ಗುರುವಾರ , ಆಗಸ್ಟ್ 22, 2019
21 °C

ಟ್ವೆಂಟಿ–20 ಕ್ರಿಕೆಟ್‌: ದಾಖಲೆ ಬರೆದ ಥಾಯ್ಲೆಂಡ್‌ ಮಹಿಳಾ ತಂಡ

Published:
Updated:

ದುಬೈ (‍‍ಪಿಟಿಐ): ಥಾಯ್ಲೆಂಡ್ ಮಹಿಳಾ ಕ್ರಿಕೆಟ್ ತಂಡದವರು ಟ್ವೆಂಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಭಾನುವಾರ ದಾಖಲೆ ಬರೆದರು. ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಚತುಷ್ಕೋನ ಸರಣಿಯ ಐದನೇ ಪಂದ್ಯ ಗೆಲ್ಲುವ ಮೂಲಕ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸತತ 17 ಪಂದ್ಯಗಳನ್ನು ಗೆದ್ದ ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡರು.

ಭಾನುವಾರದ ಪಂದ್ಯದಲ್ಲಿ ಆತಿಥೇಯ ತಂಡವನ್ನು 54 ರನ್‌ಗಳಿಗೆ ಉರುಳಿಸಿದ ಥಾಯ್ಲೆಂಡ್ ಎಂಟು ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಇತರ ಎರಡು ತಂಡಗಳು.

2014 ಮತ್ತು 2015ರ ಅವಧಿಯಲ್ಲಿ ಸತತ 16 ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ಮಹಿಳೆಯರು ದಾಖಲೆ ಮಾಡಿದ್ದರು. ಇಂಗ್ಲೆಂಡ್‌, ಜಿಂಬಾಬ್ವೆ (14) ಮತ್ತು ನ್ಯೂಜಿಲೆಂಡ್ (12) ಸತತ 10ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿವೆ. ಆಸ್ಟ್ರೇಲಿಯಾ ಕಳೆದ ವರ್ಷ ಸತತ 12 ಪಂದ್ಯಗಳನ್ನು ಗೆದ್ದು ಎರಡು ಬಾರಿ 10ಕ್ಕೂ ಹೆಚ್ಚು ಪಂದ್ಯಗಳ ಸಾಧನೆ ಮಾಡಿದೆ. 

Post Comments (+)