸು ಮತ್ತೆ ಮತ್ತೆ ಹೇಳುತ್ತದೆ.

(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.