ಭಾನುವಾರ, ಮೇ 16, 2021
22 °C

ಆಸ್ಟ್ರೇಲಿಯಾ ವಿರುದ್ಧ ಹಗಲು–ರಾತ್ರಿ ಟೆಸ್ಟ್ ಆಡಲು ಸಿದ್ಧ: ವಿರಾಟ್ ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಿರುವ ಭಾರತ ಕ್ರಿಕೆಟ್‌ ತಂಡವು ಟೆಸ್ಟ್‌ ಸರಣಿ ವೇಳೆ ಹಗಲು–ರಾತ್ರಿ ಪಂದ್ಯ ಆಡಲು ಸಿದ್ಧ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಅದರ ನಿಮಿತ್ತ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ನಾವು ಸವಾಲೊಡ್ಡಲು ಸಿದ್ಧವಾಗಿದ್ದೇವೆ. ಗಬ್ಬಾ, ಪರ್ತ್‌ ಯಾವುದೇ ಇರಲಿ. ಅದು ನಮಗೆ ಪ್ರಮುಖವಲ್ಲ. ಹಗಲು ರಾತ್ರಿ ಪಂದ್ಯವು ಟೆಸ್ಟ್‌ ಕ್ರಿಕೆಟ್‌ನ ಯಾವುದೇ ಸರಣಿಯ ಅತ್ಯುತ್ತಮ ವೈಶಿಷ್ಟ್ಯವಾಗಿ ಬದಲಾಗಿದೆ. ನಾವು ಹಗಲು ರಾತ್ರಿ ಪಂದ್ಯವಾಡಲು ಮುಕ್ತಾರಾಗಿದ್ದೇವೆ’ ಎಂದು ಹೇಳಿದರು.

ಭಾರತವು ಬಾಂಗ್ಲಾದೇಶ ವಿರುದ್ಧ ಕಳೆದ ನವೆಂಬರ್‌ನಲ್ಲಿ ಮೊದಲ ಸಲ ಹಗಲು–ರಾತ್ರಿ ಟೆಸ್ಟ್‌ ಪಂದ್ಯ ಆಡಿತ್ತು. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 46 ರನ್‌ ಅಂತರದ ಜಯ ಸಾಧಿಸಿತ್ತು.

‘ನಾವು ಇಲ್ಲಿ (ಭಾರತದಲ್ಲಿ) ಹಗಲು–ರಾತ್ರಿ ಪಂದ್ಯ ಆಡಿದ್ದೇವೆ. ಅದು ಆಯೋಜನೆಗೊಂಡಿದ್ದರ ಬಗ್ಗೆ ಸಂತಸವಿದೆ. ಯಾವುದೇ ದೇಶದಲ್ಲಿ, ಯಾವುದೇ ತಂಡದ ವಿರುದ್ಧ ಹೋರಾಡಲು ಒಂದು ತಂಡವಾಗಿ ಆಡುವ ಕೌಶಲ ನಮಗಿದೆ. ಅದು ಕ್ರಿಕೆಟ್‌ನ ಯಾವುದೇ ಮಾದರಿಯಾಗಿರಲಿ. ಕೆಂಪು ಅಥವಾ ಬಿಳಿ ಚೆಂಡಿನ ಸರಣಿಯಾಗಲಿ. ನಾವು ಆಡಲು ಸಿದ್ಧರಿದ್ದೇವೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು