ಭಾನುವಾರ, ಅಕ್ಟೋಬರ್ 20, 2019
28 °C
ಟೆಸ್ಟ್‌ ಕ್ರಿಕೆಟ್‌

ಭಾರತದ ಬೌಲರ್‌ಗಳ ದಾಳಿಗೆ ನಲುಗಿದ ಹರಿಣಗಳು

Published:
Updated:
 ವಿಕೆಟ್‌ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು

ಪುಣೆ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ತಂಡದ ಎದುರಾಗಿದೆ. 200ರನ್‌ ಗಡಿ ದಾಟುವ ಮುನ್ನವೇ 8 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ಶುಕ್ರವಾರ ಭಾರತ 5 ವಿಕೆಟ್‌ಗಳಿಗೆ 601 ರನ್ ಗಳಿಸಿದ್ದಾಗ ಡಿಕ್ಲೇರ್ಡ್‌ ಮಾಡಿಕೊಂಡಿತು. ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 36 ರನ್‌ ಗಳಿಸುವಷ್ಟರಲ್ಲೇ ಮೂರು ವಿಕೆಟ್‌ ಕಳೆದುಕೊಂಡಿತ್ತು. ಶನಿವಾರ ಸಹ ಆಟಗಾರರು ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲದೆ ಪೆವಿಲಿಯನ್‌ಗೆ ಮರಳಿದರು. ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಗೆ 212 ರನ್‌ ಗಳಿಸಿದೆ. 

ಭಾರತದ ಪರ ಮೊಹಮ್ಮದ್‌ ಶಮಿ(38ಕ್ಕೆ 2 ವಿಕೆಟ್) ಮತ್ತು ಆರ್‌.ಅಶ್ವಿನ್‌(49ಕ್ಕೆ 2 ವಿಕೆಟ್‌) ಜೋಡಿಯ ಬೌಲಿಂಗ್‌ ದಕ್ಷಿಣ ಆಫ್ರಿಕಾ ಆಟಗಾರರನ್ನು ನಿಯಂತ್ರಿಸಲು ಸಫಲವಾಯಿತು. ರವೀಂದ್ರ ಜಡೇಜಾ ಸಹ ಒಂದು ವಿಕೆಟ್‌ ಕಬಳಿಸಿದರು. ಶುಕ್ರವಾರ 2 ವಿಕೆಟ್‌ ಪಡೆದಿದ್ದ ಉಮೇಶ್‌ ಯಾದವ್‌ ಇಂದು ಮತ್ತೊಂದು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. 

ಇದನ್ನೂ ಓದಿ: ಫ್ರೀಡಂ ಟೆಸ್ಟ್ ಸರಣಿ: ತ್ರಿಶತಕದ ಅವಕಾಶ ಕೈಬಿಟ್ಟ ವಿರಾಟ್

ದಕ್ಷಿಣ ಆಫ್ರಿಕಾ ಪರ ಫಾಫ್‌ ಡುಪ್ಲೆಸಿ ಗಳಿಸಿದ 64 ರನ್‌ ಅತ್ಯಧಿಕ. ಉಳಿದಂತೆ ಕ್ವಿಂಟನ್‌ ಡಿ ಕಾಕ್ 31, ತಿಯಾನಿಸ್‌ ಬ್ರಯನ್‌ 30 ಹಾಗೂ ಕೇಶವ್‌ ಮಹಾರಾಜ್‌ 31 ರನ್‌ ದಾಖಲಿಸಿದ್ದಾರೆ. 

ಶುಕ್ರವಾರ ಸಂಜೆ 254 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ (91 ರನ್‌) ಔಟ್‌ ಆಗುತ್ತಿದ್ದಂತೆ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡರು. 

Post Comments (+)