ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ 2018: ಶ್ರೀದೇವಿ, ಶಶಿ ಕಪೂರ್‌ಗೆ ನಮನ; ಕೊಕೊ ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ

Last Updated 5 ಮಾರ್ಚ್ 2018, 11:46 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಸೋಮವಾರ ನಡೆದ 90ನೇ ಅಕಾಡೆಮಿ(ಆಸ್ಕರ್‌) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್‌ ನಟರಾದ ದಿ.ಶ್ರೀದೇವಿ ಹಾಗೂ ದಿ.ಶಶಿ ಕಪೂರ್‌ ಅವರನ್ನು ಸ್ಮರಿಸಲಾಯಿತು.

2018ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ನಟಿ ಶ್ರೀದೇವಿ ಮತ್ತು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ಶಶಿ ಕಪೂರ್‌ ಅವರನ್ನು ಸ್ಮರಿಸುವ ಮೂಲಕ ನಮನ ಸಲ್ಲಿಸಲಾಯಿತು.

ಅತ್ಯುತ್ತಮ ಚಿತ್ರ ಸೇರಿ ನಾಲ್ಕು ವಿಭಾಗಗಳಲ್ಲಿ ದಿ ಶೇಪ್‌ ಆಫ್‌ ವಾಟರ್‌ ಪ್ರಶಸ್ತಿ ಗಳಿಸಿದೆ. ಆ್ಯನಿಮೇಟೆಡ್‌ ಸಿನಿಮಾ ವಿಭಾಗದಲ್ಲಿ 'ಕೊಕೊ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆಯಿತು.

ಡಾರ್ಕೆಸ್ಟ್‌ ಹವರ್‌ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ಗ್ಯಾರಿ ಓಲ್ಡ್‌ಮ್ಯಾನ್‌ ಅತ್ಯುತ್ತಮ ನಟ ಹಾಗೂ ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಟ್‌ ಎಬ್ಬಿಂಗ್‌, ಮಿಸೋರಿ ಚಿತ್ರದಲ್ಲಿನ ನಟನೆಗೆ ಫ್ರಾನ್ಸೆಸ್‌ ಮೆಕ್‌ಡಾರ್ಮಂಡ್‌ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2018ರ ಆಸ್ಕರ್‌ ಪ್ರಶಸ್ತಿ ಪಟ್ಟಿ:

* ಅತ್ಯುತ್ತಮ ಚಿತ್ರ– ದಿ ಶೇಪ್‌ ಆಫ್‌ ವಾಟರ್‌
* ಅತ್ಯುತ್ತಮ ನಿರ್ದೇಶಕ– ಗಿಲೆರ್ಮೊ ಡೆಲ್‌ ಟೋರೊ(ಚಿತ್ರ: ದಿ ಶೇಪ್‌ ಆಫ್‌ ವಾಟರ್‌)
* ಅತ್ಯುತ್ತಮ ನಟ– ಗ್ಯಾರಿ ಓಲ್ಡ್‌ಮ್ಯಾನ್‌(ಚಿತ್ರ: ಡಾರ್ಕೆಸ್ಟ್‌ ಹವರ್‌)
* ಅತ್ಯುತ್ತಮ ನಟಿ–ಫ್ರಾನ್ಸೆಸ್‌ ಮೆಕ್‌ಡಾರ್ಮಂಡ್‌ (ಚಿತ್ರ: ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಟ್‌ ಎಬ್ಬಿಂಗ್‌, ಮಿಸೋರಿ)
* ಅತ್ಯುತ್ತಮ ಪೋಷಕ ನಟಿ– ಅಲಿಸನ್‌ ಜನ್ನಿ(ಚಿತ್ರ: ಐ, ಟೋನ್ಯಾ)
* ಅತ್ಯುತ್ತಮ ಪೋಷಕ ನಟ– ಸ್ಯಾಮ್‌ ರಾಕ್‌ವೆಲ್‌ (ಚಿತ್ರ: ಥ್ರೀ ಬಿಲ್‌ಬೋರ್ಡ್ಸ್‌ ಔಟ್‌ಸೈಟ್‌ ಎಬ್ಬಿಂಗ್‌, ಮಿಸೋರಿ)
* ಅತ್ಯುತ್ತಮ ಚಿತ್ರಕಥೆ(ಕಥೆಯ ಅಳವಡಿಕೆ)– ಜೇಮ್ಸ್‌ ಐವರಿ(ಚಿತ್ರ: ಕಾಲ್‌ ಮಿ ಬೈ ಯುವರ್‌ ನೇಮ್‌)
* ಅತ್ಯುತ್ತಮ ಚಿತ್ರಕಥೆ(ಸ್ವಂತ ಚಿತ್ರಕಥೆ)–ಜಾರ್ಡನ್‌ ಪೀಲೆ(ಚಿತ್ರ: ಗೆಟ್ ಔಟ್‌)
* ಅತ್ಯುತ್ತಮ ಆನಿಮೇಟೆಡ್‌ ಚಿತ್ರ– ಕೊಕೊ
* ಅತ್ಯುತ್ತಮ ವಿದೇಶಿ ಚಿತ್ರ– ಎ ಫಂಟಾಸ್ಟಿಕ್‌ ವುಮೆನ್‌(ಚಿಲಿ)
* ಅತ್ಯುತ್ತಮ ಸಾಕ್ಷ್ಯಚಿತ್ರ– ಇಕಾರಸ್‌
* ಅತ್ಯುತ್ತಮ ಛಾಯಾಗ್ರಹಣ– ರೋಜರ್‌ ಎ.ಡೆಕಿನ್ಸ್‌(ಚಿತ್ರ: ಬ್ಲೇಡ್‌ ರನ್ನರ್‌ 2049)
* ಅತ್ಯುತ್ತಮ ಸಂಕಲನ– ಲೀ ಸ್ಮಿತ್‌(ಚಿತ್ರ: ಡನ್‌ಕಿರ್ಕ್‌)‌
* ಅತ್ಯುತ್ತಮ ನಿರ್ಮಾಣ ವಿನ್ಯಾಸ– ಪೌಲ್‌ ಡೆನ್‌ಹ್ಯಾಮ್‌ ಆಸ್ಟರ್‌ಬೆರ್ರಿ, ಶೇನ್‌ ವಿಯು, ಜೆಫ್‌ ಮೆಲ್ವಿನ್‌ (ಚಿತ್ರ: ದಿ ಶೇಪ್‌ ಆಫ್‌ ವಾಟರ್)
* ಅತ್ಯುತ್ತಮ ವಸ್ತ್ರ ವಿನ್ಯಾಸ– ಮಾರ್ಕ್‌ ಬ್ರಿಡ್ಜಸ್‌(ಚಿತ್ರ: ಫ್ಯಾಂಟಮ್‌ ಥ್ರೆಡ್‌)
* ಅತ್ಯುತ್ತಮ ಕೇಶವಿನ್ಯಾಸ ಮತ್ತು ಪ್ರಸಾದನ– ಕಜ್ಹಿರೊ ಸುಜಿ, ಡೇವಿಡ್‌ ಮಲಿನೌಸ್ಕಿ, ಲೂಸಿ ಸಿಬ್ಬಿಕ್‌(ಡಾರ್ಕೆಸ್ಟ್‌ ಹವರ್)
* ಅತ್ಯುತ್ತಮ ಒರಿಜಿನಲ್‌ ಸ್ಕೋರ್‌(ಸಂಗೀತ)– ಅಲೆಗ್ಸಾಂಡರ್‌ ಡೆಸ್‌ಪ್ಲಾಟ್‌(ಚಿತ್ರ: ದಿ ಶೇಪ್‌ ಆಪ್‌ ವಾಟರ್‌)
* ಅತ್ಯುತ್ತಮ ಒರಿಜಿನಲ್‌ ಸಾಂಗ್‌– ‘ರಿಮೆಂಬರ್‌ ಮಿ’(ಚಿತ್ರ: ಕೊಕೊ)
* ಅತ್ಯುತ್ತಮ ಧ್ವನಿ ಸಂಕಲನ– ರಿಚರ್ಡ್‌ ಕಿಂಗ್‌ ಮತ್ತು ಅಲೆಕ್ಸ್‌ ಗಿಬ್ಸನ್‌(ಚಿತ್ರ: ಡನ್‌ಕಿರ್ಕ್‌)
* ಅತ್ಯುತ್ತಮ ಧ್ವನಿ ಮಿಶ್ರಣ– ಮಾರ್ಕ್‌ ವಿನ್‌ಗಾರ್ಟನ್‌, ಗ್ರೆಗ್‌ ಲ್ಯಾಂಡರ್‌ಕರ್‌, ಗ್ಯಾರಿ ಎ.ರಿಜ್ಜೊ(ಚಿತ್ರ:ಡನ್‌ಕಿರ್ಕ್‌)
* ವಿಶುವಲ್‌ ಎಫೆಕ್ಟ್ಸ್‌– ಬ್ಲೇಡ್‌ ರನ್ನರ್‌ 2049(ಜಾನ್‌ ನೆಲ್ಸನ್‌, ಗರ್ಡ್‌ ನೆಫ್ಜರ್‌, ಪೌಲ್‌ ಲ್ಯಾಂಬರ್ಟ್‌, ರಿಚರ್ಡ್‌ ಆರ್‌.ಹೂವರ್‌)
* ಆ್ಯನಿಮೇಟೆಡ್‌ ಕಿರುಚಿತ್ರ– ಡಿಯರ್‌ ಬ್ಯಾಸ್ಕೆಟ್‌ಬಾಲ್‌
* ಲೈವ್‌ ಆಕ್ಷನ್‌ ಶಾರ್ಟ್‌ ಫಿಲ್ಮಂ– ದಿ ಸೈಲೆಂಟ್‌ ಚೈಲ್ಡ್‌
* ಡಾಕ್ಯುಮೆಂಟರಿ ಶಾರ್ಟ್‌ ಸಬ್ಜೆಕ್ಟ್‌– ಹೆವೆನ್‌ ಈಸ್‌ ಎ ಟ್ರಾಫಿಕ್‌ ಜ್ಯಾಮ್‌ ಆನ್‌ ದಿ 405

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT