ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓವರ್‌ನಲ್ಲಿ ಆರು ಸಿಕ್ಸರ್‌: ಈಗ ತಿಸಾರ ಸರದಿ

Last Updated 29 ಮಾರ್ಚ್ 2021, 12:06 IST
ಅಕ್ಷರ ಗಾತ್ರ

ಕೊಲಂಬೊ: ಆಲ್‌ರೌಂಡರ್‌ ತಿಸಾರ ಪೆರೇರ ಅವರು ಓವರ್‌ವೊಂದರಲ್ಲಿ ಆರು ಸಿಕ್ಸರ್‌ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಇದರೊಂದಿಗೆ ವೃತ್ತಿಪರ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಶ್ರೀಲಂಕಾದ ದೇಶಿ ಟೂರ್ನಿಯೊಂದರ ಪಂದ್ಯದಲ್ಲಿ 31ರ ಹರೆಯದ ಪೆರೇರ 13 ಎಸೆತಗಳಲ್ಲಿ 52 ರನ್‌ ಗಳಿಸಿದರು. ಮೇಜರ್ ಕ್ಲಬ್ಸ್ ಸೀಮಿತ ಓವರ್‌ಗಳ ಲಿಸ್ಟ್ ‘ಎ‘ ಟೂರ್ನಿಯಲ್ಲಿ ಶ್ರೀಲಂಕಾ ಆರ್ಮಿ ತಂಡದ ನಾಯಕತ್ವ ವಹಿಸಿದ್ದ ಅವರು ಬ್ಲೂಮ್‌ಫೀಲ್ಡ್ ಕ್ರಿಕೆಟ್‌ ಆ್ಯಂಡ್‌ ಅಥ್ಲೆಟಿಕ್ ಕ್ಲಬ್‌ ತಂಡದ ವಿರುದ್ಧ ಈ ಸ್ಫೋಟಕ ಇನಿಂಗ್ಸ್ ಆಡಿದರು. ಭಾನುವಾರ ಪನಗೊಡದ ಆರ್ಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು.

50 ಓವರ್‌ಗಳ ಈ ಪಂದ್ಯವನ್ನು 41 ಓವರ್‌ಗೆ ಮೊಟಕುಗೊಳಿಸಲಾಗಿತ್ತು. ಪೆರೇರ ಸಿಕ್ಸರ್‌ಗಳಿಗೆ ‘ಬಲಿ‘ಯಾದವರು ಅರೆಕಾಲಿಕ ಸ್ಪಿನ್ನರ್ ದಿಲ್ಹಾನ್‌ ಕೂರೆ.

ವೃತ್ತಿಪರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಒಂಬತ್ತನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಪೆರೇರ. ಇದಕ್ಕೂ ಮೊದಲು ಗ್ಯಾರಿ ಸೋಬರ್ಸ್‌, ರವಿಶಾಸ್ತ್ರಿ, ಹರ್ಷೆಲ್ ಗಿಬ್ಸ್, ಯುವರಾಜ್ ಸಿಂಗ್‌, ರಾಸ್‌ ವೈಟ್ಲಿ, ಹಜರತ್‌ವುಲ್ಲಾ ಜಜೈ, ಲಿಯೊ ಕಾರ್ಟರ್‌ ಹಾಗೂ ಇತ್ತೀಚೆಗೆ ಕೀರನ್ ಪೊಲಾರ್ಡ್‌ ಓವರ್‌ವೊಂದರಲ್ಲಿ ಆರು ಸಿಕ್ಸರ್ ಸಿಡಿಸಿದ್ದರು.

ಪೆರೇರ ಶ್ರೀಲಂಕಾ ಪರ ಆರು ಟೆಸ್ಟ್, 166 ಏಕದಿನ ಹಾಗೂ 64 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT