ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಅಗರವಾಲ್ ಭಾರತ ತಂಡದ ಆಸ್ತಿ ಎಂದ ವಿರಾಟ್ ಕೊಹ್ಲಿ

Last Updated 6 ಡಿಸೆಂಬರ್ 2021, 14:48 IST
ಅಕ್ಷರ ಗಾತ್ರ

ಮುಂಬೈ: ಆರಂಭಿಕ ಆಟಗಾರ ಮಯಂಕ್ ಅಗರವಾಲ್ ಅವರು ಭಾರತ ಕ್ರಿಕೆಟ್‌ ತಂಡದ ಆಸ್ತಿ ಎಂದುನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1–0 ಅಂತರದ ಜಯ ಸಾಧಿಸಿದೆ. ಇದರೊಂದಿಗೆ ತವರಿನಲ್ಲಿ ಆಡಿದ ಸತತ 14ನೇ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ

ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದ ವಿರಾಟ್, ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಆ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಬಳಿಕಮುಂಬೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿವಿರಾಟ್ ತಂಡ ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಭಾರತ ಬರೋಬ್ಬರಿ 372 ರನ್ ಅಂತರದ ಬೃಹತ್ ಜಯ ದಾಖಲಿಸಿತು.

ಶುಕ್ರವಾರ ಆರಂಭವಾದ ಪಂದ್ಯದಲ್ಲಿಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಮಯಂಕ್ ಶತಕದ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅಕ್ಷರ್‌ ಪಟೇಲ್ (52) ಮತ್ತು ಶುಭಮನ್ ಗಿಲ್ (44) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರೂ, ಉತ್ತಮವಾಗಿ ಬ್ಯಾಟ್‌ ಬೀಸಿದ ಅಗರವಾಲ್ 150 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.

ಇದರ ಬಲದಿಂದ ಭಾರತ 325 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡ ಕೇವಲ 62 ರನ್ ಗಳಿಸಿ ಆಲೌಟ್ ಆಗಿತ್ತು. 263 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಪಡೆ 7 ವಿಕೆಟ್ ನಷ್ಟಕ್ಕೆ276 ಗಳಿಸಿ ಡಿಕ್ಲೇರ್ ಮಾಡಿಕೊಂಡು, ಪ್ರವಾಸಿ ಪಡೆಗೆ 540 ರನ್‌ಗಳ ಕಠಿಣ ಗುರಿಯೊಡ್ಡಿತ್ತು.

ಆದರೆ,167 ರನ್ ಗಳಿಸಲಷ್ಟೇ ಶಕ್ತವಾದ ಕಿವೀಸ್ ತಂಡ372 ರನ್ ಅಂತರದ ಸೋಲೊಪ್ಪಿಕೊಂಡಿತು. ಮಯಂಕ್ ಎರಡನೇ ಇನಿಂಗ್ಸ್‌ನಲ್ಲಿಯೂ ಅರ್ಧಶತಕ (62 ರನ್) ಬಾರಿಸಿದ್ದರು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ಮಯಂಕ್‌ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆಡಿದರು. ಆ ಮೂಲಕ ದೀರ್ಘಕಾಲದ ವರೆಗೆ ಈ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ನಾವು ವೃತ್ತಿ ಜೀವನದ ಹಲವು ಹಂತಗಳನ್ನು ದಾಟಿ ಬಂದಿದ್ದೇವೆ. ನಾವು ಪರಿಣಾಮಕಾರಿ ಪ್ರದರ್ಶನ ನೀಡಬೇಕಿತ್ತು. ಮಯಂಕ್ ಅದನ್ನು ಮಾಡಿದರು. ಮುಂದಿನ ದಿನಗಳಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡಲು ಇದು ಅವರಿಗೆ ನೆರವಾಗಬಲ್ಲದು. ಅವರು ಖಂಡಿತವಾಗಿಯೂ ತಂಡದ ಆಸ್ತಿ. ಇಂತಹ ಇನಿಂಗ್ಸ್‌ಗಳು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತವೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT