ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಶರ್ಮಾ

Last Updated 30 ಮೇ 2019, 12:32 IST
ಅಕ್ಷರ ಗಾತ್ರ

ರೋಹಿತ್‌ ಶರ್ಮಾ

–30/4/1987ರಲ್ಲಿ ಮಹಾರಾಷ್ಟ್ರದನಾಗಪುರದಲ್ಲಿ ಜನನ

–ಬಲಗೈ ಬ್ಯಾಟ್ಸ್‌ಮನ್‌, ಆಫ್‌ ಬ್ರೇಕ್‌ ಬೌಲರ್‌

–2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

ವೃತ್ತಿ ಜೀವನದ ವಿವರಗಳು

1. ರೋಹಿತ್‌ ಶರ್ಮಾ ಅವರು ಕ್ರಿಕೆಟ್‌ನ ಮುಖ್ಯವಾಹಿನಿಗೆ ಬರುವುದಕ್ಕೂ ಮೊದಲುಆಫ್‌ಸ್ಪಿನ್ನರ್‌ ಆಗಿ ಆಡುತ್ತಿದ್ದರು. ಆನಂತರ ಅವರು ಬ್ಯಾಟ್ಸ್‌ಮನ್‌ ಆಗಿ ರೂಪಾಂತರಗೊಂಡರು. ನಂತರ ಅದರಲ್ಲಿಯೇ ಯಶಸ್ಸು ಕಂಡುಕೊಂಡರು.

2. 2007ರಲ್ಲಿ ಬೆಲ್‌ಫೆಸ್ಟ್‌ನಲ್ಲಿ ಐರ್ಲೆಂಡ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

3. ಮೊದಲ ಎರಡು ಟೆಸ್ಟ್‌ ಪಂದ್ಯಗಳಲ್ಲೂ ಶತಕ ಸಿಡಿಸಿದ ಇಬ್ಬರು ಭಾರತೀಯರ ಪೈಕಿ ರೋಹಿತ್‌ ಶರ್ಮಾ ಅವರೂ ಒಬ್ಬರು. ಶರ್ಮಾ ಅವರಂತೆಯೇ ಸೌರವ್‌ ಗಂಗೂಲಿ ಅವರೂ ಈ ಸಾಧನೆ ಮಾಡಿದ್ದಾರೆ.

4. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿರೋಹಿತ್‌ ಶರ್ಮಾ 264ರನ್‌ಗಳನ್ನು ಸಿಡಿಸಿದ್ದಾರೆ. ಇದು ಅವರ ಬೆಸ್ಟ್‌. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ.

5. 2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅವರು ಎರಡು ಅರ್ಧಶತಕಗಳ ಮೂಲಕ ಭಾರತ ಚಾಂಪಿಯನ್‌ ಪಟ್ಟ ದಕ್ಕಿಸಿಕೊಳ್ಳಲು ನೆರವಾಗಿದ್ದರು. ಅದೇ ವರ್ಷ ಆಸ್ಟ್ರೇಲಿಯಾದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 209ರನ್‌ ಸಿಡಿಸಿ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದರು.

6. 2013ರಲ್ಲಿ ಮುಂಬೈ ಇಂಡಿಯನ್ಸ್‌ನ ನಾಯಕತ್ವ ವಹಿಸಿಕೊಂಡರು. ತಮ್ಮ ನಾಯಕತ್ವದಲ್ಲಿ ತಂಡವನ್ನು ಮೂರು ಬಾರಿ ಚಾಂಪಿಯನ್‌ ಆಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಅಂಕಿ ಅಂಶಗಳಲ್ಲಿ ಮಾಹಿತಿ

ಬ್ಯಾಟಿಂಗ್‌/ ಫೀಲ್ಡಿಂಗ್‌ ವಿವರ

ಒಟ್ಟು ಪಂದ್ಯಗಳು–206

ಇನ್ನಿಂಗ್ಸ್‌–200

ನಾಟ್‌ ಔಟ್‌–31

ರನ್‌ಗಳು–8010

ಬೆಸ್ಟ್‌–264

ಸರಾಸರಿ–47.39

ಎದುರಿಸಿದ ಬಾಲ್‌ಗಳು–9107

ಸ್ಟ್ರೈಕ್‌ ರೇಟ್‌–87.95

ಶತಕಗಳು–22

ಅರ್ಧಶತಕಗಳು–41

ಬೌಂಡರಿಗಳು–699

ಸಿಕ್ಸರ್‌ಗಳು–218

ಕ್ಯಾಚ್‌ಗಳು–73

ಸ್ಟಂಪ್‌ಗಳು–

ಬೌಲಿಂಗ್‌ ವಿವರ

ಒಟ್ಟು ಪಂದ್ಯಗಳು–206

ಇನ್ನಿಂಗ್ಸ್‌–38

ಬಾಲ್‌ಗಳು–593

ನೀಡಿದ ರನ್‌ಗಳು–515

ವಿಕೆಟ್‌ಗಳು–8

ಬೆಸ್ಟ್‌–‌2/27

ಸರಾಸರಿ–64.37

ಎಕಾನಮಿ–5.21

ಬೌಲಿಂಗ್‌ ಸ್ಟ್ರೈಕ್‌ ರೇಟ್‌–74.12

4 ವಿಕೆಟ್‌ಗಳು–0

ಮಾಹಿತಿ: ಐಸಿಸಿ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT