ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೀಲ್‌ ಧೋನಿ‘ ಸುಶಾಂತ್ ಸಿಂಗ್ ರಜಪೂತ್ ಕ್ರಿಕೆಟ್ ಪ್ರೀತಿ...

Last Updated 14 ಜೂನ್ 2020, 12:15 IST
ಅಕ್ಷರ ಗಾತ್ರ

ನವದೆಹಲಿ: ’ನಾನು ಕ್ರಿಕೆಟ್ ಆಡುವುದನ್ನು ನೋಡಿದ್ದ ಮಹೇಂದ್ರಸಿಂಗ್ ಧೋನಿಯವರು ನೀನು ಅರಾಮಾಗಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬಲ್ಲೆ ಅಂದಿದ್ದರು‘–

ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಕೆಲವು ತಿಂಗಳುಗಳ ಹಿಂದೆ ತಮ್ಮ ‘ಚಿಚೋರೆ‘ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದರು. ಆ ಚಿತ್ರದ ಕೊನೆಯ ದೃಶ್ಯವು ಕ್ರಿಕೆಟ್ ಆಧಾರಿತವಾಗಿತ್ತು.

ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಜೀವನದ ಕುರಿತ ’ಎಂ.ಎಸ್. ಧೋನಿ ‘ಅನ್‌ಟೋಲ್ಡ್ ಸ್ಟೋರಿ‘ ಚಿತ್ರದಲ್ಲಿ ಸುಶಾಂತ್ ಧೋನಿಯ ಪಾತ್ರವನ್ನು ನಿರ್ವಹಿಸಿದ್ದರು.

ಸುಶಾಂತ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಎಂದರೆ ಪಂಚಪ್ರಾಣ. ಆದ್ದರಿಂದ ಅವರ ಚಿತ್ರಗಳಲ್ಲಿಯೂ ಕ್ರಿಕೆಟ್‌ ಕುರಿತ ದೃಶ್ಯಗಳು ಇರುತ್ತಿದ್ದದ್ದು ಸಹಜವಾಗಿತ್ತು.

’ಸುಶಾಂತ್ ಭಯ್ಯಾ (ಅಣ್ಣ) ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ನಂಬಕೆಯೇ ಬರುತ್ತಿಲ್ಲ. ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಅವರೊಂದಿಗೆ ಕ್ರಿಕೆಟ್ ಆಡುತ್ತಿದ್ದೆವು. ನಿಜವಾಗಿ ಒಳ್ಳೆಯ ಆಟಗಾರ ಮತ್ತು ಅದಕ್ಕಿಂತಲೂ ಉತ್ತಮ ವ್ಯಕ್ತಿ. ಕಾಯ್ ಪೋ ಚೆ ಚಿತ್ರದಲ್ಲಿ ಅವರು ನನ್ನ ಕೋಚ್ ಆಗಿದ್ದರು‘ ಎಂದು ಸುಶಾಂತ್ ಅವರ ಸಹನಟ ದಿಗ್ವಿಜಯ್ ದೇಶಮುಖ ನೆನಪಿಸಿಕೊಂಡಿ್ದ್ದಾರೆ.

ದಿಗ್ವಿಜಯ್ ಕ್ರಿಕೆಟಿಗರೂ ಹೌದು. ಅವರು ಈ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

’ನನ್ನ ಭವಿಷ್ಯದ ಗುರಿ ಏನು ಎಂದು ಸುಶಾಂತ್ ಕೇಳಿದ್ದರು. ಆಗ ನಾನು ಚಿತ್ರರಂಗಕ್ಕೆ ಆಕಸ್ಮಿಕವಾಗಿ ಬಂದಿದ್ದೇನೆ. ಕ್ರಿಕಟಿಗನಾಗುವುದು ಗುರಿ. ದೊಡ್ಡ ಆಟಗಾರನಾದ ನಂತರ ನಿಮ್ಮ ಬಳಿ ಬರುತ್ತೇನೆ ಅಂದಿದ್ದೆ. ಐಪಿಎಲ್‌ನಲ್ಲಿ ಆಡುವ ಅವಕಾಶವೂ ಈ ಸಲ ಸಿಕ್ಕಿದೆ. ಟೂರ್ನಿ ಶುರುವಾದರೆ ಅವರ ಬಳಿ ಹೋಗಿ ಭೇಟಿಯಾಗಬೇಕೆಂದುಕೊಂಡಿದ್ದೆ. ಆದರೆ ಇನ್ನು ಮುಂದೆ ಐಪಿಎಲ್ ನಡೆಯಬಹುದು. ಆದರೆ ಸುಶಾಂತ್‌‘ ಎಂದು ದಿಗ್ವಿಜಯ್ ಗದ್ಗದಿತರಾದರು.

ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಮಹೇಂದ್ರಸಿಂಗ್ ಧೋನಿ ಅವರ ವೃತ್ತಿಜೀವನದ ಏಳು–ಬೀಳುಗಳನ್ನು ಮನಮುಟ್ಟುವಂತೆ ಸುಶಾಂತ್ ಅಭಿನಯಿಸಿದ್ದರು. ಆ ಪಾತ್ರಕ್ಕಾಗಿ ಅವರು ತಿಂಗಳುಗಟ್ಟಲೇ ಧೋನಿ ಮತ್ತು ಅವರ ತರಬೇತುದಾರರೊಂದಿಗೆ ಅಭ್ಯಾಸ ಮಾಡಿದ್ದರು. ಆ ಚಿತ್ರವು ಸೂಪರ್ ಹಿಟ್ ಕೂಡ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT