ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ನ ಮೂವರಲ್ಲಿ ಕೋವಿಡ್‌ ದೃಢ

Last Updated 25 ಜುಲೈ 2020, 6:13 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ಇಬ್ಬರು ಆಟಗಾರ್ತಿಯರು ಹಾಗೂ ಒಬ್ಬ ನೆರವು ಸಿಬ್ಬಂದಿಯಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ದಕ್ಷಿಣ ಆಫ್ರಿಕಾ ತಂಡವು ಪ್ರಸ್ತಾವಿತ ಇಂಗ್ಲೆಂಡ್‌ ಪ್ರವಾಸಕ್ಕಾಗಿ ಇದೇ 27ರಿಂದ ತರಬೇತಿ ಶಿಬಿರ ನಡೆಸಲಿದೆ. ಸೋಂಕು ದೃಢಪಟ್ಟ ಈ ಮೂವರು ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಶಿಬಿರದಿಂದ ಹಿಂದೆ ಸರಿದಿದ್ದಾರೆ.

‘ನಮ್ಮ ತಂಡದ ಒಬ್ಬ ನೆರವು ಸಿಬ್ಬಂದಿ ಹಾಗೂ ಇಬ್ಬರು ಆಟಗಾರ್ತಿಯರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಅವರು 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಲಿದ್ದು, ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಸಿಎಸ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

‘ಸೋಂಕಿಗೆ ಒಳಗಾದವರಲ್ಲಿ ರೋಗದ ಲಕ್ಷಣಗಳು ಹೆಚ್ಚಿಲ್ಲ. ನಮ್ಮ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಸೋಂಕಿತ ಆಟಗಾರ್ತಿಯರು ತರಬೇತಿ ಅಥವಾ ಆಟಕ್ಕೆ ಮರಳುವುದನ್ನು ಸಿಎಸ್‌ಎ ವೈದ್ಯಕೀಯ ಸಮಿತಿಯು ನಿರ್ಧರಿಸಲಿದೆ‘ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆಗಸ್ಟ್‌ 16ರಿಂದ ತಂಡದ ಎರಡನೇ ಶಿಬಿರವು ನಡೆಯಲಿದೆ. ಅದಕ್ಕೂ ಮುನ್ನ ಆಟಗಾರ್ತಿಯರು ಹಾಗೂ ನೆರವು ಸಿಬ್ಬಂದಿಗೆ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ನಡೆಯಲಿದೆ.

ಮುಂದಿನ ವರ್ಷ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನ ಸಿದ್ಧತೆಯ ಭಾಗವಾಗಿ ದಕ್ಷಿಣ ಆಫ್ರಿಕಾ ತಂಡ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT