ಚೆನ್ನೈ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ದೀರ್ಘ ಕಾಲದ ನಂತರ ಟೆಸ್ಟ್ ಕ್ರಿಕೆಟ್ ಅಭ್ಯಾಸಕ್ಕೆ ಮರಳಿದೆ.

ಹೊಸ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ತಂಡದ ಆಟಗಾರರು ಶುಕ್ರವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ರೋಹಿತ್, ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಇದ್ದರು. ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಕೂಡ ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದರು.

‘ಕ್ರಿಕೆಟ್ ಋತುವಿನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ತವರಿನಲ್ಲಿ ಕಣಕ್ಕಿಳಿಯಲು ಭಾರತ ತಂಡವು ಅಭ್ಯಾಸ ಶುರು ಮಾಡಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟರ್ ಹಾಕಿದೆ. ಗಂಭೀರ್ ಅವರು ತಮ್ಮ ನೆರವು ಸಿಬ್ಬಂದಿ ಮತ್ತು ನಾಯಕ ರೋಹಿತ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಚಿತ್ರಗಳೂ ಇದರಲ್ಲಿವೆ.

ರೋಹಿತ್ ಅವರು ಗುರುವಾರ ರಾತ್ರಿ ಚೆನ್ನೈಗೆ ಬಂದಿಳಿದರು. ವಿರಾಟ್ ಲಂಡನ್ನಿಂದ ನೆರವಾಗಿ ಚೆನ್ನೈಗೆ ಬಂದರು. ಅವರು ಬೆಳಗಿನ ಜಾವ ಬಂದರು. ವೇಗಿ ಜಸ್ಪ್ರೀತ್ ಬೂಮ್ರಾ, ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವಿಕೆಟ್ಕೀಪರ್ ರಿಷಭ್ ಪಂತ್ ಕೂಡ ಇದೇ ದಿನ ಬಂದರು.

ಆಟಗಾರರು ಸುಮಾರು ಒಂದು ತಿಂಗಳು ಬಿಡುವಿನ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕಣಕ್ಕೆ ಮರಳುತ್ತಿದ್ದಾರೆ. ಆಗಸ್ಟ್ನಲ್ಲಿ ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡವು ಆಡಿತ್ತು.

ಗಂಭೀರ್ ಅವರು ಮುಖ್ಯ ಕೋಚ್ ಆದ ನಂತರ ಭಾರತ ತಂಡವು ಆಡಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಬಾಂಗ್ಲಾ ತಂಡವು ಪಾಕಿಸ್ತಾನ ತಂಡವನ್ನು ಅದರ ತವರಿನಲ್ಲಿಯೇ ಮಣಿಸಿ ಸರಣಿ ಕಿರೀಟ ಧರಿಸಿತು. ಅದರಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿರುವ ಪ್ರವಾಸಿ ತಂಡವು ಭಾರತಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.

ಬಾಂಗ್ಲಾ ಎದುರಿನ ಎರಡು ಪಂದ್ಯಗಳ ಸರಣಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಭಾಗವಾಗಿದೆ. ಇದಾದ ನಂತರ ಭಾರತವು ತವರಿನಲ್ಲಿ ನ್ಯೂಜಿಲೆಂಡ್ ಎದುರು ಆಡಲಿದೆ. ಅದರ ನಂತರ ಆಸ್ಟ್ರೇಲಿಯಾದಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಲಿದೆ.

ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಭಾರತ (68.52%) ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (62.50%) ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾ ತಂಡವು (45.83) ನಾಲ್ಕನೇ ಸ್ಥಾನದಲ್ಲಿದೆ.

ಭಾರತ ತಂಡವು ಬಾಂಗ್ಲಾ ಎದುರು ಚೆನ್ನೈ(19ರಿಂದ23) ಹಾಗೂ ಕಾನ್ಪುರ (ಸೆ 27 ರಿಂದ ಅ.1) ನಗರಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.