ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಛತ್ತೀಸಗಡ ತಂಡ

ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿ: ಕರಣ್ ಶಿಂಧೆ ಅರ್ಧ ಶತಕ; ಶಶಿಕಾಂತ್‌ಗೆ 3 ವಿಕೆಟ್
Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ದಿನ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದ ಛತ್ತೀಸಗಡ ಕ್ರಿಕೆಟ್ ಸಂಘ ಎರಡನೇ ದಿನ ಮಂಕಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಛತ್ತೀಸಗಡ ತಂಡ ಆಂಧ್ರ ಕ್ರಿಕೆಟ್‌ ಸಂಸ್ಥೆ ತಂಡದ ಎದುರು ಸಂಕಷ್ಟಕ್ಕೆ ಎದುರಾಗಿದೆ.

ಆಂಧ್ರ ತಂಡದ ಮೊದಲ ಇನಿಂಗ್ಸ್ ಮೊತ್ತವಾದ 313 ರನ್‌ಗಳಿಗೆ ಉತ್ತರವಾಗಿ ಭಾನುವಾರ ದಿನದಾಟದ ಮುಕ್ತಾಯಕ್ಕೆ ಛತ್ತೀಸಗಡ 131 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದೆ. ತಂಡ ಇನ್ನೂ 182 ರನ್‌ಗಳ ಹಿನ್ನಡೆಯಲ್ಲಿದೆ.

ಶನಿವಾರ 5ಕ್ಕೆ 215 ರನ್ ಗಳಿಸಿದ್ದ ಆಂಧ್ರದ ಇನಿಂಗ್ಸ್‌ಗೆ ಭಾನುವಾರ ಮಧ್ಯಮ ಕ್ರಮಾಂಕದ ಕರಣ್ ಶಿಂಧೆ (52; 133 ಎಸೆತ, 8 ಬೌಂಡರಿ) ಮತ್ತು ಬಾಲಂಗೋಚಿ ಜಿ.ಮನೀಷ್ (42; 95ಎ, 1 ಸಿಕ್ಸರ್‌, 4 ಬೌಂಡರಿ) ಬಲ ತುಂಬಿದರು. ಇವರ ಅಮೋಘ ಆಟದ ಬಲದಿಂದ ತಂಡ ಉತ್ತಮ ಮೊತ್ತ ಪೇರಿಸಿತು.

ಬ್ಯಾಟಿಂಗ್ ಆರಂಭಿಸಿದ ಛತ್ತೀಸಗಡ ಏಳು ರನ್‌ ಗಳಿಸುಷ್ಟರಲ್ಲಿ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಆದರೆ ಅಶುತೋಷ್ ಸಿಂಗ್‌ ಮತ್ತು ಅಮನ್‌ದೀಪ್ ಖಾರೆ ಮೂರನೇ ವಿಕೆಟ್‌ಗೆ 62 ರನ್‌ ಜೋಡಿಸಿದರು. ಈ ಜೋಡಿಯ ಪತನದ ನಂತರ ಆಂಧ್ರ ಬೌಲರ್‌ಗಳು ಮತ್ತೆ ಆಧಿಪತ್ಯ ಸ್ಥಾಪಿಸಿದರು. ಆರನೇ ಕ್ರಮಾಂಕದ ಅಜಯ್ ಮಂಡಲ್ ಮಾತ್ರ ಸ್ವಲ್ಪ ಪ್ರತಿರೋಧ ಒಡ್ಡಿದರು.

ಸಂಕ್ಷಿಪ್ತ ಸ್ಕೋರು: ಆಂಧ್ರ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌ (ಶನಿವಾರದ ಅಂತ್ಯಕ್ಕೆ 86 ಓವರ್‌ಗಳಲ್ಲಿ 5ಕ್ಕೆ 215): 117.1 ಓವರ್‌ಗಳಲ್ಲಿ 313 (ಕರಣ್ ಶಿಂಧೆ 52, ಜಿ.ಮನೀಷ್‌ 42; ಪಂಕಜ್ ರಾವ್ 31ಕ್ಕೆ1, ವೀರಪ್ರತಾಪ್ ಸಿಂಗ್ 81ಕ್ಕೆ1, ಅಜಯ್‌ ಮಂಡಲ್ 65ಕ್ಕೆ4, ಪುನೀತ್ ದಾತೆ 35ಕ್ಕೆ3, ಬಿನ್ನಿ ಸ್ಯಾಮ್ಯುಯೆಲ್ 38ಕ್ಕೆ1); ಛತ್ತೀಸಗಡ ಕ್ರಿಕೆಟ್ ಸಂಘ, ಮೊದಲ ಇನಿಂಗ್ಸ್‌: 37 ಓವರ್‌ಗಳಲ್ಲಿ 7ಕ್ಕೆ131 (ಅಶುತೋಷ್ ಸಿಂಗ್ 31, ಅಮನ್‌ದೀಪ್ ಖಾರೆ 45, ಅಜಯ್ ಮಂಡಲ್ 21, ಮನೋಜ್ ಸಿಂಗ್ ಔಟಾಗದೆ 13, ವೀರಪ್ರತಾಪ ಸಿಂಗ್ ಔಟಾಗದೆ 0; ಕೆ.ವಿ.ಶಶಿಕಾಂತ್‌ 29ಕ್ಕೆ3, ಸಿ.ಎಚ್‌.ಸ್ಟೀಫನ್ 46ಕ್ಕೆ2, ಗಿರಿನಾಥ್ ರೆಡ್ಡಿ 40ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT