ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಂದ್ರ ಸಿಂಗ್‌ ಧೋನಿ

Last Updated 30 ಮೇ 2019, 12:38 IST
ಅಕ್ಷರ ಗಾತ್ರ

ಮಹೇಂದ್ರ ಸಿಂಗ್‌ ಧೋನಿ

-07–07–1981ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಜನನ

-ವಿಕೆಟ್‌ ಕೀಪರ್‌, ಬಲಗೈ ಬ್ಯಾಟ್ಸ್‌ಮನ್‌

-2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

ವೃತ್ತಿ ಜೀವನದ ವಿವರಗಳು

1. ಧೋನಿ ಕ್ರಿಕೆಟ್‌ ರಂಗಕ್ಕೆ ಕಾಲಿಡುವುದಕ್ಕೂ ಮೊದಲು ಭಾರತೀಯ ರೈಲ್ವೆ ಇಲಾಖೆಯಲ್ಲಿಟಿಕೆಟ್‌ ಕಲೆಕ್ಟರ್‌ ಆಗಿದ್ದರು.

2. 2004ರಲ್ಲಿ ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು.

3. 2007ರಲ್ಲಿ ಟಿ20, ಏಕದಿನಕ್ರಿಕೆಟ್‌ನ ನಾಯಕರಾದರು. 2008ರಲ್ಲಿ ಟೆಸ್ಟ್‌ ಕ್ರಿಕೆಟ್‌ನ ಕ್ಯಾಪ್ಟನ್‌ ಆದರು.

4.ಟಿ20 ವಿಶ್ವಕಪ್‌, ಕ್ರಿಕೆಟ್‌ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ಆಗಿದ್ದ ಕಾರಣಕ್ಕೆ ನೀಡಲಾಗುವ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಭಾರತದ ಏಕೈಕ ನಾಯಕ ಮಹೇಂದ್ರ ಸಿಂಗ್‌ ಧೋನಿ.

5. ಧೋನಿ ನಾಯಕತ್ವದಲ್ಲಿ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್‌2007, ಐಸಿಸಿ ಕ್ರಿಕೆಟರ್‌ ವಿಶ್ವಕಪ್‌ 2011 ಗೆದ್ದಿದೆ. ಅಲ್ಲದೆ,ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಸತತ 18 ತಿಂಗಳ ಕಾಲ ಧೋನಿ ಅಗ್ರ ಸ್ಥಾನದಲ್ಲೇ ಮುನ್ನಡೆಸಿದ್ದರು.

6. ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು 8 ಭಾರಿ ನಾಯಕನಾಗಿ ಮುನ್ನಡೆಸಿದ್ದಾರೆ. ಅವರ ನಾಯಕತ್ವದ ಅಡಿಯಲ್ಲಿ ಚೆನ್ನೈ ತಂಡ ಎರಡು ಬಾರಿ ಚಾಂಪಿಯನ್‌ ಆಗಿದೆ. ನಾಲ್ಕು ಬಾರಿ ರನ್ನರ್‌ ಅಪ್‌ ಆಗಿದೆ.

7. 2008, 09ರಲ್ಲಿ ಐಸಿಸಿ ವರ್ಷದ ಏಕದಿನ ಎಂಬ ಗೌರವಕ್ಕೆ ಮಹೇಂದ್ರ ಸಿಂಗ್‌ ಧೋನಿ ಪಾತ್ರರಾಗಿದ್ದರು. ಇಂಥ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು.

8. ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಧೋನಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.

9. ಧೋನಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಹಲವು ಮಹತ್ವದ ಸರಣಿಗಳನ್ನು ಗೆದ್ದಿದೆ. ಹಲವು ಮೊದಲುಗಳನ್ನು ಸಾಧಿಸಿದೆ.

ಅಂಕಿ ಅಂಶಗಳಲ್ಲಿ ಮಾಹಿತಿ

ಬ್ಯಾಟಿಂಗ್‌/ ಫೀಲ್ಡಿಂಗ್‌ ವಿವರ

ಒಟ್ಟು ಪಂದ್ಯಗಳು–341

ಇನ್ನಿಂಗ್ಸ್‌–289

ನಾಟ್‌ ಔಟ್‌–82

ರನ್‌ಗಳು–10500

ಬೆಸ್ಟ್‌–183

ಸರಾಸರಿ–50.72

ಎದುರಿಸಿದ ಬಾಲ್‌ಗಳು–11992

ಸ್ಟ್ರೈಕ್‌ ರೇಟ್‌–87.55

ಶತಕಗಳು–10

ಅರ್ಧಶತಕಗಳು–71

ಬೌಂಡರಿಗಳು–806

ಸಿಕ್ಸರ್‌ಗಳು–224

ಕ್ಯಾಚ್‌ಗಳು–314

ಸ್ಟಂಪ್‌ಗಳು –120


ಬೌಲಿಂಗ್‌ ವಿವರ

ಒಟ್ಟು ಪಂದ್ಯಗಳು–341

ಇನ್ನಿಂಗ್ಸ್‌–2

ಬಾಲ್‌ಗಳು–36

ನೀಡಿದ ರನ್‌ಗಳು–31

ವಿಕೆಟ್‌ಗಳು–1

ಬೆಸ್ಟ್‌–1/14

ಸರಾಸರಿ–31.00

ಎಕಾನಮಿ–5.16

ಬೌಲಿಂಗ್‌ ಸ್ಟ್ರೈಕ್‌ ರೇಟ್‌–36.00

4 ವಿಕೆಟ್‌ಗಳು–0

ಮಾಹಿತಿ: ಐಸಿಸಿ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT