ಢಾಕಾ: ಬಾಂಗ್ಲಾದೇಶ ಕ್ರಿಕೆಟ್ನ ಘನತೆಯನ್ನು ಪುನಃಸ್ಥಾಪಿಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಾತ್ಕಾಲಿಕ ಸಮಿತಿ ಮುಖ್ಯಸ್ಥ ತಮಿಮ್ ಇಕ್ಬಾಲ್ ಹೇಳಿದ್ದಾರೆ.

ರಾಷ್ಟ್ರೀಯ ಕ್ರೀಡಾ ಮಂಡಳಿಯು (ಎನ್ಎಸ್ಸಿ), ಬಿಸಿಬಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ನೇತೃತ್ವದಲ್ಲಿ 11 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ 2024ರಲ್ಲಿ ಪತನಗೊಂಡ ನಂತರ, ರಾಜಕೀಯ ಹಾಗೂ ಕ್ರಿಕೆಟ್ ಒಂದಕ್ಕೊಂದು ಹೆಣೆದುಕೊಂಡಿವೆ.

ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಸಿಬಿಗೆ 2025ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ವರದಿಯಾದ ಹಿನ್ನೆಲೆಯಲ್ಲಿ ಮಂಡಳಿಯನ್ನು ವಿಸರ್ಜಿಸಲಾಗಿದೆ ಎಂದು ಎನ್ಎಸ್ಸಿ ತಿಳಿಸಿದೆ.

37 ವರ್ಷದ ತಮಿಮ್ ನೇತೃತ್ವದ ತಾತ್ಕಾಲಿಕ ಸಮಿತಿಯಲ್ಲಿ ಅಥರ್ ಅಲಿ ಖಾನ್, ರಶ್ನಾ ಇಮಾಮ್, ಮಿರ್ಜಾ ಯಾಸಿರ್ ಅಬ್ಬಾಸ್, ಸೈಯದ್ ಇಬ್ರಾಹಿಂ ಅಹ್ಮದ್, ಮಿನ್ಹಾಜುಲ್ ಅಬೇದಿನ್ ನನ್ನು, ಇಶ್ರಾಫಿಲ್ ಖುಸ್ರೂ, ತಂಝಿಮ್ ಚೌಧರಿ, ಸಲ್ಮಾನ್ ಇಸ್ಪಾಹಾನಿ ಮತ್ತು ರಫೀಕುಲ್ಹಾ ಇಸ್ಲಾಂ ಇದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು15,000ಕ್ಕೂ ಹೆಚ್ಚು ರನ್ ಗಳಿಸಿರುವ ತಮಿಮ್, ಮೂರೂ ಮಾದರಿಯಲ್ಲಿ ಬಾಂಗ್ಲಾ ಪರ ಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಬಾಂಗ್ಲಾದೇಶ ಕ್ರಿಕೆಟ್ ಕಳೆದುಕೊಂಡಿರುವ ಘನತೆಯನ್ನು ಪುನಃಸ್ಥಾಪಿಸುವುದೇ ನಮ್ಮ ಮೊದಲ ಕರ್ತವ್ಯ. ಕಳೆದ 18 ತಿಂಗಳಲ್ಲಿ ಆಗಿರುವ ನಷ್ಟವನ್ನು ಸರಿಪಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ' ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್ ಆಡಲು ನಿರಾಕರಣೆ
ಭಾರತ ಹಾಗೂ ಬಾಂಗ್ಲಾದೇಶ ನಡುವಣ ರಾಜತಾಂತ್ರಿಕ ಸಂಬಂಧ ಹಳಸಿದ ಕಾರಣ, ಬಾಂಗ್ಲಾದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರಿಗೆ ಐಪಿಎಲ್ ಆಡುವ ಅವಕಾಶವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಬಿ, ಭಾರತದಲ್ಲಿ ವಿಶ್ವಕಪ್ ಆಡಲು ನಿರಾಕರಿಸಿತ್ತು.

ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿತ್ತು. ಆದರೆ, ಬಾಂಗ್ಲಾ ಮನವಿಯನ್ನು ಐಸಿಸಿ ಮಾನ್ಯ ಮಾಡಿರಲಿಲ್ಲ. ಹೀಗಾಗಿ, ಬಾಂಗ್ಲಾ ಪಡೆ, ವಿಶ್ವಕಪ್ನಿಂದಲೇ ಹೊರಗುಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.