ಶನಿವಾರ, ಆಗಸ್ಟ್ 13, 2022
26 °C

ಚುಟುಕು ವಿಶ್ವಕಪ್ ಬಳಿಕ ಟಿ20, ಏಕದಿನ ಸರಣಿ; ನ್ಯೂಜಿಲೆಂಡ್‌ಗೆ ತೆರಳಲಿದೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್‌: ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಮುಕ್ತಾಯದ ಬಳಿಕ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ತಂಡ ಭಾರತದ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಚುಟುಕು ಕ್ರಿಕೆಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ ಎಂದು 'ನ್ಯೂಜಿಲೆಂಡ್‌ ಕ್ರಿಕೆಟ್‌' ಮಂಗಳವಾರ ತಿಳಿಸಿದೆ.

ಭಾರತ, ನವೆಂಬರ್‌ 18 ರಿಂದ 30ರ ವರೆಗೆ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ನಂತರ ಭಾರತದಲ್ಲಿ ಕ್ರಿಕೆಟ್ ಆಡಲು ನ್ಯೂಜಿಲೆಂಡ್‌ ತಂಡ ಮುಂದಿನ ವರ್ಷ ಜನವರಿಯಲ್ಲಿ ಭಾರತಕ್ಕೆ ಬರಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ನ್ಯೂಜಿಲೆಂಡ್‌ನಲ್ಲಿ ಭಾರತದ ಸೆಣಸಾಟ
ನವೆಂಬರ್‌ 18: ಮೊದಲ ಟಿ20 ಪಂದ್ಯ – ವೆಲ್ಲಿಂಗ್ಟನ್‌
ನವೆಂಬರ್‌ 20: ಎರಡನೇ ಟಿ20 ಪಂದ್ಯ – ಮೌಂಟ್‌ ಮಾಂಗನೂಯಿ
ನವೆಂಬರ್‌ 22: ಮೂರನೇ ಟಿ20 ಪಂದ್ಯ – ನೇಪಿಯರ್‌

ನವೆಂಬರ್‌ 25: ಮೊದಲ ಏಕದಿನ ಪಂದ್ಯ – ಆಕ್ಲೆಂಡ್‌
ನವೆಂಬರ್‌ 27: ಎರಡನೇ ಏಕದಿನ ಪಂದ್ಯ – ಹ್ಯಾಮಿಲ್ಟನ್‌
ನವೆಂಬರ್‌ 30: ಮೂರನೇ ಏಕದಿನ ಪಂದ್ಯ – ಕ್ರೈಸ್ಟ್‌ಚರ್ಚ್‌

ಸದ್ಯ ಇಂಗ್ಲೆಂಡ್‌ ಪ್ರವಾಸ
ಭಾರತ ತಂಡ ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿದೆ. ಉಭಯ ತಂಡಗಳು ಒಂದು ಟೆಸ್ಟ್‌, ತಲಾ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿವೆ.

ಭಾರತ ಹಾಗೂ ಇಂಗ್ಲೆಂಡ್‌, ಕಳೆದ ವರ್ಷ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಕೋವಿಡ್‌ನಿಂದಾಗಿ ಕೊನೇ ಪಂದ್ಯ ರದ್ದಾಗಿತ್ತು. ಆ ಪಂದ್ಯವನ್ನು ಮರುನಿಗದಿ ಮಾಡಲಾಗಿದ್ದು, ಜುಲೈ ಒಂದರಿಂದ ಆರಂಭವಾಗಲಿದೆ. ನಂತರ ಟಿ20 (ಜುಲೈ 7–10) ಹಾಗೂ ಏಕದಿನ (ಜುಲೈ 12–17ರ ವರೆಗೆ) ನಡೆಯಲಿವೆ.

ಇದಾದ ಬಳಿಕ ಭಾರತ ತಂಡ ವೆಸ್ಟ್‌ ಇಂಡೀಸ್‌ಗೆ ಹಾರಲಿದ್ದು, ಜುಲೈ 22ರಿಂದ ಆಗಸ್ಟ್‌ 7ರ ವರೆಗೆ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನಾಡಲಿದೆ.

ಅಕ್ಟೋಬರ್‌ 16ರಿಂದ 13ರ ವರೆಗೆ ಟಿ20 ವಿಶ್ವಕಪ್‌ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು