ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಪಾಠ ಕಲಿಸುವ ಟೆಸ್ಟ್‌ ಕ್ರಿಕೆಟ್‌

ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೇಳಿಕೆ
Last Updated 23 ಜೂನ್ 2020, 8:21 IST
ಅಕ್ಷರ ಗಾತ್ರ

ನವದೆಹಲಿ: ‘ಟೆಸ್ಟ್‌ ಕ್ರಿಕೆಟ್,‌ ಬದುಕಿನ ಪಾಠವನ್ನು ಕಲಿಸುತ್ತದೆ. ಅದಕ್ಕಿಂತ ಸವಾಲಿನ ಮಾದರಿ ಮತ್ತೊಂದಿಲ್ಲ’ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೇಳಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ‘ಓಪನ್‌ ನೆಟ್ಸ್‌’ ಆನ್‌ಲೈನ್‌ ಕಾರ್ಯಕ್ರಮದಲ್ಲಿಭಾರತದ ಕ್ರಿಕೆಟಿಗ ಮಯಂಕ್‌ ಅಗರವಾಲ್‌ ಜೊತೆ ಮಾತನಾಡಿರುವ ಗೇಲ್‌ ‘ ಐದು ದಿನಗಳ ಕಾಲ ಆಡುವುದು ತಮಾಷೆಯ ಮಾತಲ್ಲ. ಟೆಸ್ಟ್‌ ಮಾದರಿಯಿಂದ ಶಿಸ್ತು ಮತ್ತು ಸಂಯಮದ ಪಾಠ ಕಲಿಯಬಹುದು. ಜೀವನದಲ್ಲೂ ಇವುಗಳನ್ನು ಅಳವಡಿಸಿಕೊಳ್ಳಬಹುದು’ ಎಂದಿದ್ದಾರೆ.

‘ಸಂಕಷ್ಟದ ಪರಿಸ್ಥಿತಿಯನ್ನು ಮೀರಿ ನಿಲ್ಲುವುದು ಹೇಗೆ ಎಂಬುದನ್ನೂ ಟೆಸ್ಟ್‌‌ ಕ್ರಿಕೆಟ್‌ ಹೇಳಿಕೊಡುತ್ತದೆ. ತಮ್ಮಲ್ಲಿರುವ ಕೌಶಲಗಳನ್ನು ಪರೀಕ್ಷಿಸಿಕೊಳ್ಳಲು ಯುವ ಆಟಗಾರರಿಗೆ ಈ ಮಾದರಿಯು ಸಹಕಾರಿಯಾಗಿದೆ. ಎಲ್ಲರೂ ತಾವು ಮಾಡುವ ಕೆಲಸದ ಬಗ್ಗೆ ಬದ್ಧತೆ ಹಾಗೂ ಒಲವು ಬೆಳೆಸಿಕೊಳ್ಳಬೇಕು’ ಎಂದು 40 ವರ್ಷ ವಯಸ್ಸಿನ ಆಟಗಾರ ಹೇಳಿದ್ದಾರೆ.

‘ಯಾವುದೂ ಅಸಾಧ್ಯವಲ್ಲ. ಒಂದು ಅವಕಾಶ ಕೈತಪ್ಪಿದರೆ ಮತ್ತೊಂದು ಅವಕಾಶ ಖಂಡಿತವಾಗಿಯೂ ನಮ್ಮನ್ನು ಅರಸಿ ಬರುತ್ತದೆ. ಅದಕ್ಕಾಗಿ ಕಾಯಬೇಕು. ಕಷ್ಟದ ದಿನಗಳಲ್ಲಿ ಹತಾಶರಾಗದೆ ಸವಾಲುಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT