ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಇಲೆವನ್‌ಗೆ ದಿನದ ‘ಶ್ರೇಯಸ್ಸು’

ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ವೈಶಾಖ ವಿಜಯಕುಮಾರ್‌ಗೆ ಆರು ವಿಕೆಟ್‌
Last Updated 23 ಜುಲೈ 2019, 1:26 IST
ಅಕ್ಷರ ಗಾತ್ರ

ಬೆಂಗಳೂರು: ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್ 105; 183ಎ, 14ಬೌಂ, 1ಸಿ) ಮತ್ತು ಡೇವಿಡ್‌ ಮಥಿಯಾಸ್‌ (ಬ್ಯಾಟಿಂಗ್‌ 72) ಸೋಮವಾರ ಕೆಎಸ್‌ಸಿಎ ಇಲೆವನ್‌ ತಂಡಕ್ಕೆ ಆಪತ್ಭಾಂಧವರಾದರು.

ಇವರ ಅಮೋಘ ಜೊತೆಯಾಟದ ಬಲದಿಂದ ತಂಡವು ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಬಂಗಾಳ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ದಿನದ ಗೌರವ ಪಡೆಯಿತು.

ರಾಜೇಂದ್ರ ಸಿಂಗ್‌ಜೀ ಇನ್‌ಸ್ಟಿಟ್ಯೂಟ್‌ ಮೈದಾನದಲ್ಲಿ (ಆರ್‌ಎಸ್‌ಐ) ಮೊದಲು ಬ್ಯಾಟ್‌ ಮಾಡಿದ ಕೆಎಸ್‌ಸಿಎ ಇಲೆವನ್‌ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 269ರನ್‌ ದಾಖಲಿಸಿದೆ.

ತಂಡವು 90ರನ್‌ಗೆ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜೊತೆಯಾದ ಶ್ರೇಯಸ್ ಮತ್ತು ಡೇವಿಡ್‌, ಜಿಗುಟು ಆಟದ ಮೂಲಕ ಬಂಗಾಳ ಬೌಲರ್‌ಗಳನ್ನು ಕಾಡಿದರು. ಮುರಿಯದ ಏಳನೇ ವಿಕೆಟ್‌ ಪಾಲುದಾರಿಕೆಯಲ್ಲಿ 308 ಎಸೆತಗಳಲ್ಲಿ 179ರನ್‌ ಕಲೆಹಾಕಿದರು.

79ರನ್‌ಗಳಿಗೆ ಅಲೌಟ್‌: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಇಲೆವನ್‌ ಎದುರಿನ ಪಂದ್ಯದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ ತಂಡವು ಕೇವಲ 79ರನ್‌ಗಳಿಗೆ ಆಲೌಟ್‌ ಆಯಿತು.

ವೈಶಾಖ್‌ಗೆ ಆರು ವಿಕೆಟ್‌: ಮೈಸೂರಿನ ಎಸ್‌.ಡಿ.ಆರ್‌.ಎನ್‌.ಡಬ್ಲ್ಯು.ಮೈದಾನದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ಎದುರಿನ ಪಂದ್ಯದಲ್ಲಿ ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ 41.5 ಓವರ್‌ಗಳಲ್ಲಿ 141ರನ್‌ಗಳಿಗೆ ಹೋರಾಟ ಮುಗಿಸಿತು. ಅಧ್ಯಕ್ಷರ ಇಲೆವನ್‌ ತಂಡದ ವೈಶಾಖ ವಿಜಯಕುಮಾರ್‌ 23ರನ್‌ ನೀಡಿ 6 ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಇಲೆವನ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 269 (ಆರ್‌.ಸಮರ್ಥ್‌ 33, ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ 105, ಡೇವಿಡ್‌ ಮಥಿಯಾಸ್‌ ಬ್ಯಾಟಿಂಗ್‌ 72; ಮೊಹಮ್ಮದ್‌ ಕೈಫ್‌ 47ಕ್ಕೆ2, ಸೂರಜ್‌ ಸಿಂಧು ಜೈಸ್ವಾಲ್‌ 51ಕ್ಕೆ2).

ಕಿಣಿ ಸ್ಪೋರ್ಟ್ಸ್‌ ಅರೇನಾ: ಮುಂಬೈ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 310 (ಆಕರ್ಷಿತ್‌ ಗೋಮೆಲ್‌ ಬ್ಯಾಟಿಂಗ್‌ 66, ಏಕನಾಥ್‌ ಕೇರ್ಕರ್‌ 99, ರೌನಕ್‌ ಶರ್ಮಾ ಬ್ಯಾಟಿಂಗ್‌ 43). (ಕೆಎಸ್‌ಸಿಎ ಕೋಲ್ಟ್ಸ್‌ ಎದುರಿನ ಪಂದ್ಯ).

ಬಿಜಿಎಸ್‌ ಮೈದಾನ: ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ: 72.3 ಓವರ್‌ಗಳಲ್ಲಿ 208 (ಸುಮಿತ್‌ ವರ್ಮಾ 44, ಏಕಾಂತ್‌ ಸೇನ್‌ 66, ಅಂಕುಶ್‌ ಬೇಡಿ 49; ಕೆ.ಎಂ.ಆಸಿಫ್‌ 32ಕ್ಕೆ2, ಆನಂದ್‌ ಜೋಸೆಫ್‌ 29ಕ್ಕೆ3, ಸಿಜೊಮನ್‌ ಜೋಸೆಫ್‌ 29ಕ್ಕೆ4).

ಕೇರಳ ಕ್ರಿಕೆಟ್‌ ಸಂಸ್ಥೆ: 15 ಓವರ್‌ಗಳಲ್ಲಿ 1 ವಿಕೆಟ್‌ಗೆ 38 (ರಾಬಿನ್‌ ಉತ್ತಪ್ಪ ಬ್ಯಾಟಿಂಗ್‌ 25).

ಎಂ.ಚಿನ್ನಸ್ವಾಮಿ ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 41 ಓವರ್‌ಗಳಲ್ಲಿ 79 (ಶೋಹಿದುಲ್‌ ಇಸ್ಲಾಂ 20ಕ್ಕೆ5, ಎಬದೋತ್‌ ಹುಸೇನ್‌ 36ಕ್ಕೆ2, ಆರಿಫುಲ್ ಹಕ್‌ 22ಕ್ಕೆ3).

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ: 44 ಓವರ್‌ಗಳಲ್ಲಿ 3 ವಿಕೆಟ್‌ಗೆ 135 (ಶಾದಮನ್‌ ಇಸ್ಲಾಂ 59).

ಜಸ್ಟ್‌ ಕ್ರಿಕೆಟ್‌ ಮೈದಾನ: ಟೀಮ್‌ ರಾಜಸ್ಥಾನ: 87 ಓವರ್‌ಗಳಲ್ಲಿ 9 ವಿಕೆಟ್‌ಗೆ 238 (ಮಹಿಪಾಲ್‌ ಲೊಮರೊರ್‌ 46, ಅಶೋಕ್‌ ಮನೇರಿಯಾ 67, ಎಸ್‌.ಶುಭಂ ಬ್ಯಾಟಿಂಗ್‌ 55; ವೀರಪ್ರತಾಪ್‌ ಸಿಂಗ್‌ 41ಕ್ಕೆ4, ಅಜಯ್‌ ಮಂಡಲ್‌ 54ಕ್ಕೆ2). (ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ ವಿರುದ್ಧದ ಪಂದ್ಯ).

ಆಲೂರಿನ ಮೂರನೇ ಮೈದಾನ: ಡಿ.ವೈ.ಪಾಟೀಲ ಅಕಾಡೆಮಿ: 90 ಓವರ್‌ಗಳಲ್ಲಿ 5 ವಿಕೆಟ್‌ಗೆ 387 (ಮನನ್‌ ವೊಹ್ರಾ ಬ್ಯಾಟಿಂಗ್‌ 199, ಸರ್ಫರಾಜ್‌ ಖಾನ್‌ 105). (ವಿದರ್ಭ ಕ್ರಿಕೆಟ್‌ ಸಂಸ್ಥೆ ಎದುರಿನ ಪಂದ್ಯ).

ಮೈಸೂರಿನಲ್ಲಿ ನಡೆದ ಪಂದ್ಯಗಳು: ಎಸ್‌.ಡಿ.ಆರ್‌.ಎನ್‌.ಡಬ್ಲ್ಯು. ಮೈದಾನ: ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ: 41.5 ಓವರ್‌ಗಳಲ್ಲಿ 141 (ಆಯುಷ್‌ ಭಾರದ್ವಾಜ್‌ 62; ವೈಶಾಖ ವಿಜಯಕುಮಾರ್‌ 23ಕ್ಕೆ6, ಪೃಥ್ವಿರಾಜ್‌ 51ಕ್ಕೆ3).

ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: 12 ಓವರ್‌ಗಳಲ್ಲಿ 1 ವಿಕೆಟ್‌ಗೆ 28.

ಎಸ್‌ಜೆಸಿಇ ಮೈದಾನ: ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ: 63 ಓವರ್‌ಗಳಲ್ಲಿ 7 ವಿಕೆಟ್‌ಗೆ 143 (ರಜತ್‌ ಪಾಟೀದಾರ್‌ 84; ಕೆ.ವಿ.ಶಶಿಕಾಂತ್‌ 49ಕ್ಕೆ3, ಗಿರಿನಾಥ್‌ ರೆಡ್ಡಿ 60ಕ್ಕೆ3). (ಆಂಧ್ರ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT